ಯುಪಿಯ ಭರ್ಜರಿ ಜಯಕ್ಕೆ ಮೋದಿಯೇ ಕಾರಣ ಎಂದ ಯೋಗಿ
ಲಕ್ನೋ, ಡಿಸೆಂಬರ್ 1: ಉತ್ತರ ಪ್ರದೇಶ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ದಾಖಲಿಸಿದ್ದು ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಿದೆ. ಈ ಭರ್ಜರಿ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಅಭಿವೃದ್ಧಿಯ ಅಜೆಂಡಾವೇ ಕಾರಣ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದರು.
ಇದು ಜನರ ಸ್ಪಷ್ಟ ಜನಾಭಿಪ್ರಾಯ ಎಂದು ಬಣ್ಣಿಸಿದ ಯೋಗಿ ಆದಿತ್ಯನಾಥ್, ಜನರು ಬಿಜೆಪಿಯ ಮೇಲೆ ನಂಬಿಕೆ ಇರಿಸಿಕೊಂಡಿದ್ದಾರೆ ಎಂಬುದನ್ನು ಫಲಿತಾಂಶ ತೋರಿಸಿದೆ ಎಂದರು.

ನಮ್ಮ ಸರಕಾರ ಉತ್ತರ ಪ್ರದೇಶದಲ್ಲಿ ಕೈಗೊಂಡ ಅಭಿವೃದ್ಧಿ ಕೆಲಸಗಳನ್ನು ನೋಡಿ ಜನರು ನಮಗೆ ಮತಚಲಾಯಿಸಿದ್ದಾರೆ. ಈ ಗೆಲುವಿನಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ನರೇಂದ್ರ ಮೋದಿ ಪಾತ್ರವೂ ಪ್ರಮುಖವಾದುದು ಎಂದು ಯೋಗಿ ಹೇಳಿದರು.
ಸದ್ಯದ ಮಾಹಿತಿಗಳ ಪ್ರಕಾರ ಬಿಜೆಪಿ 652 ವಾರ್ಡ್ ಗಳಲ್ಲಿ 340ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇಡೀ ಚುನಾವಣೆಯ ಪ್ರಮುಖ ಅಂಶ ಅಂದರೆ ಅದು ಬಿಎಸ್ಪಿಯ ಫಲಿತಾಂಶ. ನಿರೀಕ್ಷೆಯ ಮಾಡದ ರೀತಿಯಲ್ಲಿ ಬಿಜೆಪಿ ಒಂದಷ್ಟು ಸ್ಥಾನಗಳಲ್ಲಿ ಗೆದ್ದು ಅಚ್ಚರಿ ಮೂಡಿಸಿದೆ.












Click it and Unblock the Notifications