ಗರ್ಭಿಣಿಯರ ಪಾಲಿಗೆ ಸಂಜೀವಿನಿಯಾದ ವಂಡರ್ ಆ್ಯಪ್: ಬಣ್ಣದ ಅಲರ್ಟ್‌ನಿಂದ ಜೀವ ಉಳಿಸುವ ಅದ್ಭುತ ತಂತ್ರಜ್ಞಾನ
ಗರ್ಭಾವಸ್ಥೆಯೆಂದರೆ ಹೆಣ್ಣಿನ ಪಾಲಿಗೆ ಅದೊಂದು ಮರುಜನ್ಮವಿದ್ದಂತೆ. ಈ ಸಮಯದಲ್ಲಿ ಎದುರಾಗುವ ಸಣ್ಣ ಆರೋಗ್ಯ ಸಮಸ್ಯೆಗಳೂ ಕೂಡ ಕೆಲವೊಮ್ಮೆ ತಾಯಿ ಮತ್ತು ಮಗುವಿನ ಪ್ರಾಣಕ್ಕೆ ಕುತ್ತು ತರಬಹುದು. ಇಂತಹ ಗರ್ಭಧಾರಣೆಯ ತೊಡಕುಗಳನ್ನ ಅವು ಗಂಭೀರ ಸ್ವರೂಪಕ್ಕೆ ತಿರುಗುವ ಮುನ್ನವೇ ಪತ್ತೆ ಹಚ್ಚಿ ಚಿಕಿತ್ಸೆ ನೀಡಲು ಸಾಧ್ಯವಾದರೆ? ಹೌದು, ಬಿಹಾರದ ದರ್ಭಾಂಗ ಜಿಲ್ಲೆಯಲ್ಲಿ ಇಂಥದ್ದೇ ಒಂದು ಅದ್ಭುತ ಯೋಜನೆ ನಡೆಯುತ್ತಿದೆ.
ಇಲ್ಲಿ ವಂಡರ್ ಆ್ಯಪ್ ಎಂಬ ನವೀನ ತಂತ್ರಜ್ಞಾನದ ಮೂಲಕ ಗರ್ಭಿಣಿಯರ ಆರೋಗ್ಯವನ್ನ ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದ್ದು, ಇದು ಸಾವಿರಾರು ತಾಯಂದಿರ ಜೀವ ಉಳಿಸುವ ಸಂಜೀವಿನಿಯಾಗಿ ಹೊರಹೊಮ್ಮಿದೆ.

ಗರ್ಭಿಣಿಯರ ಆರೋಗ್ಯ ರಕ್ಷಣೆಯಲ್ಲಿ ವಂಡರ್ ಆ್ಯಪ್ ಕಾರ್ಯನಿರ್ವಹಣೆ ಹೇಗೆ?
ತಂತ್ರಜ್ಞಾನ ಮತ್ತು ಆರೋಗ್ಯ ಕಾರ್ಯಕರ್ತೆಯರನ್ನ ಒಗ್ಗೂಡಿಸಿ ತಾಯಂದಿರ ಆರೋಗ್ಯವನ್ನ ಕಾಪಾಡುವುದು ಈ ಆ್ಯಪ್‌ನ ಮುಖ್ಯ ಉದ್ದೇಶ. ಈ ಪ್ರಕ್ರಿಯೆಯಲ್ಲಿ ಆಶಾ (ASHA) ಮತ್ತು ಜೀವಿಕಾ ಕಾರ್ಯಕರ್ತೆಯರ ಪಾತ್ರ ಬಹಳ ಮುಖ್ಯ. ಅವರು ಗರ್ಭಿಣಿಯರ ಮನೆಗೆ ಭೇಟಿ ನೀಡಿ ಅವರ ರಕ್ತದೊತ್ತಡ, ತೂಕ, ಸಕ್ಕರೆ ಕಾಯಿಲೆ ಹಾಗೂ ಇತರ ಪ್ರಮುಖ ಆರೋಗ್ಯ ವಿವರಗಳನ್ನು ಈ ಆ್ಯಪ್‌ನಲ್ಲಿ ನಮೂದಿಸುತ್ತಾರೆ.
ಮಾಹಿತಿ ನಮೂದಿಸಿದ ತಕ್ಷಣ, ಆ್ಯಪ್ ಗರ್ಭಿಣಿಯರ ಆರೋಗ್ಯ ಸ್ಥಿತಿಯನ್ನು ವಿಶ್ಲೇಷಿಸಿ ಮೂರು ಬಣ್ಣಗಳ ಮೂಲಕ ಅಲರ್ಟ್ ನೀಡುತ್ತದೆ:
* ಹಸಿರು ಬಣ್ಣ: ಆರೋಗ್ಯ ಸ್ಥಿತಿ ಸಂಪೂರ್ಣವಾಗಿ ಸಹಜವಾಗಿದೆ ಎಂಬುದನ್ನು ಇದು ಸೂಚಿಸುತ್ತದೆ.
* ಹಳದಿ ಬಣ್ಣ: ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಅಥವಾ ಅಸಹಜತೆಗಳಿದ್ದರೆ ಈ ಬಣ್ಣದ ಎಚ್ಚರಿಕೆ ಬರುತ್ತದೆ.
* ಕೆಂಪು ಬಣ್ಣ: ಗರ್ಭಿಣಿಯ ಆರೋಗ್ಯ ಸ್ಥಿತಿ ಅತ್ಯಂತ ಗಂಭೀರವಾಗಿದೆ ಮತ್ತು ತುರ್ತು ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆ ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ.
ಈ ಬಣ್ಣಗಳ ಆಧಾರದ ಮೇಲೆ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತೆಯರು ಯಾವ ಗರ್ಭಿಣಿಗೆ ಮೊದಲು ಚಿಕಿತ್ಸೆ ನೀಡಬೇಕು ಎಂಬುದನ್ನ ನಿರ್ಧರಿಸುತ್ತಾರೆ ಮತ್ತು ಅಗತ್ಯವಿದ್ದರೆ ತಕ್ಷಣವೇ ದೊಡ್ಡ ಆಸ್ಪತ್ರೆಗಳಿಗೆ ಸ್ಥಳಾಂತರಿಸಲು ವ್ಯವಸ್ಥೆ ಮಾಡುತ್ತಾರೆ.
ಡಾ. ನರ್ಮದಾ ಕುಪ್ಪುಸ್ವಾಮಿ ಮತ್ತು ಡಾ. ತ್ಯಾಗರಾಜನ್ ಶ್ರಮ
ಈ ಆ್ಯಪ್‌ನ ಕಲ್ಪನೆ ಮೊದಲು ಹುಟ್ಟಿದ್ದು ನಲವತ್ತು ವರ್ಷಗಳ ಅಪಾರ ಅನುಭವ ಹೊಂದಿರುವ ಅಮೆರಿಕದ ಇಲಿನಾಯ್ಸ್ ಮೂಲದ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ನರ್ಮದಾ ಕುಪ್ಪುಸ್ವಾಮಿ ಅವರ ಮನಸ್ಸಿನಲ್ಲಿ. ಆರಂಭದಲ್ಲಿ ಇದನ್ನು ತಮಿಳುನಾಡಿನಲ್ಲಿ ಜಾರಿಗೆ ತರಲು ಪ್ರಯತ್ನಿಸಲಾಯಿತಾದರೂ ಅದು ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಿರಲಿಲ್ಲ.
ಬಳಿಕ, ಈ ಕಲ್ಪನೆಗೆ ಜೀವ ತುಂಬಿದವರು ತಮಿಳುನಾಡಿನ ಕೊಯಮತ್ತೂರು ಮೂಲದ 2011ನೇ ಬ್ಯಾಚ್‌ನ ಐಎಎಸ್ ಅಧಿಕಾರಿ ಡಾ. ತ್ಯಾಗರಾಜನ್ ಎಸ್. ಎಂ. ಮೂಲತಃ ಎಂಬಿಬಿಎಸ್ ವೈದ್ಯರಾಗಿರುವ ಇವರು, 2010ರಲ್ಲಿ ಐಪಿಎಸ್ ಅಧಿಕಾರಿಯಾಗಿ ನಂತರ ಐಎಎಸ್ ಸೇವೆಗೆ ಸೇರಿದರು.
ದರ್ಭಾಂಗ ಜಿಲ್ಲಾಧಿಕಾರಿಯಾಗಿದ್ದ (DM) ಅವಧಿಯಲ್ಲಿ, ಜಿಲ್ಲೆಯ ಮಾತೃತ್ವ ಮರಣ ಪ್ರಮಾಣದ ಬಗ್ಗೆ ಪರಿಶೀಲನೆ ನಡೆಸಿದಾಗ ಇಲ್ಲಿನ ಆರೋಗ್ಯ ವ್ಯವಸ್ಥೆ ತುರ್ತು ಪರಿಸ್ಥಿತಿಗಳಿಗೆ ತ್ವರಿತವಾಗಿ ಸ್ಪಂದಿಸುತ್ತಿರಲಿಲ್ಲ ಎಂಬುದು ಡಾ. ತ್ಯಾಗರಾಜನ್ ಅವರ ಗಮನಕ್ಕೆ ಬಂದಿತ್ತು. ಈ ಕೊರತೆಯನ್ನು ನೀಗಿಸಲು 2019ರ ಆಗಸ್ಟ್‌ನಲ್ಲಿ ವಂಡರ್ ಆ್ಯಪ್ ಅನ್ನ ಅಧಿಕೃತವಾಗಿ ದರ್ಭಾಂಗದಲ್ಲಿ ಪರಿಚಯಿಸಿದರು.
