Video Viral: ರೈಲಿನ ಬೋಗಿಯಲ್ಲೇ ಬಕೆಟ್ ಹಿಡಿದು ಸ್ನಾನ ಮಾಡಿದ ಯುವಕ: ಮುಂದಾಗಿದ್ದೇನು?

ನವದೆಹಲಿ, ನವೆಂಬರ್ 10: ಭಾರತೀಯ ರೈಲ್ವೆಯು ಇತ್ತೀಚೆಗೆ ನಿಯಮ ಉಲ್ಲಂಘಿಸುವ ವ್ಯಕ್ತಿಗಳಿಂದ ಸುದ್ದಿಯಲ್ಲಿದೆ. ನಿರಂತರವಾಗಿ ರೈಲಿನಲ್ಲಿ ಅಹಿತಕರ ಘಟನೆಗಳು ನಡೆಯುತ್ತಿವೆ. ಮೊನ್ನೆಯಷ್ಟೇ ರೈಲಿನ ಬೋಗಿಯಿಂದ ಇಲಾಖೆ ಸಿಬ್ಬಂದಿಯೇ ಕಸವನ್ನು ಚೀಲದಲ್ಲಿ ಟ್ರ್ಯಾಕ್‌ ಮೇಲೆ ಎಸೆದ ವಿಡಿಯೋ ವೈರಲ್ ಆಗಿತ್ತು. ಇದೀಗ ರೈಲು ಬೋಗಿಯಲ್ಲೇ ಬಕೆಟ್ ಇಟ್ಟುಕೊಂಡು ಸ್ನಾನ ಮಾಡಿದ ವಿಡಿಯೋ ಹರಿದಾಡುತ್ತಿದೆ.

ಝಾನ್ಸಿ ರೈಲು ನಿಲ್ದಾಣದಲ್ಲಿ ರೈಲಿನಲ್ಲಿ ಯುವಕನೊಬ್ಬ ಸ್ನಾನ ಮಾಡುತ್ತಿರುವ ವಿಡಿಯೋ ಚಿತ್ರೀಕರಿಸಲಾಗಿದೆ. ಆನ್‌ಲೈನ್‌ನಲ್ಲಿ ಜನಪ್ರಿಯತೆ ಗಳಿಸುವ ಉದ್ದೇಶದಿಂದ ಯುವಕ ಈ ರೀತಿ ರೀಲ್ ಮಾಡಿದ್ದಾರೆ. ರೈಲ್ವೆ ಇಲಾಖೆ ಸಿಬ್ಬಂದಿ, ರಕ್ಷಣಾ ಪಡೆ ಆತನನ್ನು ಪತ್ತೆ ಮಾಡಿ ವಿಚಾರಿಸಿದಾಗ ಆತನೇ ಈ ಬಗ್ಗೆ ಒಪ್ಪಿಕೊಂಡಿದ್ದಾರೆ. ಸದ್ಯ ಆ ಯುವಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತಿದೆ. ಉತ್ತರ ಮಧ್ಯ ರೈಲ್ವೆ ಎಲ್ಲಾ ಪ್ರಯಾಣಿಕರು ಇತರ ಪ್ರಯಾಣಿಕರಿಗೆ ಅನುಚಿತ ಮತ್ತು ಅನಾನುಕೂಲಕರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳದಂತೆ ರೈಲ್ವೆ ಇಲಾಖೆ ಕೋರಿದೆ.

Youth Takes Bath Inside Train Coach at Jhansi Station UP Railways Initiates Legal Action Viral

ಉತ್ತರ ಪ್ರದೇಶದ ಝಾನ್ಸಿಯಲ್ಲಿರುವ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. 'ವ್ಯಕ್ತಿಯೊಬ್ಬ ರೈಲನ್ನು ತನ್ನ ಬಾತ್ ರೂಮ್ ಆಗಿ ಮಾಡಿಕೊಂಡಿದ್ದಾನೆ' ಎಂಬ ಶಿರ್ಷಿಕೆಯ ವಿಡಿಯೋವನ್ನು ಓಕ್ ಎಮಿನೆಂಟ್ ಎಕ್ಸ್ ಹ್ಯಾಂಡಲ್‌ನಿಂದ ಹಂಚಿಕೊಳ್ಳಲಾಗಿದೆ. ಅದೇ ವಿಡಿಯೋವನ್ನು ರಿಪೋಸ್ಟ್ ಮಾಡಿರುವ ಉತ್ತರ ಮಧ್ಯ ರೈಲ್ವೆಯು, ಕಾನೂನು ಕ್ರಮ ಕೈಗೊಂಡಿದ್ದಾಗಿ ತಿಳಿಸಿದೆ.

ರೈಲಿನಲ್ಲಿ, ರೈಲ್ವೆ ನಿಲ್ದಾಣ ಸೇರಿದಂತೆ ದೇಶದ ರೈಲು ಇಲಾಖೆ ವ್ಯಾಪ್ತಿಯಲ್ಲಿ ಇಂತಹ ಘಟನೆಗಳು ಮರುಕಳಿಸಿದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರಿಗೆ ಅಸಯ್ಯ, ಮುಜುಗರ ತರುವಂತೆ ಮಾಡಿದ ಈ ಯುವಕನ ವಿರುದ್ಧ ದಂಡ ಹೇರಬೇಕು. ಇತರರು ಮುಂದೆ ಈ ರೀತಿ ನಡೆದುಕೊಳ್ಳದಂತೆ ಎಚ್ಚರ ವಹಿಸಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.

ಇತ್ತೀಚೆಗೆ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬರು ರೈಲಿನ ಟಾಯ್ಲೆಟ್ ಪಕ್ಕ ಕಸ ಹಾಕಲು ಇಟ್ಟಿದ್ದ ಬಾಕ್ಸ್ ನಿಂದ ಎಲ್ಲ ತ್ಯಾಜ್ಯವನ್ನು ಪ್ಲಾಸ್ಟಿಕ್ ಕಪ್ಪು ಚೀಲದಲ್ಲಿ ತುಂಬಿ ಚಲಿಸುವ ರೈಲಿನಿಂದ ಹೊರಕ್ಕೆ ಟ್ರ್ಯಾಕ್ ಮೇಲೆ ಎಸೆದಿದ್ದಾರೆ. ಈ ವಿಡಿಯೋವನ್ನು ಅದೇ ಬೋಗಿಯಲ್ಲಿದ್ದ ಪ್ರಯಾಣಿಕರು ಸೆರೆ ಹಿಡಿದು ಹರಿಬಿಟ್ಟಿದ್ದರು. ಸ್ವಚ್ಛತೆಗೆ ಆದ್ಯತೆ ನೀಡುವ ಭಾರತೀಯ ರೈಲ್ವೆ ಇಲಾಖೆಯು ಇಂತಹ ಘಟನೆಗಳು, ನಿರ್ಲಕ್ಷ್ಯ ವಿರುದ್ಧ ಮೌನ ವಹಿಸದೇ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+