ದೇಶದ 6.3 ಕೋಟಿ ಜನ ಇನ್ನೂ ಶುದ್ಧ ನೀರು ಕಂಡಿಲ್ಲ, ಕುಡಿದಿಲ್ಲ!
ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿರುವ 6.3 ಕೋಟಿ ಜನರು ಶುದ್ಧ ಜೀವಜಲವನ್ನು ನೋಡಿಲ್ಲ, ಕುಡಿಲ್ಲ. ಶುದ್ಧ ನೀರಿನಿಂದ ವಂಚಿತರಾದವರೆಲ್ಲ ಕಡು ಬಡವರು ಮತ್ತು ಸಾಮಾಜಿಕವಾಗಿ ಹಿಂದುಳಿದವ ವಿವರವನ್ನು ವಿಶ್ವಜಲದಿನದಂದು ನೆನಯಲೇಬೇಕಿದೆ.
ಬೆಂಗಳೂರು, ಮಾರ್ಚ್ 22: ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿರುವ 6.3 ಕೋಟಿ ಜನರು ಶುದ್ಧ ಜೀವಜಲವನ್ನು ನೋಡಿಲ್ಲ, ಕುಡಿಲ್ಲ. ಶುದ್ಧ ನೀರಿನಿಂದ ವಂಚಿತರಾದವರೆಲ್ಲ ಕಡು ಬಡವರು ಮತ್ತು ಸಾಮಾಜಿಕವಾಗಿ ಹಿಂದುಳಿದವ ವಿವರವನ್ನು ವಿಶ್ವಜಲದಿನದಂದು ನೆನಯಲೇಬೇಕಿದೆ.
'ವಿಶ್ವ ಜಲ ದಿನದ' ಅಂಗವಾಗಿ ಜಾಗತಿಕ ಮಟ್ಟದಲ್ಲಿ ನೀರಿನ ಸ್ಥಿತಿಗತಿ ಕುರಿತಾಗಿ ವಾಟರ್‌ಏಡ್ ಸಂಸ್ಥೆ ಬಿಡುಗಡೆ ಮಾಡಿರುವ 'ವೈಲ್ಡ್ ವಾಟರ್' ಎಂಬ ವರದಿ ನೀಡಿದೆ.[ಬಕೆಟ್ ನೀರಲ್ಲಿ ಸ್ನಾನ ಮಾಡಿ, ವಾರಕ್ಕೊಮ್ಮೆ ಗಾಡಿ ತೊಳೀರಿ...]
ಶುದ್ಧ ನೀರಿನ ಕೊರತೆ ಎದುರಿಸುತ್ತಿರುವವರ ಸಂಖ್ಯೆ ಭಾರತದಲ್ಲೇ ಹೆಚ್ಚಿದೆ. 6.3 ಕೋಟಿ ಎಂದರೆ ಬ್ರಿಟನ್ನಿನ ಜನಸಂಖ್ಯೆಗೆ ಸಮ ಎಂದು ವರದಿ ವಿವರಿಸಿದೆ. ಜಾಗತಿಕವಾಗಿ 66.3 ಕೋಟಿ ಜನರಿಗೆ ಶುದ್ಧ ನೀರು ಸಿಗುತ್ತಿಲ್ಲ. ಈ ಪೈಕಿ ಗ್ರಾಮೀಣ ಭಾಗದ ಜನರೇ 52.2 ಕೋಟಿಯಷ್ಟಿದ್ದಾರೆ ಎಂದು ವರದಿ ಹೇಳಿದೆ. ಜಲಕ್ಷಾಮಕ್ಕೆ ಕಾರಣಗಳೇನು? ಆರೋಗ್ಯದ ಮೇಲೆ ಏನು ಪರಿಣಾಮ ಬೀರಲಿದೆ? ಮುಂದೆ ಓದಿ..(ಪಿಟಿಐ)[ವೇಸ್ಟ್ ಆಗ್ತಿದೆ ಶೇ 50ರಷ್ಟು ಕಾವೇರಿ ನೀರು]

ಭಾರತದಲ್ಲೇ ಸಂಖ್ಯೆ ಹೆಚ್ಚು
ಭಾರತದಲ್ಲಿ ಸರಿ ಸುಮಾರು 6.3 ಕೋಟಿ ಜನ ಶುದ್ಧ ಜಲ ವಂಚಿತರಾಗಿದ್ದಾರೆ. ಇದು ಬ್ರಿಟನ್ನಿನ ಜನಸಂಖ್ಯೆಗೆ ಸಮ. ಜಾಗತಿಕವಾಗಿ 66.3 ಕೋಟಿ ಜನರಿಗೆ ಶುದ್ಧ ನೀರು ಸಿಗುತ್ತಿಲ್ಲ. ಈ ಪೈಕಿ ಗ್ರಾಮೀಣ ಭಾಗದ ಜನರೇ 52.2 ಕೋಟಿಯಷ್ಟಿದ್ದಾರೆ ಎಂದು ವರದಿ ಹೇಳಿದೆ.[ಮಳೆ ಕೊಯ್ಲು ಬಗ್ಗೆ ಮೊಬೈಲ್‌ನಲ್ಲೇ ಮಾಹಿತಿ ಪಡೆಯಿರಿ]

