Year End 2024: ಲೋಕಸಭಾ ಚುನಾವಣೆಯಲ್ಲಿ ಅಚ್ಚರಿಯ ಸೋಲುಗಳಿವು
2024ರ ವರ್ಷದಲ್ಲಿ ಪ್ರಮುಖ ರಾಜಕೀಯ ಬದಲಾವಣೆಗಳು ನಡೆದಿವೆ. ಭಾರತದ ದೊಡ್ಡ ಪ್ರಜಾಪ್ರಭುತ್ವ ಹಬ್ಬ ಎನಿಸಿಕೊಳ್ಳುವ ಲೋಕಸಭಾ ಚುನಾವಣೆ ಇದೇ ವರ್ಷ ನಡೆಯಿತು. ಮುಂದಿನ ಐದು ವರ್ಷಗಳಿಗೆ ದೇಶದ ಪ್ರಜೆಗಳು ಆಳುವ ಸರ್ಕಾರವನ್ನು ಚುನಾಯಿಸಿದರು. ಈ ಬಾರಿ 400 ಸೀಟು ಗೆಲ್ಲುತ್ತೇವೆ ಎಂದು ಬೀಗುತ್ತಿದ್ದ ಬಿಜೆಪಿಗೆ ಮತದಾರ ಶಾಕ್ ಕೊಟ್ಟಿದ್ದಲ್ಲದೆ, ಅಧಿಕಾರಕ್ಕೆ ಬರುವ ಉತ್ಸಾಹದಲ್ಲಿದ್ದ ಇಂಡಿಯಾ ಒಕ್ಕೂಟವನ್ನೂ ಅಧಿಕಾರದಿಂದ ದೂರವಿಟ್ಟರು.
2019ರ ಲೋಕಸಭಾ ಚುನಾವಣೆಯಲ್ಲಿ 303 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿ 2024ರಲ್ಲಿ 240 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿತು. ಬಿಜೆಪಿ ಅಧಿಕಾರಕ್ಕೆ ಬರಲು ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷ (ಟಿಡಿಪಿ) ಮತ್ತು ನಿತೀಶ್ ಕುಮಾರ್ ಅವರ ಜನತಾ ದಳ (ಯುನೈಟೆಡ್) ಪಕ್ಷಗಳ ಬೆಂಬಲ ಪಡೆಯಬೇಕಾಯಿತು. ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು.

ಪ್ರಮುಖ ನಾಯಕರಿಗೆ ಹೀನಾಯ ಸೋಲು
ಈ ಮೊದಲು ಪ್ರಾಬಲ್ಯ ಹೊಂದಿದ್ದ ಕ್ಷೇತ್ರಗಳಲ್ಲಿ ಬಿಜೆಪಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿತು. ಬಿಜೆಪಿ ಮಾತ್ರವಲ್ಲದೆ ವಿವಿಧ ಪಕ್ಷಗಳ ಪ್ರಮುಖ ಅಭ್ಯರ್ಥಿಗಳನ್ನು ತಿರಸ್ಕರಿಸಿದ ಮತದಾರ ಶಾಕ್ ಕೊಟ್ಟಿದ್ದರು. ಅಂತಹ ಪ್ರಮುಖ ಅಭ್ಯರ್ಥಿಗಳ ಮಾಹಿತಿ ಇಲ್ಲಿದೆ.
ಸ್ಮೃತಿ ಇರಾನಿ: ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಬಿಜೆಪಿ ನಾಯಕಿ ಸ್ಮೃತಿ ಇರಾನಿ ಕಾಂಗ್ರೆಸ್ ಹಿರಿಯ ನಾಯಕ ಕೆಎಲ್ ಶರ್ಮಾ ವಿರುದ್ಧ 1,67,196 ಮತಗಳಿಂದ ಸೋಲು ಕಂಡರು. ಕಾಂಗ್ರೆಸ್ ಮತ್ತೆ ತಮ್ಮ ಭದ್ರಕೋಟೆಯನ್ನು ವಾಪಸ್ ಪಡೆಯುವಲ್ಲಿ ಯಶಸ್ವಿಯಾಯಿತು.
ರಾಜೀವ್ ಚಂದ್ರಶೇಖರ್: ಬಿಜೆಪಿಯ ಮತ್ತೊಬ್ಬ ಪ್ರಮುಖ ನಾಯಕ ರಾಜೀವ್ ಚಂದ್ರಶೇಖರ್ ತಿರುವನಂತಪುರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಶ ಶಶಿ ತರೂರ್ ವಿರುದ್ಧ 16,000 ಮತಗಳ ಅಂತರದಲ್ಲಿ ಸೋಲುಕಂಡರು.
ಅಣ್ಣಾಮಲೈ: ಕೊಯಮತ್ತೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಡಿಎಂಕೆ ಪಕ್ಷದ ಅಭ್ಯರ್ಥಿ ಗಣಪತಿ ರಾಜ್‌ಕುಮಾರ್ ವಿರುದ್ಧ 1,18,068ಕ್ಕೂ ಹೆಚ್ಚು ಮತಗಳಿಂದ ಸೋತರು. ಈ ಸೋಲು ತಮಿಳುನಾಡಿನಲ್ಲಿ ಪ್ರಬಲವಾಗಬೇಕು ಎನ್ನುವ ಬಿಜೆಪಿ ಮಹತ್ವಾಕಂಕ್ಷೆಗೆ ದೊಡ್ಡ ಹಿನ್ನಡೆಯಾಯಿತು.
ಮೆಹಬೂಬಾ ಮುಫ್ತಿ: ಜಮ್ಮು ಮತ್ತು ಕಾಶ್ಮೀರದ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ನಾಯಕಿ ಮೆಹಬೂಬಾ ಮುಫ್ತಿ ನ್ಯಾಷನಲ್ ಕಾನ್ಫರೆನ್ಸ್‌ನ ಮಿಯಾನ್ ಅಲ್ತಾಫ್ ಅಹ್ಮದ್ ವಿರುದ್ಧ 2.81 ಲಕ್ಷ ಮತಗಳಿಂದ ಸತು ಆಘಾತ ಅನುಭವಿಸಿದರು.
ಅರ್ಜುನ್ ಮುಂಡಾ: ಬಿಜೆಪಿ ಮಾಜಿ ಸಚಿವ ಅರ್ಜುನ್ ಮುಂಡಾ ಕಾಂಗ್ರೆಸ್‌ನ ಕಾಳಿ ಚರಣ್ ಮುಂಡಾ ವಿರುದ್ಧ 1,49,675 ಸೋತದ್ದು ಜಾರ್ಖಂಡ್ ಬಿಜೆಪಿಗೆ ಆಘಾತ ತಂದಿತ್ತು.
ಅಧೀರ್ ರಂಜನ್ ಚೌಧರಿ: ಪಶ್ಚಿಮ ಬಂಗಾಳದ ಕಾಂಗ್ರೆಸ್ ಹಿರಿಯ ನಾಯಕ ಅಧೀರ್ ರಂಜನ್ ಚೌಧರಿ ತಮ್ಮದೇ ಪಕ್ಷದ ಯೂಸುಫ್ ಪಠಾಣ್ ವಿರುದ್ಧ 85 ಸಾವಿರ ರನ್‌ಗಳ ಅಂತರದಲ್ಲಿ ಸೋಲು ಕಂಡರು. ಕಾಂಗ್ರೆಸ್‌ನಿಂದ ಟಿಕೆಟ್ ಸಿಗದ ಕಾರಣ ಅವರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.












Click it and Unblock the Notifications