ಕುಸ್ತಿಪಟುಗಳ ಮಹಾ ಪಂಚಾಯತ್: ದೆಹಲಿಯಲ್ಲಿ ಹೈ ಅಲರ್ಟ್, ರೈತ ಮುಖಂಡರ ಬಂಧನ
ನವದೆಹಲಿ, ಮೇ. 28: ಭಾನುವಾರ ಹೊಸ ಸಂಸತ್ ಭವನದ ಕಡೆಗೆ ಹೋಗುತ್ತಿರುವ ಕುಸ್ತಿಪಟುಗಳ ಮೆರವಣಿಗೆಯನ್ನು ದೆಹಲಿಯ ಗಡಿಗಳಲ್ಲೇ ಪೊಲೀಸರು ತಡೆದಿದ್ದು, ಹಲವು ರೈತ ಮುಖಂಡರನ್ನು ವಶಕ್ಕೆ ಪಡೆಯಲಾಗಿದೆ. ದೆಹಲಿಯಲ್ಲಿ ಸಾವಿರಾರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆದ್ದು, ಬ್ಯಾರಿಕೇಡ್‌ಗಳ ಸಾಲುಗಳನ್ನು ಹಾಕಲಾಗಿದೆ.
ಪ್ರತಿಭಟನಾ ನಿರತ ಕುಸ್ತಿಪಟುಗಳು ಹೊಸ ಸಂಸತ್ ಭವನದ ಮುಂಭಾಗದಲ್ಲಿ ಮಹಿಳಾ ಮಹಾ ಪಂಚಾಯತ್ ಅನ್ನು ನಡೆಸಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದರು. ಹೊಸ ಸಂಸತ್ ಭವನವನ್ನು ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದಾರೆ. ಇದರ ಬೆನ್ನಲ್ಲೇ ದೆಹಲಿ ಪೊಲೀಸರು ಐಟಿಒ ರಸ್ತೆ, ಟಿಕ್ರಿ ಗಡಿ ಮತ್ತು ಸಿಂಘು ಗಡಿ ಪ್ರದೇಶದ ಬಳಿ ಬ್ಯಾರಿಕೇಡ್‌ಗಳನ್ನು ಹಾಕಿದ್ದು, ಪ್ರತಿಭಟನಾ ನಿರತ ಕುಸ್ತಿಪಟುಗಳ ಮೆರವಣಿಗೆಯಲ್ಲಿ ಖಾಪ್ ಪಂಚಾಯತ್ ಮುಖಂಡರು ಮತ್ತು ರೈತರನ್ನು ಗಡಿಗಳಲ್ಲೇ ತಡೆದಿದ್ದಾರೆ.

ಕುಸ್ತಿಪಟುಗಳಾದ ಬಜರಂಗ್ ಪುನಿಯಾ, ವಿನೇಶ್ ಫೋಗಟ್ ಮತ್ತು ಸಾಕ್ಷಿ ಮಲಿಕ್ ನೇತೃತ್ವದ ಧರಣಿ ನಿರತ ಕುಸ್ತಿಪಟುಗಳು, ಭಾರತದ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ. ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಹಲವಾರು ಮಹಿಳಾ ಕ್ರೀಡಾಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ದೆಹಲಿಯಲ್ಲಿನ ಕುಸ್ತಿಪಟುಗಳ ಮಹಾ ಪಂಚಾಯತ್‌ನ ಅಪ್‌ಡೇಟ್‌ಗಳು:
1. ನವದೆಹಲಿಯ ಹೊಸ ಸಂಸತ್ ಭವನದ ಹೊರಗೆ ಮಹಿಳಾ ಮಹಾಪಂಚಾಯತ್‌ಗಾಗಿ ದೆಹಲಿಯತ್ತ ಸಾಗದಂತೆ ಪಂಜಾಬ್‌ನ ಅಂಬಾಲಾದಲ್ಲಿ ರೈತರ ಗುಂಪುಗಳನ್ನು ತಡೆಯಲಾಗುತ್ತಿದೆ. ಭಾರತೀಯ ಕಿಸಾನ್ ಯೂನಿಯನ್ ನಾಯಕ ಗುರ್ನಾಮ್ ಸಿಂಗ್ ಚಾರುಣಿ ಸೇರಿದಂತೆ ಹಲವಾರು ರೈತ ಮುಖಂಡರನ್ನು ಅಂಬಾಲಾದಲ್ಲಿ ಬಂಧಿಸಲಾಗಿದೆ.
#WATCH | We have deployed male and female companies at Delhi-Haryana border points to ensure unsocial elements are stopped from entering Delhi. Sonipat East Zone Police has not detained anyone so far. We will not allow people to enter Delhi if their motive is to disrupt the… pic.twitter.com/33h2wy0NmF
— ANI (@ANI) May 28, 2023
ಭಾನುವಾರ ಮುಂಜಾನೆ 4.45ರ ಸುಮಾರಿಗೆ ಅವರನ್ನು ವಶಕ್ಕೆ ಪಡೆಯಲಾಗಿದ್ದು, ಇದರಲ್ಲಿ ಹೆಚ್ಚಾಗಿ ಮಹಿಳೆಯರೇ ಇದ್ದಾರೆ. NH-44 ನಲ್ಲಿ ಗುರುದ್ವಾರ ಮಂಜಿ ಸಾಹಿಬ್‌ನಲ್ಲಿ ರಾತ್ರಿಯ ತಂಗಲು ತಮ್ಮ ತಂಡವನ್ನು ನಿಲ್ಲಿಸಿದ್ದರು. ಈ ಸ್ಥಳವನ್ನು ಬೃಹತ್ ಪೊಲೀಸ್ ಪಡೆಯ ಸಮ್ಮುಖದಲ್ಲಿ ಸುತ್ತುವರೆಯಲಾಗಿದೆ.
2. ಪೊಲೀಸರು ಗುರುದ್ವಾರದ ಪ್ರವೇಶ ಮತ್ತು ನಿರ್ಗಮನ ಗೇಟ್‌ಗಳನ್ನು ಮುಚ್ಚಿದ್ದು, ತ್ತು ದೊಡ್ಡ ಟ್ರಕ್‌ಗಳನ್ನು ಪ್ರದೇಶಕ್ಕೆ ಹೋಗುವ ರಸ್ತೆಗಳಲ್ಲಿ ನಿಲ್ಲಿಸಿದರು. ಭಾರತೀಯ ಕಿಸಾನ್ ಯೂನಿಯನ್ ಬಣಗಳಾದ ಚಾರುಣಿ ಮತ್ತು ಶಹೀದ್ ಭಗತ್ ಸಿಂಗ್ ಗುಂಪುಗಳು ಪ್ರತಿಭಟನೆಗಳನ್ನು ನಡೆಸಲು ಅವಕಾಶ ನೀಡುವಂತೆ ಸರ್ಕಾರಕ್ಕೆ ಎಚ್ಚರಿಕೆ ನೀಡಿವೆ.

