ಆನೆ ಜತೆಗೆ ಬಾಹುಬಲಿ ಸ್ಟಂಟ್, ಬೆನ್ನ ಮೂಳೆಗೆ ತಂದಿತು ಕುತ್ತು

Posted By:
Subscribe to Oneindia Kannada

ಇಡುಕ್ಕಿ, ನವೆಂಬರ್ 14: ಕೇರಳದ ತೊಡಪುಳ ಮೂಲದ ಹುಂಬ ಸಾಹಸಿಯೊಬ್ಬ ಆನೆ ಜತೆಗೆ ಸ್ನೇಹ ಮಾಡಲು ಹೋಗಿ ಬೆನ್ನು ಮೂಳೆ ಮುರಿದುಕೊಂಡ ಘಟನೆ ನಡೆದಿದೆ. ಬಾಹುಬಲಿ ಸಿನಿಮಾದ ಎರಡನೇ ಭಾಗ ನೀವು ನೋಡಿದ್ದರೆ ಅದರ ಆರಂಭದಲ್ಲಿ ಗ್ರಾಫಿಕ್ಸ್ ನಲ್ಲಿ ಮಾಡಿದ ದೃಶ್ಯವೊಂದಿದೆ. ನಾಯಕ ಪ್ರಭಾಸ್ ಆನೆಯ ಸೊಂಡಿಲೇರಿ ಅದರ ಮೇಲೆ ಕೂರುತ್ತಾರೆ.

ಹೂಬೇಹೂಬು ಹಾಗೇ ಪ್ರಯತ್ನಿಸಿದ ಇಪ್ಪತ್ತೈದು ವರ್ಷದ ಯುವಕ ರಾಷ್ಟ್ರಮಟ್ಟದಲ್ಲಿ ಸುದ್ದಿಯೂ ಆಗಿದ್ದಾನೆ. ಜತೆಗೆ ಬೆನ್ನು ಮೂಳೆಯೂ ಮುರಿದಿದೆ. ಈಚೆಗೆ ಈ ಘಟನೆ ನಡೆದಿದೆ. ಜಾನ್ ಮತ್ತು ಆತನ ಸ್ನೇಹಿತರು ರಜಾ ಕಳೆಯುವ ಸಲುವಾಗಿ ಹೊರಗೆ ಹೋಗಿದ್ದಾಗ ರಬ್ಬರ್ ತೋಟವೊಂದರಲ್ಲಿ ಆನೆಯನ್ನು ನೋಡಿದ್ದಾರೆ.

Youth tries Baahubali elephant stunt in Kerala, gets flung in the air

ಹತ್ತಿರದ ಅಂಗಡಿಯೊಂದರಿಂದ ಒಂದಷ್ಟು ಬಾಳೇಹಣ್ಣು ತಂದು ಆನೆಗೆ ಹತ್ತಿರ ಹೋಗಿದ್ದಾರೆ. ಆಗ ರೊಚ್ಚಿಗೆದ್ದ ಈ ಯುವಕ, "ನಾನು ನಿಮಗೊಂದು ವಿಶೇಷ ತೋರಿಸ್ತೀನಿ" ನೋಡಿ ಎಂದಿದ್ದಾನೆ. ಮೊದಲಿಗೆ ಬಾಳೇಹಣ್ಣು ಕೊಟ್ಟಿದ್ದಾನೆ. ಆ ಆನೆ ಕೂಡ ಒಳ್ಳೆ ಮಗು ಅನ್ನೋ ಹಾಗೆ ಅದನ್ನು ಸ್ವೀಕರಿಸಿದೆ. ಆ ನಂತರ ಅದರ ದಂತ ಹಿಡಿದುಕೊಂಡು, ಸ್ನೇಹಿತನನ್ನು ಮಾತನಾಡಿಸುವಂತೆ ಮಾತನಾಡಿಸಿದ್ದಾನೆ. ಆಗ ಆನೆ ಸೊಂಡಿಲಿನಿಂದ ಒಗಾಯಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A youth from Thodupuzha tried to imitate the 'Baahubali' scene of mounting an elephant by clambering up its trunk. However, the elephant was not amused by the idea and flung the boy in the air like a ball. The boy was found lying unconscious some distance away by his friends.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