ಕುಸ್ತಿಪಟುಗಳ ಪ್ರತಿಭಟನೆ: ಮಹಿಳಾ ಕ್ರೀಡಾಳುಗಳ ಪರ ನೀರಜ್ ಚೋಪ್ರಾ ಸೇರಿ ಹಲವರ ಬೆಂಬಲ
ನವದೆಹಲಿ, ಏಪ್ರಿಲ್ 28: ತಮಗೆ ಆಗಿರುವ ಲೈಗಿಂಕ ಕಿರಿಕುಳದ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ನಿರಂತರ ಪ್ರತಿಭಟನೆ ಕೈಗೊಂಡಿರುವ ಮಹಿಳಾ ಕುಸ್ತಿಪಟುಗಳ ಪರ ಒಲಂಪಿಕ್ಸ್‌ನಲ್ಲಿ ಚಿನ್ನದ ಪದಕ ಪಡೆದಿದ್ದ ನೀರಜ್ ಚೋಪ್ರಾ ಸೇರಿದಂತೆ ಹಲವು ಖ್ಯಾತನಾಮರು ಬೆಂಬಲ ಘೋಷಿಸಿದ್ದಾರೆ.
ಬಿಜೆಪಿ ಸಂಸದ ಹಾಗೂ ಭಾರತೀಯ ಕುಸ್ತಿಪಟುಗಳ ಒಕ್ಕೂಟ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ವಿನಿಶಾ ಪೋಗಾಟ್, ಸಾಕ್ಷಿ ಮಲಿಕ್, ಭಜರಂಗ್ ಪುನಿಯಾ ಸೇರಿದಂತೆ ಹಲವಾರು ಮಂದಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಶುಕ್ರವಾರ ಪ್ರತಿಭಟನಾ ನಿರತ ಕುಸ್ತಿಪಟುಗಳಿಗೆ ತಮ್ಮ ಬೆಂಬಲವನ್ನು ನೀಡಿದ್ದು, ಕ್ರೀಡಾಪಟುಗಳಿಗೆ ನ್ಯಾಯವನ್ನು ಒದಗಿಲು ಅಧಿಕಾರಿಗಳು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಅಧ್ಯಕ್ಷೆ ಪಿಟಿ ಉಷಾ ಅವರು ಕುಸ್ತಿಪಟುಗಳ ವಿರುದ್ಧ ತಮ್ಮ ಅಥ್ಲೀಟ್‌ಗಳ ಆಯೋಗವನ್ನು ಸಂಪರ್ಕಿಸುವ ಬದಲು ತಮ್ಮ ಪ್ರತಿಭಟನೆಯನ್ನು ಪುನರಾರಂಭಿಸಲು ಬೀದಿಗಿಳಿದಿದ್ದಕ್ಕಾಗಿ ಕುಸ್ತಿಪಟುಗಳ ಮೇಲೆ ತೀವ್ರವಾಗಿ ಅಸಮಾಧಾನ ವ್ಯಕ್ತಪಡಿಸಿದರು. ಆದರೆ ಅವರ ವಿರುದ್ಧ ಈಗ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ.
ಮಹಿಳಾ ಕ್ರೀಡಾಪಟುಗಳ ವಿರುದ್ಧ ಅಗಿರುವ ಅನ್ಯಾಯ ವಿರುದ್ಧ ಭಾರತೀಯ ಹಾಕಿ ಆಟಗಾರ್ತಿ ರಾಣಿ ರಾಂಪಾಲ್ ಕೂಡ ಅಕ್ರೋಶ ವ್ಯಕ್ಯಪಡಿಸುತ್ತಿದ್ದಾರೆ. ಇದಲ್ಲದೆ ನಟಿ ಸ್ವರಾ ಭಾಸ್ಕರ್, ಕಪಿಲ್ ಸಿಬಲ್, ರಾಜ್ಯಸಭಾ ಸದಸ್ಯೆ ಪ್ರಿಯಾಂಕಾ ಚತುರ್ವೇದಿ, ಎಎಪಿ, ಕಾಂಗ್ರೆಸ್, ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಸೇರಿದಂತೆ ಹಲವಾರು ಮಂದಿ ಬೆಂಬಲ ವ್ಯಕ್ತಪಡಿಸಿ ಬಿಜೆಪಿ ಸಂಸದನನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.

ಈ ಮಧ್ಯೆ ಪೊಲೀಸ್ ಕ್ರಮ ಕೈಗೊಳ್ಳುವ ಭರವಸೆಯ ಹೊರತಾಗಿಯೂ ಹಲವಾರು ಮಹಿಳಾ ಆಟಗಾರರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ತಮ್ಮ ಫೆಡರೇಶನ್ ಮುಖ್ಯಸ್ಥರನ್ನು ತಕ್ಷಣದ ಬಂಧಿಸುವಂತೆ ಒತ್ತಾಯಿಸಿ ನವದೆಹಲಿಯಲ್ಲಿ ತಮ್ಮ ಧರಣಿ ಸತ್ಯಾಗ್ರಹವನ್ನು ಮುಂದುವರಿಸುವುದಾಗಿ ಭಾರತದ ಅಗ್ರ ಕುಸ್ತಿಪಟುಗಳು ಶುಕ್ರವಾರ ಹೇಳಿದ್ದಾರೆ.
"ನಾವು ಸುಪ್ರೀಂ ಕೋರ್ಟ್‌ನ ಆದೇಶವನ್ನು ಗೌರವಿಸುತ್ತೇವೆ, ಆದರೆ ನಮಗೆ ದೆಹಲಿ ಪೊಲೀಸರ ಮೇಲೆ ನಂಬಿಕೆ ಇಲ್ಲ. ಈ ಹೋರಾಟ ಎಫ್‌ಐಆರ್‌ಗಾಗಿ ಅಲ್ಲ. ಅವರಂತಹವರನ್ನು ಶಿಕ್ಷಿಸಲು ಈ ಹೋರಾಟ. ಅವರು ಜೈಲಿನಲ್ಲಿರಬೇಕು ಮತ್ತು ಅವರ ಖಾತೆಗಳನ್ನು ಕಸಿದುಕೊಳ್ಳಬೇಕು" ಎಂದು ದೆಹಲಿ ಪೊಲೀಸರು ಸುಪ್ರೀಂ ಕೋರ್ಟ್‌ಗೆ ತಿಳಿಸಿದ ನಂತರ ಕುಸ್ತಿಪಟುಗಳು ಹೇಳಿದ್ದಾರೆ.












Click it and Unblock the Notifications