3. ಮಹಾಪಂಚಾಯತ್ ನಡೆಸಲು ಅನುಮತಿ ಸಿಗದ ಕಾರಣ ಯಾವುದೇ ಪ್ರತಿಭಟನಾಕಾರರನ್ನು ಹೊಸ ಸಂಸತ್ ಭವನದತ್ತ ತೆರಳಲು ಬಿಡುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
4. ಉತ್ತರ ಪ್ರದೇಶದ ಸಾವಿರಾರು ರೈತರು ಭಾನುವಾರ ಬೆಳಗ್ಗೆ 10.30ಕ್ಕೆ ದೆಹಲಿಯ ಘಾಜಿಪುರ ಗಡಿಯಲ್ಲಿ ಜಮಾಯಿಸಲಿದ್ದಾರೆ ಮತ್ತು ಪ್ರತಿಭಟನಾ ನಿರತ ಕುಸ್ತಿಪಟುಗಳಿಗೆ ತಮ್ಮ ಬೆಂಬಲವನ್ನು ನೀಡಲು ರಾಷ್ಟ್ರ ರಾಜಧಾನಿಯನ್ನು ಪ್ರವೇಶಿಸಲಿದ್ದಾರೆ ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಹೇಳಿದ್ದಾರೆ. ರೈತರು ಇತರ ಗಡಿ ಭಾಗಗಳಿಂದ ದೆಹಲಿಯನ್ನು ಪ್ರವೇಶಿಸಲಿದ್ದಾರೆ.
5. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು, ಅಗತ್ಯವಿದ್ದರೆ, ಭಾನುವಾರದಂದು ಓಲ್ಡ್ ಬವಾನಾದ ಕಂಜಾವಾಲಾ ಚೌಕ್, ಎಂಸಿ ಪ್ರಾಥಮಿಕ ಬಾಲಕಿಯರ ಶಾಲೆಯಲ್ಲಿ ತಾತ್ಕಾಲಿಕ ಜೈಲು ರಚಿಸಲು ಅಗತ್ಯ ಅನುಮತಿ ನೀಡುವಂತೆ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಗೆ ಪೊಲೀಸರು ಮನವಿ ಮಾಡಿದ್ದಾರೆ.
6. ಇಂದು ಮಹಾಪಂಚಾಯತ್ ನಡೆಯುವುದು ಖಚಿತ. ನಾವು ನಮ್ಮ ಸ್ವಾಭಿಮಾನಕ್ಕಾಗಿ ಹೋರಾಡುತ್ತಿದ್ದೇವೆ. ಅವರು ಇಂದು ಹೊಸ ಸಂಸತ್ ಕಟ್ಟಡವನ್ನು ಉದ್ಘಾಟಿಸುತ್ತಿದ್ದಾರೆ. ಆದರೆ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಕೊಲೆ ಮಾಡುತ್ತಿದ್ದಾರೆ. ಪೊಲೀಸರು ಬಂಧಿಸಿರುವ ನಮ್ಮ ಜನರನ್ನು ಬಿಡುಗಡೆ ಮಾಡುವಂತೆ ನಾವು ಆಡಳಿತಕ್ಕೆ ಮನವಿ ಮಾಡುತ್ತೇವೆ ಎಂದು ಕುಸ್ತಿಪಟು ಬಜರಂಗ್ ಪುನಿಯಾ ಹೇಳಿದ್ದಾರೆ.
-
Moodbidri: ಮಹಿಳೆಯರನ್ನು ಮಂಚಕ್ಕೆ ಕರೆದಿದ್ದ ಆರೋಪ: ಮೂಡುಬಿದರೆ ಇನ್ಸ್ಪೆಕ್ಟರ್ ದೌರ್ಜನ್ಯ ಪ್ರಕರಣ ಸಿಐಡಿ ತನಿಖೆ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ












Click it and Unblock the Notifications