ಸರ್ಕಾರದ ಇಚ್ಛಾಶಕ್ತಿ ಕೊರತೆ
ಇವರ ಸಂಪನ್ಮೂಲಗಳ ಸದ್ಬಳಕೆ ಹಾಗೂ ವಿನಿಯೋಗ ಮಾಡುವುದರಲ್ಲಿ ಸರ್ಕಾರಗಳು ಎಡವುತ್ತಿರುವುದೇ ಸಮಸ್ಯೆ ಉಲ್ಬಣಕ್ಕೆ ಕಾರಣ. ನೀರಿಗಾಗಿ ಹೆಚ್ಚುತ್ತಿರುವ ಬೇಡಿಕೆ, ಜನಸಂಖ್ಯೆ ಹೆಚ್ಚಳ ಮತ್ತು ಹೆಚ್ಚು ನೀರು ಬಳಸುವ ಕೃಷಿ ಪದ್ಧತಿಗಳ ಅನುಸರಣೆಯಿಂದ ನೀರಿನ ಮೇಲಿನ ಹೊರೆ ಮತ್ತಷ್ಟು ಹೆಚ್ಚಿದೆ.[ಇನ್ನೂ ಹೆಚ್ಚಾಗಲಿ ಮಳೆ ಸುಗ್ಗಿ ಕೇಂದ್ರ]

ಹಳ್ಳಿಗಳಲ್ಲಿ ರೋಗ ರುಜಿನ
ಗ್ರಾಮೀಣ ಭಾಗಗಳಲ್ಲಿ ಈ ಸಮಸ್ಯೆ ಇರುವುದರಿಂದ ಕಾಲರಾ, ಕಣ್ಣಿನ ರೋಗ (ಟ್ರಕೋಮ), ಮಲೇರಿಯಾ ಮತ್ತು ಡೆಂಗ್ಯೂ ಸೇರಿದಂತೆ ಅನೇಕ ಸಾಂಕ್ರಾಮಿಕ ರೋಗಗಳು ಕಾಡುತ್ತಿವೆ. ಶೇ 67ರಷ್ಟು ಮಂದಿ ಗ್ರಾಮೀಣ ಭಾಗದಲ್ಲಿದ್ದು, ನೀರು ಸಿಗದೆ ಪರದಾಟ ಒಂದೆಡೆಯಾದರೆ, ಕಲುಷಿತ ನೀರು ಸೇವನೆಯಿಂದ ರೋಗ ರುಜಿನಗಳು ಇನ್ನೊಂದೆಡೆ ಕಾಡುತ್ತಿವೆ.

ಸೆಲೆಬ್ರಿಟಿಗಳಿಂದ ಜಾಗೃತಿ
ಬೆಂಗಾಲಿ ನಟಿ ರಿತುಪರ್ಣ ಸೇನ್ ಗುಪ್ತಾ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ವಿಶ್ವ ಜಲ ದಿನದ ಅಂಗವಾಗಿ ಜನ ಜಾಗೃತಿ ಮೂಡಿಸುತ್ತಿದ್ದಾರೆ. ಒಂದು ಬಕೆಟ್ ನೀರು ಉಳಿಸಿ, ಹೋಳಿ ಹಬ್ಬದಂದು ನೀರು ಕಡಿಮೆ ಬಳಸಿ, ಕಾರು, ಮನೆ ಸ್ವಚ್ಛಗೊಳಿಸುವುದು, ನೀರು ಪೋಲಾಗುವುದನ್ನು ತಡೆಗಟ್ಟಿ ಎಂಬ ಜಾಗೃತಿ ಸಂದೇಶ ಹರಡುತ್ತಿದ್ದಾರೆ.

ಪ್ರತಿಕೂಲ ಹವಾಮಾನ
ಶುದ್ಧ ನೀರಿನಿಂದ ವಂಚಿತರಾಗಿರುವ ಗ್ರಾಮೀಣ ಭಾಗದ ಬಡವರು ಪ್ರತಿಕೂಲ ಹವಾಮಾನ ಮತ್ತು ಹವಾಮಾನ ಬದಲಾವಣೆಯ ಅನನುಕೂಲತೆಗಳಿಗೆ ತುತ್ತಾಗುವ ಅಪಾಯ ಹೆಚ್ಚು ಎಂದು ವರದಿ ತಿಳಿಸಿದೆ. ಭಾರತದ ಉತ್ತರ-ಮಧ್ಯ ಭಾಗವಾದ ಬುಂದೇಲ್‌ಖಂಡದಲ್ಲಿ ಬರ ಎಂಬುದು ಈಗ ಜನರ ಜೀವನದ ಅವಿಭಾಜ್ಯ ಅಂಗವಾಗಿ ಬದಲಾಗಿದೆ. ಸತತ ಮೂರು ವರ್ಷಗಳಿಂದ ಅಪ್ಪಳಿಸಿರುವ ಬರಸ್ಥಿತಿಯು ಕೋಟ್ಯಂತರ ಜನರನ್ನು ಹಸಿವು ಮತ್ತು ಬಡತನದ ಕೂಪಕ್ಕೆ ತಳ್ಳಿದೆ
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications