ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗತ್ತಿನ ಟಾಪ್-10 ಕಲುಷಿತ ನಗರಗಳ ಪಟ್ಟಿಯಲ್ಲಿ ದೆಹಲಿ, ಮುಂಬೈ, ಕೋಲ್ಕತ್ತಾ!

|
Google Oneindia Kannada News

ನವೆದೆಹಲಿ, ನವೆಂಬರ್ 13: ರಾಷ್ಟ್ರ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟ ಕ್ಷೀಣಿಸುತ್ತಿರುವುದರಿಂದ, ಮಂಜು ಮತ್ತು ಹೊಗೆ ಆವರಿಸಲಿದೆ. ಮುಂದಿನ ಮೂರು ದಿನಗಳ ಕಾಲ ಗೋಚರತೆ ಕಳಪೆಯಾಗಿರುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ಹಿರಿಯ ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಸ್ವಿಟ್ಜರ್ಲೆಂಡ್ ಮೂಲದ ಹವಾಮಾನ ಗುಂಪಿನ IQAir ಪ್ರಕಾರ, ಇದು ದೆಹಲಿ ಮಾತ್ರವಲ್ಲದೆ ಭಾರತದ ಎರಡು ಮೆಟ್ರೋ ನಗರಗಳು ಕಳಪೆ ಗುಣಮಟ್ಟದ ವಾಯು ಮಾಲಿನ್ಯ ದಾಖಲಾಗಿದೆ.

ಯುನೈಟೆಡ್ ನೇಷನ್ಸ್ ಎನ್ವಿರಾನ್ಮೆಂಟಲ್ ಪ್ರೋಗ್ರಾಂ (UNEP) ಮಾಡಿರುವ ಪಟ್ಟಿಯಲ್ಲಿ ಜಗತ್ತಿನ ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ದೆಹಲಿ ಜೊತೆಗೆ ಮುಂಬೈ ಮತ್ತು ಕೋಲ್ಕತ್ತಾಗಳನ್ನು ಸೇರಿಸಲಾಗಿದೆ. ಜಗತ್ತಿನ ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ಭಾರತದ ಮೂರು ನಗರಗಳು ಗುರುತಿಸಿಕೊಂಡಿವೆ.

ದೆಹಲಿಯಲ್ಲಿ ದಟ್ಟ ಹೊಗೆ: ಎರಡು ದಿನ ಲಾಕ್‌ಡೌನ್ ಮಾಡ್ತೀರಾ ಎಂದ ನ್ಯಾಯಾಲಯದೆಹಲಿಯಲ್ಲಿ ದಟ್ಟ ಹೊಗೆ: ಎರಡು ದಿನ ಲಾಕ್‌ಡೌನ್ ಮಾಡ್ತೀರಾ ಎಂದ ನ್ಯಾಯಾಲಯ

IQAir ಮಾಡಲಾಗಿರುವ ಪಟ್ಟಿಯಲ್ಲಿ AQI 460 ವಾಯು ಗುಣಮಟ್ಟವನ್ನು ಹೊಂದಿರುವ ದೆಹಲಿಯು ಜಗತ್ತಿನ ಕಲುಷಿತ ನಗರಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಪಶ್ಚಿಮ ಬಂಗಾಳ ರಾಜಧಾನಿ ಆಗಿರುವ ಕೋಲ್ಕತ್ತಾ ಆರನೇ ಸ್ಥಾನದಲ್ಲಿದ್ದರೆ, ಮಹಾರಾಷ್ಟ್ರದ ರಾಜಧಾನಿ ಮುಂಬೈ ಇಡೀ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಕೆಟ್ಟ AQI ಸೂಚ್ಯಂಕಗಳನ್ನು ದಾಖಲಿಸುವ ವಿಶ್ವದ ಇತರ ನಗರಗಳ ಪಟ್ಟಿಯಲ್ಲಿ ಪಾಕಿಸ್ತಾನದ ಲಾಹೋರ್ ಮತ್ತು ಚೀನಾದ ಚೆಂಗ್ಡು ನಗರಗಳು ಸೇರಿವೆ.

ವಿಶ್ವದ ಅತಿಹೆಚ್ಚು ಕಲುಷಿತ ನಗರಗಳನ್ನು ತಿಳಿಯಿರಿ

ವಿಶ್ವದ ಅತಿಹೆಚ್ಚು ಕಲುಷಿತ ನಗರಗಳನ್ನು ತಿಳಿಯಿರಿ

ದೇಶ - ವಾಯು ಗುಣಮಟ್ಟದ ಸೂಚ್ಯಂಕ(AQI)