What If A Colour-Coded Alert Could Help Spot A Pregnancy Complication Before It Turns Critical?In Bihar, the Wonder App uses green, yellow and red alerts to flag pregnancy risks, helping health workers identify women who may need urgent medical attention.The idea came from Dr Narmadha Kuppuswami, an obstetrician and gynaecologist with four decades of experience.Dr Thiyagarajan SM, a 2011-batch IAS officer, helped bring it to life in Bihar.Launched in Darbhanga in August 2019, the app expanded from two blocks to all 18 blocks of the district.ASHA and Jeevika workers update expectant mothers’ health details and vital signs.Green indicates normal readings, yellow flags mild abnormalities, and red signals severe abnormalities requiring urgent attention.Health workers can then prioritise cases and arrange referrals.Originally from Coimbatore, Tamil Nadu, Dr Thiyagarajan completed an MBBS before joining the IPS in 2010 and the IAS in 2011.During his tenure as Darbhanga’s District Magistrate, he helped bring technology and frontline healthcare workers together to strengthen maternal healthcare.Sometimes, spotting a warning sign in time can make all the difference.#MaternalHealth #HealthcareInnovation #IASThiyagarajanSM[Wonder App Bihar, Dr Thiyagarajan SM IAS, pregnancy monitoring app India, maternal healthcare Bihar, maternal mortality prevention, digital healthcare]
— The Better India (@thebetterindia) October 21, 2026
ಮಾತೃತ್ವ ಮರಣ ಪ್ರಮಾಣ ಇಳಿಕೆ: ತಂತ್ರಜ್ಞಾನದ ಯಶಸ್ಸು
ಆರಂಭದಲ್ಲಿ ದರ್ಭಾಂಗದ ಕೇವಲ ಎರಡು ತಾಲೂಕುಗಳಲ್ಲಿ ಪ್ರಾಯೋಗಿಕವಾಗಿ ಈ ಯೋಜನೆಯನ್ನ ಜಾರಿಗೆ ತರಲಾಯಿತು. ಇದರ ಅತ್ಯುತ್ತಮ ಫಲಿತಾಂಶಗಳನ್ನ ಕಂಡ ನಂತರ, ಜಿಲ್ಲೆಯ ಎಲ್ಲಾ 18 ತಾಲೂಕುಗಳಿಗೂ ಈ ವಂಡರ್ ಆ್ಯಪ್ ಸೇವೆಯನ್ನ ವಿಸ್ತರಿಸಲಾಯಿತು. ಬಿಹಾರ ಸರ್ಕಾರದ ಆರೋಗ್ಯ ಸಚಿವಾಲಯ ಹಾಗೂ ಇತರ ಇಲಾಖೆಗಳ ಸಂಪೂರ್ಣ ಬೆಂಬಲದೊಂದಿಗೆ ಇದು ದೊಡ್ಡ ಮಟ್ಟದ ಯಶಸ್ಸು ಕಂಡಿತು.
ಸರಿಯಾದ ಸಮಯದಲ್ಲಿ ಅಪಾಯದ ಮುನ್ಸೂಚನೆ ಸಿಗುವುದರಿಂದ ಎಷ್ಟೋ ಜೀವಗಳನ್ನ ಉಳಿಸಬಹುದು ಎಂಬುದಕ್ಕೆ ಈ 'ವಂಡರ್ ಆ್ಯಪ್' ಉದಾಹರಣೆಯಾಗಿದೆ. ಸರಿಯಾದ ಸಮಯದಲ್ಲಿ ಕೆಂಪು ಬಣ್ಣದ ಎಚ್ಚರಿಕೆ ಸಿಕ್ಕಿದ್ದರಿಂದ, ಎಷ್ಟೋ ಗರ್ಭಿಣಿಯರಿಗೆ ತಕ್ಷಣದ ಚಿಕಿತ್ಸೆ ಸಿಕ್ಕಿ ಅವರ ಪ್ರಾಣ ಉಳಿದಿದೆ.
ಇಂದಿನ ದಿನಗಳಲ್ಲಿ ಆರೋಗ್ಯ ಕ್ಷೇತ್ರಕ್ಕೆ ತಂತ್ರಜ್ಞಾನದ ಸ್ಪರ್ಶ ನೀಡಿದರೆ ಎಂತಹ ಅದ್ಭುತ ಬದಲಾವಣೆ ತರಬಹುದು ಎಂಬುದನ್ನ ದರ್ಭಾಂಗ ಜಿಲ್ಲೆ ಇಡೀ ದೇಶಕ್ಕೆ ತೋರಿಸಿಕೊಟ್ಟಿದೆ. ಆರೋಗ್ಯ ಕಾರ್ಯಕರ್ತರು ಮತ್ತು ಡಿಜಿಟಲ್ ತಂತ್ರಜ್ಞಾನದ ಈ ಅದ್ಭುತ ಸಂಯೋಜನೆ ಭವಿಷ್ಯದಲ್ಲಿ ಭಾರತದ ಇತರ ರಾಜ್ಯಗಳಿಗೂ ವಿಸ್ತರಣೆಯಾಗಬೇಕಾದ ಅಗತ್ಯವಿದೆ.


Click it and Unblock the Notifications
