ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

World Heart Day 2022 : ವಿಶ್ವ ಹೃದಯ ದಿನ ದಿನಾಂಕ, ಇತಿಹಾಸ, ಮಹತ್ವ, ಥೀಮ್ ಮತ್ತು ಪ್ರಾಮುಖ್ಯತೆ

|
Google Oneindia Kannada News

ಆಧುನಿಕ ಜೀವನಶೈಲಿ ಮತ್ತು ಒತ್ತಡಗಳಿಂದಾಗಿ ಹದಿಹರೆಯದವರಲ್ಲಿ ಹೆಚ್ಚಾಗಿ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಎಚ್ಚರಿಕೆಯ ಗಂಟೆಯಾಗಿದೆ. ಇದರ ನಡುವೆಯೇ ರಕ್ತದೊತ್ತಡ, ಮಧುಮೇಹ, ಕೊಬ್ಬು ನಿಯಂತ್ರಣ, ನಿಯಮಿತ ಆಹಾರ ಸೇವನೆ ಹಾಗೂ ವ್ಯಾಯಾಮದಿಂದ ಹೃದಯ ಸಂಬಂಧಿ ಬೇನೆಗಳಿಂದ ದೂರವುಳಿಯಬಹುದು. ಈ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಸೆಪ್ಟೆಂಬರ್ 29 ರಂದು ವಿಶ್ವ ಹೃದಯ ದಿನ ಆಚರಿಸಲಾಗುತ್ತದೆ.

ಪ್ರತಿ ವರ್ಷ ಸೆಪ್ಟೆಂಬರ್ 29 ರಂದು ಹೃದಯರಕ್ತನಾಳದ ಕಾಯಿಲೆಗಳ ಕಾರಣಗಳು, ಅವುಗಳ ನಿರ್ವಹಣೆ ಮತ್ತು ಹೃದಯ ಕಾಯಿಲೆ ಇದ್ದವರೊಂದಿಗೆ ಮಾನವೀಯತೆ ವರ್ತನೆ, ಹೃದಯವನ್ನು ಹೇಗೆ ಕಾಪಾಡಿಕೊಳ್ಳುವುದರ ಕುರಿತು ಗಮನ ಸೆಳೆಯುವ ಸಾಧನವಾಗಿ ವಿಶ್ವದಾದ್ಯಂತ ಜನರು ವಿಶ್ವ ಹೃದಯ ದಿನವನ್ನು ಆಚರಿಸುತ್ತಾರೆ.

ವಿಶ್ವ ಹೃದಯ ದಿನವನ್ನು ಸೆಪ್ಟೆಂಬರ್ 29, 2022 ರಂದು ಆಚರಿಸಲಾಗುತ್ತದೆ. ಈ ದಿನ ಹೃದಯದ ಆರೋಗ್ಯ, ಹೃದಯರಕ್ತನಾಳದ ಕಾಯಿಲೆಗಳು, ಹೃದಯದ ಮೇಲೆ ಅತಿಯಾದ ವ್ಯಾಯಾಮದ ಪರಿಣಾಮ ಮತ್ತು ಹೃದಯದ ಆರೈಕೆ ಹೇಗೆ ಅತ್ಯಂತ ಮಹತ್ವದ್ದಾಗಿದೆ ಎಂಬುದರ ಕುರಿತು ಜಾಗೃತಿ ಮೂಡಿಸುವ ಒಂದು ಸಂದರ್ಭವಾಗಿದೆ.

ವಿಶ್ವ ಹೃದಯ ದಿನದ ಇತಿಹಾಸ

ವಿಶ್ವ ಹೃದಯ ದಿನದ ಇತಿಹಾಸ

ವರ್ಲ್ಡ್ ಹಾರ್ಟ್ ಫೆಡರೇಶನ್ ಮತ್ತು ವಿಶ್ವ ಆರೋಗ್ಯ ಸಂಸ್ಥೆಯು ಈ ಅಂತರಾಷ್ಟ್ರೀಯ ಕಾರ್ಯಕ್ರಮವನ್ನು ರಚಿಸಲು ಯೋಚಿಸಿತು. 1997 ರಿಂದ 1999 ರವರೆಗೆ ವರ್ಲ್ಡ್ ಹಾರ್ಟ್ ಫೆಡರೇಶನ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅಂಟೋನಿ ಬೇಯೆಸ್ ಡಿ ಲೂನಾ ಅವರು ಈ ಆಲೋಚನೆಯನ್ನು ಜಾರಿಗೆ ತಂದರು. ವಿಶ್ವ ಹೃದಯ ದಿನವನ್ನು ಮೂಲತಃ ಸೆಪ್ಟೆಂಬರ್ 24, 2000 ರಂದು ಆಚರಿಸಲಾಯಿತು. ಈ ವಿಶ್ವ ಸಮಾರಂಭದಲ್ಲಿ ಭಾಗವಹಿಸಲು 90 ಕ್ಕೂ ಹೆಚ್ಚು ದೇಶಗಳು ಒಗ್ಗೂಡಿ ಆಚರಣೆ ಮುಂದಾದವು. ಬಳಿಕ ಅಂತರರಾಷ್ಟ್ರೀಯ ವಿಶ್ವ ಹೃದಯ ದಿನವನ್ನು ಆಚರಿಸುವ ನಿಖರವಾದ ದಿನಾಂಕವನ್ನು ಸೆಪ್ಟೆಂಬರ್ 29 ಎಂದು ನಿರ್ಧರಿಸಲಾಯಿತು.