1. ದೆಹಲಿ(ಭಾರತ) - 460

2. ಲಾಹೋರ್(ಪಾಕಿಸ್ತಾನ)- 328

3. ಚೆಂಗ್ದು(ಚೀನಾ) - 176

4. ಮುಂಬೈ(ಭಾರತ) - 169

5. ಕರಾಚಿ(ಪಾಕಿಸ್ತಾನ) - 165

6. ಕೋಲ್ಕತ್ತಾ(ಭಾರತ) - 165

7. ಸೋಫಿಯಾ(ಬುಲ್ಗಾರಿಯಾ)- 164

8. ಢಾಕಾ(ಬಾಂಗ್ಲಾದೇಶ) - 160

9. ಬೆಲ್‌ಗ್ರೇಡ್(ಸರ್ಬಿಯಾ) - 159

10. ಜಕಾರ್ತಾ(ಇಂಡೋನೇಷ್ಯಾ)- 158

ಅತ್ಯಂತ ಕಳಪೆ ಗುಣಮಟ್ಟದ ಗಾಳಿ ಬಗ್ಗೆ ವರದಿ

ಅತ್ಯಂತ ಕಳಪೆ ಗುಣಮಟ್ಟದ ಗಾಳಿ ಬಗ್ಗೆ ವರದಿ

ಭೂ ವಿಜ್ಞಾನ ಸಚಿವಾಲಯದ ಅಡಿಯಲ್ಲಿ ಏರ್ ಕ್ವಾಲಿಟಿ ಮತ್ತು ಹವಾಮಾನ ಮುನ್ಸೂಚನೆ ಮತ್ತು ಸಂಶೋಧನೆಯ ವ್ಯವಸ್ಥೆ (SAFAR) ಕೂಡ ದೆಹಲಿಯಲ್ಲಿ ಗಾಳಿಯ ಗುಣಮಟ್ಟವು 390 ರ ವಾಯು ಗುಣಮಟ್ಟ ಸೂಚ್ಯಂಕದೊಂದಿಗೆ (AQI) 'ಅತ್ಯಂತ ಕಳಪೆ' ವಿಭಾಗದಲ್ಲಿದೆ ಎಂದು ವರದಿ ಮಾಡಿದೆ. ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿಯ ವಿಶ್ಲೇಷಣೆಯ ಪ್ರಕಾರ, ದೆಹಲಿಯ ಜನರು ಪ್ರತಿ ವರ್ಷ ನವೆಂಬರ್ 1 ರಿಂದ ನವೆಂಬರ್ 15ರ ನಡುವೆ ಇಂಥ ಕಲುಷಿತ ಗಾಳಿಯನ್ನು ಉಸಿರಾಡುತ್ತಾರೆ. ದೀಪಾವಳಿಯ ನಂತರದ ಆರು ದಿನಗಳಲ್ಲಿ ನಗರದಲ್ಲಿ ಕಳಪೆ ವಾಯು ಗುಣಮಟ್ಟ ದಾಖಲಾಗಿದೆ.

ರಾಷ್ಟ್ರ ರಾಜಧಾನಿಯಲ್ಲಿ ವಾಯುವಿನ ಗುಣಮಟ್ಟ

ರಾಷ್ಟ್ರ ರಾಜಧಾನಿಯಲ್ಲಿ ವಾಯುವಿನ ಗುಣಮಟ್ಟ

ಶುಕ್ರವಾರದ ಹೊತ್ತಿಗೆ ದೆಹಲಿಯಲ್ಲಿ ಗಾಳಿಯ ಗುಣಮಟ್ಟವು "ಅತ್ಯಂತ ಕಳಪೆ" ಮಟ್ಟದಿಂದ ಸುಧಾರಿಸಿದಂತೆ ಗೋಚರಿಸಿತು. ರಾಷ್ಟ್ರ ರಾಜಧಾನಿಯನ್ನು ಆವರಿಸಿರುವ ಹೊಗೆ ಮತ್ತು ಮಬ್ಬಿನ ದಟ್ಟವಾದ ಪದರದಿಂದ ಜನರು ಜಾಗೃತರಾದರು. ಸಿಸ್ಟಂ ಆಫ್ ಏರ್ ಕ್ವಾಲಿಟಿ ಮತ್ತು ವೆದರ್ ಫೋರ್ಕಾಸ್ಟಿಂಗ್ ಅಂಡ್ ರಿಸರ್ಚ್ (SAFAR) ಪ್ರಕಾರ ದೆಹಲಿಯಲ್ಲಿ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ (AQI) 390 ಆಗಿತ್ತು. ಸಂಜೆ 4 ರ ಹೊತ್ತಿಗೆ ದೆಹಲಿಯಲ್ಲಿ 24-ಗಂಟೆಗಳ ಸರಾಸರಿ AQI 471 ಆಗಿತ್ತು. ಇದು ಈ ಋತುವಿನಲ್ಲೇ ಅತ್ಯಂತ ಕಳಪೆ ಗುಣಮಟ್ಟ ಎಂದು ದಾಖಲಾಗಿದ್ದು, ಗುರುವಾರ ಅದೇ ವಾಯು ಗುಣಮಟ್ಟ ಸೂಚ್ಯಂಕ 411 ಆಗಿತ್ತು.

ವಾಯು ಗುಣಮಟ್ಟ ಎಷ್ಟಿದ್ದರೆ ಉತ್ತಮ?

ವಾಯು ಗುಣಮಟ್ಟ ಎಷ್ಟಿದ್ದರೆ ಉತ್ತಮ?

ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಹಾಳಾಗಿ ಹೋಗಿದ್ದು, ಇಲ್ಲಿ ಗಾಳಿಯೇ ವಿಷಾನಿಲವಾಗಿ ಪರಿವರ್ತನೆ ಆಗಿ ಬಿಟ್ಟಿದೆ. ಹಾಗಿದ್ದರೆ ಗಾಳಿಯ ಗುಣಮಟ್ಟದ ಪ್ರಮಾಣ ಎಷ್ಟಿರಬೇಕು ಎಂದು ನೋಡುವುದಾದರೆ,

- 00-50 ಉತ್ತಮ

- 51-100 ತೃಪ್ತಿದಾಯಕ

- 101-200 ಮಧ್ಯಮ

- 201-300 ಕಳಪೆ

- 301-400 ಅತಿಕಳಪೆ

- 401-500 ಅಪಾಯಕಾರಿ

- 500 ನಂತರ ಅತಿ ಅಪಾಯಕಾರಿ

English summary
World's Top 10 Most Polluted Cities: Three Indian Cities Listed. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X