ಏನಿದು ಕೌಶಲ್ಯ ಭಾರತ ಯೋಜನೆ? ಎಷ್ಟು ಉದ್ಯೋಗ ಸಿಗಲಿದೆ?
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದೆನಿಸಿರುವ ಕೌಶಲ್ಯ ಭಾರತ (ಸ್ಕಿಲ್ ಇಂಡಿಯಾ) ಕ್ಕೆ ಜುಲೈ 15ರಂದು ಚಾಲನೆ ಸಿಗಲಿದೆ. ಭಾರತವನ್ನು 'ಸ್ಕಾಮ್ ಇಂಡಿಯಾ' ದಿಂದ 'ಸ್ಕಿಲ್ ಇಂಡಿಯಾ' ದತ್ತ ಕೊಂಡೊಯ್ಯುವುದು ನಮ್ಮ ಗುರಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನವದೆಹಲಿಯ ವಿಜ್ಞಾನ ಭವನದಲ್ಲಿ ಬುಧವಾರ ಸಂಜೆ 4 ಗಂಟೆ ನಂತರ ನಡೆಯುವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯುವ ಸಮುದಾಯಕ್ಕೆ ಅನುಕೂಲ ನೀಡುವ 'ಕೌಶಲ್ಯ ಭಾರತ ಯೋಜನೆ' ಗೆ ಅಧಿಕೃತ ಚಾಲನೆ ನೀಡಲಿದ್ದಾರೆ.
ಯುವ ಸಮುದಾಯ ಪದವೀಧರರಾದರೆ ಮಾತ್ರ ಸಾಲದು, ಕೌಶಲ್ಯ ಅಭಿವೃದ್ಧಿಯಾಗಬೇಕು. ಉದ್ಯೋಗಕ್ಕೆ ಅಣಿಯಾಗಬೇಕು ಎಂದು ಜೂನ್ 11, 2014 ರಂದು ಲೋಕಸಭೆಯಲ್ಲಿ ಪ್ರಧಾನಿ ಮೋದಿ ಅವರು ಘೋಷಿಸಿದ್ದರು. [ಜುಲೈ 15ರಂದು 'ಕೌಶಲ್ಯ ಭಾರತ' ಕ್ಕೆ ಮೋದಿಯಿಂದ ಚಾಲನೆ]

ಕೌಶಲ್ಯ ಅಭಿವೃದ್ಧಿ ಯೋಜನೆಗೆ ಜಪಾನ್ ದೇಶದ ನೆರವು ಕೋರಲಾಗಿದೆ. ಮೇಕ್ ಇನ್ ಇಂಡಿಯಾದ ಜೊತೆಗೆ ಪೂರಕವಾಗಿ ಸಾಗುವ ಈ ಯೋಜನೆ ಬಗ್ಗೆ ಇನ್ನಷ್ಟು ವಿವರ ಮುಂದಿದೆ.
ಕೌಶಲ್ಯ ಭಾರತ ಎಂದರೇನು?
* ಜುಲೈ 15ರಂದು ವಿಶ್ವ ಕೌಶಲ್ಯ ದಿನಾಚರಣೆ ಅಂಗವಾಗಿ ಎನ್ ಡಿಎ ಸರ್ಕಾರ ತನ್ನ ಮಹತ್ವದ ಯೋಜನೆ 'ಕೌಶಲ್ಯ ಭಾರತ' ಯೋಜನೆಗೆ ಚಾಲನೆ ನೀಡುತ್ತಿದೆ.
* 2022ರ ವೇಳೆಗೆ ಸುಮಾರು 40.2 ಕೋಟಿ ಯುವ ಸಮುದಾಯವನ್ನು ಕೌಶಲ್ಯ ಪೂರ್ಣರನ್ನಾಗಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಹೊಸ ನಿಯಮಾವಳಿ, ಕಾನೂನು ರೂಪಿಸಲಾಗಿದೆ.
* ಕೌಶಲ್ಯ ಅಭಿವೃದ್ಧಿಯ ಹೆಚ್ಚಿನ ಪ್ರಯೋಜನ ಕೃಷಿ ಕ್ಷೇತ್ರಕ್ಕೆ ಸಿಗಲಿದೆ. ಶೇ54 ರಷ್ಟು ಜನ ಈ ಕ್ಷೇತ್ರದಿಂದ ಪ್ರಯೋಜನ ಪಡೆಯಬಹುದು.
* ಸಿಲ್ಕ್ ಇಂಡಿಯಾ ಮಿಷನ್ ಅಡಿಯಲ್ಲಿ ಕೌಶಲ್ಯ ಅಭಿವೃದ್ಧಿ ಜೊತೆಗೆ ಹೊಸ ಉದ್ದಿಮೆ ಸ್ಥಾಪನೆಗೆ ಯುವ ಸಮುದಾಯವನ್ನು ಹುರಿದುಂಬಿಸುವ ಹಾಗೂ ತರಬೇತಿ ನೀಡುವ ಕಾರ್ಯಕೈಗೊಳ್ಳಲಾಗುತ್ತದೆ.
ಯಾವ ಯಾವ ಯೋಜನೆ ಘೋಷಣೆ:
* ಕೌಶಲ್ಯ ಅಭಿವೃದ್ಧಿ ಸಾಲ ಯೋಜನೆ
* 5 ಸಾವಿರ ರು ನಿಂದ 1.5 ಲಕ್ಷ ರು ತನಕ ಸಾಲ ಪಡೆಯಬಹುದು. ಇದು ದೇಶದ 34 ಲಕ್ಷ ಯುವ ಸಮುದಾಯಕ್ಕೆ ನೆರವಾಗಲಿದೆ.
* ಕೌಶಲ್ಯ ಅಭಿವೃದ್ಧಿಗಾಗಿ ನೂತನ ರಾಷ್ಟ್ರೀಯ ನೀತಿ.
* ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ(ಎನ್ ಎಸ್ ಡಿಸಿ) ವತಿಯಿಂದ ಯೋಜನೆಯ ಕಾರ್ಯರೂಪ ಹಾಗೂ ನಿರ್ವಹಣೆ ದೇಶದೆಲ್ಲೆಡೆ ನಡೆಯಲಿದೆ.
* ಮುಂದಿನ ವರ್ಷದಲ್ಲಿ 24 ಲಕ್ಷ ಯುವ ಸಮುದಾಯಕ್ಕೆ ಉದ್ಯೋಗ ಅವಕಾಶ ಲಭ್ಯವಾಗಲಿದೆ.
ನಿಗಮಗಳು, ಸಚಿವಾಲಯಗಳು
* ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ(ಎನ್ ಎಸ್ ಡಿಸಿ)
* ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಏಜೆನ್ಸಿ (ಎನ್ ಎಸ್ ಡಿಎ)
* ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಧಿ (ಎನ್ ಎಸ್ ಡಿಎಫ್)
* 33 ಸೆಕ್ಟರ್ ಸಿಲ್ಕ್ ಕೌನ್ಸಿಲ್ಸ್ (ಎಸ್ಎಸ್ ಸಿಎಸ್)
* 187 ತರಬೇತಿ ಕೇಂದ್ರಗಳು
(ಒನ್ ಇಂಡಿಯಾ ಸುದ್ದಿ)












Click it and Unblock the Notifications