ಒಬ್ಬರಿಗೆ ಒಬ್ಬ ಹೆಂಡತಿ ಸಾಕು ಅನ್ನೋ ಕಾಲದಲ್ಲಿ ಇವರಿಗೆ 39! ಬೆರಗು ಮೂಡಿಸುತ್ತೆ ವಿಶ್ವದ ಅತಿದೊಡ್ಡ ಕುಟುಂಬದ ಕಥೆ

ಪ್ರವಾಸಿಗರನ್ನು ಆಕರ್ಷಿಸುವ ಪ್ರಮುಖ ತಾಣಗಳ ಪೈಕಿ ಈಶಾನ್ಯ ಭಾರತದ ಮಿಜೋರಾಂ ರಾಜ್ಯವು ಒಂದು. ಇಲ್ಲಿನ ಪ್ರೇಕ್ಷಣೀಯ ಸ್ಥಳಗಳನ್ನು ಕಣ್ತುಂಬಿಕೊಳ್ಳಲು ಅಪಾರ ಜನ ಆಗಮಿಸುತ್ತಾರೆ. ಅವರೆಲ್ಲರು ಇಲ್ಲಿನ ಸಣ್ಣ ಹಳ್ಳಿಯಲ್ಲಿರುವ ವಿಶ್ವದ ಅತ್ಯಂತ ದೊಡ್ಡ ಕುಟುಂಬ ಕಂಡು ಅಚ್ಚರಿ ವ್ಯಕ್ತಪಡಿಸುವುದು ಸಾಮಾನ್ಯವೆಂಬಂತಾಗಿದೆ. ಅಷ್ಟರ ಮಟ್ಟಿಗೆ ಈ ಅವಿಭಕ್ತ ಕುಟುಂಬ ಪ್ರಖ್ಯಾತಿ ಪಡೆದಿದೆ. ಯಾವುದು ಈ ಕುಟುಂಬ? ಎಷ್ಟು ಜನ ಇದ್ದಾರೆ? ಕುಟುಂಬ ಹಿನ್ನೆಲೆ, ದೈನಂದಿನ ಜೀವನ ಕುರಿತು ಮಾಹಿತಿ ಇಲ್ಲಿದೆ.

ಮಿಜೋರಾಂ ರಾಜ್ಯದ ಒಂದು ಸಣ್ಣ ಹಳ್ಳಿಯಲ್ಲಿದೆ ಈ ದೊಡ್ಡ ಕುಟುಂಬ. ಈ ಕುಟುಂಬದ ಮುಖ್ಯಸ್ಥ ಜಿಯೋನಾ ಚಾನಾ. 76 ವರ್ಷ ವಯಸ್ಸಿನ ಈ ಚಾನಾ ಅವರು ಜೂನ್ 2021 ರಲ್ಲಿ ನಿಧನರಾದರು. ಅವರ ನಿಧನದ ಬಳಿಕವು ಈ ಕುಟುಂಬದ ಪ್ರಖ್ಯಾತಿ ಮುಂದುವರಿದಿದ್ದು, ಪ್ರಪಂಚದಾದ್ಯಂತ ಹಲವು ವರ್ಷಗಳಿಂದ ಪ್ರಸಿದ್ಧಿ ಪಡೆದಿದೆ. ಬೇರೆ ಬೇರೆ ರಾಜ್ಯ, ದೇಶಗಳಿಂದ ಅನೇಕ ಪ್ರವಾಸಿಗರು ಚಾನಾ ಕುಟುಂಬ ನೋಡಲು ಆಗಮಿಸುತ್ತಾರೆ.

World s Largest Family

ಚಾನಾಗೆ 39 ಮಂದಿ ಹೆಂಡತಿಯರು, 94 ಮಕ್ಕಳು!

ಜಿಯೋನಾ ಚಾನಾ ಅವರು ಅಂದಿನ ಕಾಲದ ಸಾಮಾನ್ಯ ಪುರುಷರಂತೆ ತಮ್ಮ 17ನೇ ವಯಸ್ಸಿನಲ್ಲಿ ಮೊದಲ ಮದುವೆ ಆದರು. ಆದರೆ ಅವರ ಮದುವೆ ಒಂದಕ್ಕೆ ಸೀಮಿತವಾಗಲಿಲ್ಲ. ಅವರು ಬರೋಬ್ಬರಿ 39 ಬಾರಿ ವಿವಾಹವಾಗಿದ್ದಾರೆ. ಎಲ್ಲ ಪತ್ನಿಯರಿಂದ ಅವರಿಗೆ ಜನಿಸಿದ್ದು ಬರೋಬ್ಬರಿ 94 ಮಕ್ಕಳು. ಅದರಲ್ಲಿ ಹಲವರಿಗೆ ಮದುವೆ ಆಗಿದ್ದು, ಒಟ್ಟು 14 ಸೊಸೆಯಂದಿರು ಒಂದೇ ಮನೆಯಲ್ಲಿ ವಾಸಿಸುತ್ತಿದ್ದ, ಅವರೆಲ್ಲರಿಗೂ ಮಕ್ಕಳಾಗಿವೆ. ಚಾನಾಗೆ ಒಟ್ಟು 33ಕ್ಕೂ ಅಧಿಕ ಮೊಮ್ಮಕ್ಕಳಿದ್ದಾರೆ. ಅವರೆಲ್ಲ ಒಟ್ಟಗೂಡಿಸಿದರೆ ಸುಮಾರು 200ಕ್ಕೂ ಅಧಿಕ ಮಂದಿ, ಅವರೆಲ್ಲರು ಇವತ್ತಿಗೂ ಒಂದೇ ಸೂರಿನಡಿ ವಾಸಿಸುತ್ತಿದ್ದಾರೆ. ಈ ಸಂಗತಿಯೇ ಇಂದಿನ ಜನರ ಕೌತುಕಕ್ಕೆ ಕಾರಣವಾಗಿದೆ.