ವಿಶ್ವ ಹೃದಯ ದಿನದ ಮಹತ್ವ

ವಿಶ್ವ ಹೃದಯ ದಿನದ ಮಹತ್ವ

ಹೃದಯ ರಕ್ತನಾಳದ ಕಾಯಿಲೆಗಳ ಬಗ್ಗೆ ಜನ ಒಲವು ತೋರದಿರುವುದು, ಅದನ್ನು ತಡೆಯುವ ನಡವಳಿಕೆಯತ್ತ ಪ್ರಪಂಚದ ಗಮನವನ್ನು ಸೆಳೆಯುವುದು ಮತ್ತು ದೇಹದ ಅಂತಹ ಪ್ರಖ್ಯಾತ ಅಂಗಕ್ಕೆ ಸಂಬಂಧಿಸಿದ ಸಂಭಾವ್ಯ ಅಪಾಯಗಳನ್ನು ಹೇಗೆ ನಿರ್ವಹಿಸುವುದು ಎಂಬುದರ ಕುರಿತು ಜನರಿಗೆ ಜಾಗೃತಿ ನೀಡುವುದು ವಿಶ್ವ ಹೃದಯ ದಿನದ ಅಂತಿಮ ಗುರಿಯಾಗಿದೆ. ವಿಶ್ವದ ಜನಸಂಖ್ಯೆಯ ಮೇಲೆ ಪರಿಣಾಮ ಬೀರುವ ವಿವಿಧ ಹೃದಯರಕ್ತನಾಳದ ಸಮಸ್ಯೆಗಳು ಮತ್ತು ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸಲು ವರ್ಲ್ಡ್ ಹಾರ್ಟ್ ಫೆಡರೇಶನ್ ಈ ದಿನವನ್ನು ಸ್ಥಾಪಿಸಿದೆ.

ವಿಶ್ವ ಹೃದಯ ದಿನದ ಪ್ರಾಮುಖ್ಯತೆ

ವಿಶ್ವ ಹೃದಯ ದಿನದ ಪ್ರಾಮುಖ್ಯತೆ

ಹೆಚ್ಚುತ್ತಿರುವ ಹೃದಯಾಘಾತಗಳು ಮತ್ತು ಇತರ ಹೃದಯ ಸಂಬಂಧಿ ಪ್ರಕರಣಗಳ ಕಾರಣದಿಂದಾಗಿ ವಿಶ್ವ ಹೃದಯ ದಿನದ ಸುತ್ತಲಿನ ಚರ್ಚೆಯು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಈ ಹೃದಯರಕ್ತನಾಳದ ಸಮಸ್ಯೆಗಳಿಂದ ಹೆಚ್ಚು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಜಡ ಜೀವನಶೈಲಿಯು ಎಲ್ಲಾ ವಯಸ್ಸಿನ ಜನರ ಹೃದಯದ ಮೇಲೆ ಪರಿಣಾಮ ಬೀಳುತ್ತಿದೆ. ಅದರ ಬಗ್ಗೆ ಅರಿವು ಮೂಡಿಸುವುದೇ ಈ ದಿನದ ಉದ್ದೇಶವಾಗಿದೆ.

ವಿಶ್ವ ಹೃದಯ ದಿನದ ಥೀಮ್

ವಿಶ್ವ ಹೃದಯ ದಿನದ ಥೀಮ್

ವಿಶ್ವ ಹೃದಯ ದಿನದ 2022 ರ ಥೀಮ್ ಹೃದಯರಕ್ತನಾಳದ ಕಾಯಿಲೆಗಳ ಬಗ್ಗೆ ಜಾಗತಿಕ ಜಾಗೃತಿ ಮತ್ತು ರೋಗವನ್ನು ನಿರ್ವಹಿಸುವ ಕ್ರಮಗಳನ್ನು ಕಲಿಯುವುದರೊಂದಿಗೆ 'ಪ್ರತಿ ಹೃದಯಕ್ಕಾಗಿ ಹೃದಯವನ್ನು ಬಳಸಿ' ಆಗಿದೆ. 'ಪ್ರತಿ ಹೃದಯಕ್ಕಾಗಿ ಹೃದಯವನ್ನು ಬಳಸಿ' ಎಂಬ ಥೀಮ್‌ನಲ್ಲಿ, "ಹೃದಯವನ್ನು ಬಳಸಿ" ಎಂದರೆ ವಿಭಿನ್ನವಾಗಿ ಯೋಚಿಸುವುದು, ಸರಿಯಾದ ನಿರ್ಧಾರಗಳನ್ನು ಮಾಡುವುದು, ತಾಳ್ಮೆಯಿಂದ ವರ್ತಿಸುವುದು ಮತ್ತು ಇತರರಿಗೆ ಸಹಾಯ ಮಾಡುವುದು.

ಹೃದಯ ಸಂಬಂಧಿ ಕಾಯಿಲೆಗಳಿಂದ ದೂರವಿರುವುದು ಹೇಗೆ

ಹೃದಯ ಸಂಬಂಧಿ ಕಾಯಿಲೆಗಳಿಂದ ದೂರವಿರುವುದು ಹೇಗೆ

1. ಆಗಾಗ ಪರೀಕ್ಷೆ ಮಾಡಿಸಿಕೊಳ್ಳಿ

2. ಸಮತೋಲಿತ ಆಹಾರ ಸೇವಿಸಿ

3. ದೈಹಿಕ ಚಟುವಟಿಕೆ ಹೆಚ್ಚಿಸಿ

4. ಅಧಿಕ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಿ

5. ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಿ

6. ನಿಮಗೆ ಮಧುಮೇಹ ಇದ್ದರೆ, ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಿ

7. ಧೂಮಪಾನ ತ್ಯಜಿಸಿ

English summary
World Heart Day 2022: Know Date, History, Significance, Theme and Significance of World Heart Day Celebration in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X