ಯೋಗ ಗೊತ್ತಿಲ್ಲದಿದ್ದರೆ ಇಂಜಿನಿಯರಿಂಗ್ ಡಿಗ್ರಿ ಸಿಗಲ್ಲ!
ನವದೆಹಲಿ, ಜುಲೈ 11: ಯೋಗ ಮಾಡಲು ಬರದಿದ್ದರೆ ಇಂಜಿಯರಿಂಗ್ ಪದವಿ ಪಡೆಯುದು ಕಷ್ಟವಾಗಲಿದೆ. ಇನ್ನು ಮುಂದೆ ಯೋಗ, ಕ್ರೀಡೆ ಅಥವಾ ಇತರ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಕಡ್ಡಾಯವಾಗಿದೆ.
ವಿದ್ಯಾರ್ಥಿ/ನಿಯರು ತಮ್ಮ ಶೈಕ್ಷಣಿಕ ವಿಷಯಗಳ ಜತೆಗೆ ಇದನ್ನೂ ಕಲಿಯುವುದು ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ.
ಇಂಜಿನಿಯರಿಂಗ್ ಶಿಕ್ಷಣ ಸಂಬಂಧ ನಿರ್ಧಾರ ಕೈಗೊಳ್ಳುವ ಅತ್ಯುನ್ನತ ಸಂಸ್ಥೆಯಾದ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಇದನ್ನು ಕಡ್ಡಾಯಗೊಳಿಸಿದೆ.

ಆದರೆ, ಯೋಗಾಭ್ಯಾಸ ಪರೀಕ್ಷೆಗೆ ಹಾಜರಾಗಿ ವಿದ್ಯಾರ್ಥಿಗಳು ಪಾಸಾಗಬೇಕಾಗಿಲ್ಲ. ಇದಕ್ಕೆ ಯಾವುದೇ ಅಂಕ ಇರುವುದಿಲ್ಲ, ವಿದ್ಯಾರ್ಥಿಗಳು ಇಂಥ ಚಟುವಟಿಕೆಗಳಲ್ಲಿ ಕನಿಷ್ಠ ಶೇಕಡ 25ರಷ್ಟು ಹಾಜರಾತಿ ಹೊಂದಿರುವುದು ಕಡ್ಡಾಯ. ಇದು ವಿದ್ಯಾರ್ಥಿಗಳ ಸಮಗ್ರ ವಿಕಾಸಕ್ಕೆ ಪೂರಕವಾಗಲಿದೆ ಎಂದು ಎಐಸಿಟಿಇ ಅಧಿಕಾರಿಯೊಬ್ಬರು ಹೇಳಿದ್ದಾರೆ












Click it and Unblock the Notifications