GDP 2026: ಆರ್ಥಿಕ ಅನಿಶ್ಚಿತತೆ ಮಧ್ಯೆ ಭಾರತ ಜಿಡಿಪಿಯಲ್ಲಿ ಪ್ರಗತಿ: ಬೆಂಗಳೂರಿಗೆ ಅಗ್ರಸ್ಥಾನ, ಪಟ್ಟಿ ಇಲ್ಲಿದೆ
GDP 2026: ಆರ್ಥಿಕ ಅನಿಶ್ಚಿತತೆ ಮಧ್ಯೆ ಭಾರತ ಜಿಡಿಪಿಯಲ್ಲಿ ಪ್ರಗತಿ: ಬೆಂಗಳೂರಿಗೆ ಅಗ್ರಸ್ಥಾನ, ಪಟ್ಟಿ ಇಲ್ಲಿದೆ

ಸಣ್ಣ ಹಳ್ಳಿಯಲ್ಲಿದೆ ಬೃಹತ್ ಮನೆ, ದೊಡ್ಡ ಕುಟುಂಬ

ಮಿಜೋರಾಂಗೆ ಬಂದವರೆ ಪೈಕಿ ಬಹುತೇಕರು ಇಲ್ಲಿನ 'ಬಕ್ತಂಗ್' ಎಂಬ ಹಳ್ಳಿಗೆ ಭೇಟಿ ನೀಡುತ್ತಾರೆ. ಇಲ್ಲಿರುವ ಚಾನಾ ಅವರ ಬೃಹತ್ ಕುಟುಂಬವನ್ನು ಕಣ್ತುಂಬಿಕೊಳ್ಳುತ್ತಾರೆ. ಚಾನಾ ಅವರ ದೊಡ್ಡ ಮನೆಯ ಹೆಸರು 'ಚುವಾನ್ ಥರ್ ರನ್', ಇದು 'ಹೊಸ ತಲೆಮಾರಿನ ಮನೆ' ಎಂದು ಅರ್ಥ ನೀಡುತ್ತದೆ. ಬರೋಬ್ಬರಿ ನಾಲ್ಕು ಮಹಡಿಯ ಬೃಹತ್ ಮನೆ ಇದಾಗಿದ್ದು, ಸುಮಾರು 100 ಕೊಠಡಿಗಳಿವೆ. ಸುತ್ತಮುತ್ತಲ ಪ್ರದೇಶಕ್ಕಿಂತ ಈ ಮನೆ ತುಂಬಾ ಎತ್ತರದಲ್ಲಿದೆ.

ಕುಟುಂಬ ನಿರ್ವಹಣೆಗಾಗಿ ಮನೆಯಲ್ಲಿ ಸದಸ್ಯರು ಒಟ್ಟಾಗಿ ಕೆಲಸ ಮಾಡುತ್ತಾರೆ. ಮನೆಯ ಜವಾಬ್ದಾರಿಗಳನ್ನು ಎಲ್ಲರೂ ಹಂಚಿಕೊಳ್ಳುತ್ತಾರೆ. ಮನೆಯ ಹಿರಿಯ ಪತ್ನಿ ದಿನನಿತ್ಯದ ಕೆಲಸಗಳನ್ನು ನೋಡಿಕೊಂಡರೆ ಇತರರು ಮಾಡುವ ಅಡುಗೆ ಹಾಗೂ ಇನ್ನಿತರ ಮನೆ ಕೆಲಸಗಳಿಗೆ ಅವರೇ ಮಾರ್ಗದರ್ಶನ ನೀಡುತ್ತಾರೆ.

ಎಲ್ಲರಿಗೂ ನಿತ್ಯ ಅಡುಗೆ ತಯಾರಿ ಹೇಗೆ?

