Elvish Yadav: ಯೂಟ್ಯೂಬರ್ ಮೇಲೆ ಬಿಗ್‌ಬಾಸ್ ವಿನ್ನರ್ ಹಲ್ಲೆ: ಎಫ್‌ಐಆರ್
ನವದೆಹಲಿ, ಮಾರ್ಚ್ 09: 'ಬಿಗ್ ಬಾಸ್ OTT 2' ವಿಜೇತ ಹಾಗೂ ಯೂಟ್ಯೂಬರ್ ಸಹ ಆಗಿರುವ 'ಎಲ್ವಿಶ್ ಯಾದವ್' (Elvish Yadav) ಅವರು ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಎಲ್ವಿಶ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ವೈರಲ್ ಆದ ವಿಡಿಯೋದಲ್ಲಿ 'ಎಲ್ವಿಶ್ ಯಾದವ್' ಅವರು ಮತ್ತೊಬ್ಬ ಯೂಟ್ಯೂಬರ್ ಆದ ಸಾಗರ್ ಠಾಕೂರ್ ಅಲಿಯಾಸ್ ಮ್ಯಾಕ್ಸ್‌ಟರ್ನ್ ಅವರ ಮೇಲೆ ಥಳಿಸಿ ಹಲ್ಲೆ ಮಾಡಿರುವ ದೃಶ್ಯಗಳಿವೆ. ಈ ಹಿಂದೆ, ಸಾಗರ್ ತನ್ನ ವೀಡಿಯೊವೊಂದರಲ್ಲಿ ಎಲ್ವಿಶ್ ತನ್ನನ್ನು ಕೊಲ್ಲಲು 8 ಜನರ ಜೊತೆಗೆ ಬಂದಿದ್ದಾನೆ ಎಂದು ಹೇಳಿದ್ದ.

ಆ ಹಲ್ಲೆಯ ವಿಡಿಯೋ ಹೊರಬಿದ್ದಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹೀಗಾಗಿ ಎಲ್ವಿಶ್ ಯಾದವ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇದೆಲ್ಲ ಬೆಳವಣಿಗೆ ಮಧ್ಯೆ ಘಟನೆ ಕುರಿತು ಸ್ವತಃ ಎಲ್ವಿಶ್ ತಾನೆ ಮುಂದೆ ಬಂದು ತಮ್ಮ ಪರ ವಾದ ಮಂಡಿಸಿರುವ ವಿಡಿಯೋ ಹರಿದಾಡುತ್ತಿದೆ.
ಪ್ರಕರಣ ಬಗ್ಗೆ ಎಲ್ವಿಶ್ ವಾದವೇನು?
ಈ ವೀಡಿಯೊದಲ್ಲಿ, ಎಲ್ವಿಶ್ ಸುಮಾರು 8 ತಿಂಗಳುಗಳಿಂದ ಮ್ಯಾಕ್ಸ್ಟರ್ನ್ ಒಂದಲ್ಲ ಒಂದು ರೀತಿ ನನ್ನನ್ನು ಪ್ರಚೋದಿಸುತ್ತಾ ಬಂದಿದ್ದಾರೆ. ಕೆಲವು ಸಮಸ್ಯೆಗಳನ್ನು ಫೋನ್ ಮೂಲಕ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಿಲಾಯಿತು. ಇದೀಗ ಅವರು ತಾವೇ ಕೇವಲ ಬಲಿಪಶು ಎಂದು ನಾಟಕವಾಡುತ್ತಿದ್ದಾರೆ.
ನೀವು ಬೇಕಿದ್ದಲ್ಲಿ ಅವರ (ಮ್ಯಾಕ್ಸ್ಟರ್ನ್) ಟ್ವಿಟರ್ ಹ್ಯಾಂಡಲ್ ತೆರೆದು ನೋಡಿ. ನಾನು 'ಬಿಗ್ ಬಾಸ್'ಗೆ ಹೋದಾಗಿನಿಂದ ಕಳೆದ 8 ತಿಂಗಳಿಂದ ನನ್ನನ್ನು ಪ್ರಚೋದಿಸುತ್ತಲೇ ಬಂದಿರುವುದು ತಿಳಿಯುತ್ತದೆ ಎಂದಿದ್ದಾರೆ.

ನನ್ನನ್ನು ಬೈಯ್ದಿದ್ದ: ಎಲ್ವಿಶ್
ಪ್ರತಿ ಪೋಸ್ಟ್‌ನಲ್ಲಿ ನನ್ನ ವಿರುದ್ಧ ಬರೆದಿದ್ದಾರೆ, ಮಾತನಾಡುತ್ತಿದ್ದಾರೆ. ನನ್ನನ್ನು ಸಂಸ್ಕಾರಹೀನ ಎಂದು ಜರಿದಿದ್ದಾರೆ. ಈ ಹಿಂದೆ ನಾನು ಅವರನ್ನು ಭೇಟಿಯಾಗಿದ್ದೆ. ನಾವು ಒಟ್ಟಿಗೆ ಯೂಟ್ಯೂಬ್‌ಗಾಗಿ ಶೂಟ್ ಮಾಡಿದ್ದೇವೆ. ಆದರೆ ಇದ್ದಕ್ಕಿದ್ದಂತೆ ಅವರ ಶೈಲಿ ಹೇಗೆ ಬದಲಾಗಿದೆ ಎಂದು ನನಗೆ ತಿಳಿದಿಲ್ಲ. ಇದಾದ ನಂತರ ಅವರು ನನ್ನ ಬಗ್ಗೆ ಏನೇನೋ ಹೇಳಿದ್ದಾರೆ ಎಂದು ಎಲ್ವಿಶ್ ಆರೋಪಿಸಿದ್ದಾರೆ. ನಾನು ದೂರವಾಣಿ ಮೂಲವೇ ಏನೇ ಸಮಸ್ಯೆ ಇದ್ದರು ಪರಿಹರಿಸಲು ಮುಂದಾಗಿದ್ದೇ ಎಂದು ಅವರು ಹೇಳಿಕೊಂಡಿದ್ದಾರೆ.
ಎಲ್ವಿಶ್ ವಿರುದ್ಧ ವಿವಿಧ ಕಲಂನಡಿ ಕೇಸ್
ನಾನು ಮ್ಯಾಕ್ಸ್ಟರ್ನ್ ಅವರಿಗೆ ಮೆಸೇಜ್ ಮಾಡಿದಾಗ ಅವರು ಅವರು ಭೇಟಿಯಾಗೋಣ ಎಂದಿದ್ದರು. ಇದೆಲ್ಲ ಚಾಟ್‌ಗಳನ್ನು ಅವರು ಸ್ಕ್ರೀನ್ ಶಾಟ್ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ನನ್ನ ಮನೆ ಸುಟ್ಟು ಹಾಕುವ ಬೆದರಿಕೆ ಒಡ್ಡಿದ್ದಾರೆ ಎಂದು ಎಲ್ವಿಶ್ ಹೇಳಿದರು.
ಮ್ಯಾಕ್ಸ್ಟರ್ನ್ ಥಳಿಸಿದ ವಿಡಿಯೋ ವೈರಲ್ ಆದಗಿದೆ. ಸದ್ಯ ಎಲ್ವಿಶ್ ವಿರುದ್ಧ ಐಪಿಸಿಯ ಸೆಕ್ಷನ್ 147, 149, 323 ಮತ್ತು 506 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.












Click it and Unblock the Notifications