ನಾಲ್ಕೈದು ಜನ ಇರುವ ಮನೆಯಲ್ಲಿಯೇ ಸೌಲಭ್ಯಗಳು, ಅಡುಗೆ, ನಿತ್ಯದ ಆಹಾರ ಪದಾರ್ಥದಲ್ಲಿ ಒಂದಿದ್ದರೆ ಇನ್ನೊಂದು ಇರುವುದಿಲ್ಲ. ಸಣ್ಣ ಕುಟುಂಬ ನಿರ್ವಹಣೆಗೆ ಅಷ್ಟು ಹೆಣಗಾಡಬೇಕಿರುತ್ತದೆ. ಅಂಥದರಲ್ಲಿ ಇಷ್ಟು ದೊಡ್ಡ ಕುಟುಂಬವನ್ನು ನಿರ್ವಹಿಸುವುದು ಹೇಗೆ ಎಂಬ ಸಾಮಾನ್ಯ ಆಲೋಚನೆ ಎಲ್ಲರಿಗೂ ಬರುತ್ತದೆ. ಇವರು ಪ್ರತಿದಿನ ಬಹಳಷ್ಟು ಆಹಾರ ತಯಾರಿಸುತ್ತಾರೆ. ಅಡುಗೆ ಮಾಡಲು ದೊಡ್ಡ ಅಡುಗೆಮನೆ ಇದ್ದು, ಅಲ್ಲಿ ಮರದ ಓಲೆಗಳನ್ನು ಬಳಸಲಾಗಿದೆ. ದೊಡ್ಡ ದೊಡ್ಡ ಪಾತ್ರೆಗಳಲ್ಲಿ ಅನ್ನ, ಸಾಂಬಾರ್ ಸೇರಿ ಇನ್ನಿತರ ಆಹಾರ ಪದಾರ್ಥಗಳನ್ನು ನಿತ್ಯವು ಮಾಡಿ ಮನೆ ಮಂದಿಗೆಲ್ಲ ಮೂರು ಹೊತ್ತೂ ಬಡಿಸುತ್ತಾರೆ.

ಒಂದೊತ್ತಿಗೆ 35 ಕೋಳಿ ಬೇಕು..

ಚಾನಾ ಅವರ ಕುಟುಂಬದ ಆಹಾರ ನಿರ್ವಹಣೆಗೆ ನಿತ್ಯ 45-90 ಕೆಜಿ ಅಕ್ಕಿ ಬಳಕೆ ಆಗುತ್ತದೆ. ಸುಮಾರು 40 ಕೆಜಿ ಆಲೂಗಡ್ಡೆ, 25 ಕೆಜಿ ತರಕಾರಿ ಮತ್ತು 20 ಕೆಜಿ ಬೇಳೆ ಬೇಕಾಗುತ್ತದೆ. ಬಾಡೂಟ ಮಾಡಲು ಮುಂದಾದರೆ ಒಂದು ಹೊತ್ತಿಗೆನೇ 30-35 ಕೋಳಿಗಳು ಬೇಕಾಗುತ್ತವೆ. ಈ ಮನೆಯಲ್ಲಿ ಮತ್ತೊಂದು ವಿಶೇಷವೆಂದರೆ ಹೆಂಡತಿಯರು ಪಾಳಿಯ ಪ್ರಕಾರದಲ್ಲಿ ಅಡುಗೆ ಕೆಲಸ ಹಂಚಿಕೊಂಡು ಮಾಡುತ್ತಾರೆ.

ಕುಟುಂಬದ ಇತಿಹಾಸ, ಸಾಮಾಜಿಕ ಹಿನ್ನೆಲೆ ಏನು?

ಚಾನಾ ಅವರ ಈ ಕುಟುಂಬ 'ಲಾಲ್ಪಾ ಕೊಹ್ರಾನ್ ಥಾರ್' ಪಂಥಕ್ಕೆ ಸೇರಿದ್ದು, ಈ ಪಂಥಕ್ಕೆ ಸಾವಿರಾರು ಅನುಯಾಯಿಗಳಿದ್ದಾರೆ. ಅವರು ಕೃಷಿ ಮತ್ತು ಪಶುಪಾಲನೆಯಲ್ಲಿ ತೊಡಗಿದ್ದಾರೆ. ಅನೇಕ ವೃತ್ತಿಗಳಲ್ಲಿ ಕುಟುಂಬದ ಪುರುಷರು ನಿರತರಾಗಿದ್ದಾರೆ. ಈ ಕುಟುಂಬದ ಬಗ್ಗೆ ಅನೇಕರು ಕುತೂಹಲ ಹೊಂದಿದ್ದು, ದೇಶ-ವಿದೇಶದಿಂದ ಇಲ್ಲಿಗೆ ಬಂದು ಕುಟುಂಬವನ್ನು ಕಾಣುತ್ತಾರೆ. ಜಿಯೋನಾ ಚಾನಾ ಇಲ್ಲದಿದ್ದರೂ ಅವರ ಕುಟುಂಬ ಇಂದಿಗೂ ಆ ಸಣ್ಣ ಹಳ್ಳಿಯಲ್ಲಿ ನೆಲೆಸಿ ತಮ್ಮ ಹಳೆಯ ಪರಂಪರೆಯನ್ನು ಮುಂದುವರಿಸಿಕೊಂಡು ಸಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+