ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆರಿಗೆದಾರರ ಪ್ರಮಾದ ಕ್ಷಮಿಸುತ್ತೇವೆ: GST ಬಗ್ಗೆ ಕೇಂದ್ರದ ಅಭಯ

ಜಿಎಸ್ ಟಿ ಆರಂಭಿಕ ದಿನಗಳಲ್ಲಿ ಉದ್ಯಮಿಗಳು, ವ್ಯಾಪಾರಸ್ಥರಿಂದ ಆಗುವ ಪ್ರಮಾದಗಳನ್ನು ಕ್ಷಮಿಸಲಾಗುವುದು. ಉದ್ಯಮ ವಲಯಕ್ಕೆ ಕೇಂದ್ರ ಸರ್ಕಾರದಿಂದ ಅಭಯ. ಎನ್ ಡಿ ಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಕೇಂದ್ರ ಕಂದಾಯ ಇಲಾಖೆ ಕಾರ್ಯದರ್ಶಿ ಹನ್ಸ್ ಮು

|
Google Oneindia Kannada News

ನವದೆಹಲಿ, ಜೂನ್ 30: ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಜುಲೈ 1ರಿಂದ ದೇಶಾದ್ಯಂತ ಜಾರಿಗೆ ಬರುತ್ತಿದೆ. ಇದು ಹೊಸ ತೆರಿಗೆ ವ್ಯವಸ್ಥೆಯಾಗಿರುವುದರಿಂದ ಜನರಿಗೆ ಇದನ್ನು ಸರಿಯಾಗಿ ಮನನ ಮಾಡಿಕೊಳ್ಳಲು ಕೊಂಚ ಕಾಲಾವಕಾಶ ಬೇಕಾಗಬಹುದು. ಈ ಸಂದರ್ಭಗಳಲ್ಲಿ ವ್ಯಾಪಾರಿಗಳಿಂದ, ಉದ್ದಿಮೆದಾರರಿಂದ ಏನಾದರೂ, ತಪ್ಪುಗಳು, ಪ್ರಮಾದಗಳು ನಡೆದರೆ ಅದನ್ನು ಕ್ಷಮಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.

ಜಿಎಸ್ ಟಿ: ತೆರಿಗೆದಾರರ 10 ಪ್ರಶ್ನೆಗಳಿಗೆ ನಮ್ಮ ಉತ್ತರ ಜಿಎಸ್ ಟಿ: ತೆರಿಗೆದಾರರ 10 ಪ್ರಶ್ನೆಗಳಿಗೆ ನಮ್ಮ ಉತ್ತರ

ಎನ್ ಡಿಟಿವಿಗೆ ವಿಶೇಷ ಸಂದರ್ಶನ ನೀಡಿರುವ ಕೇಂದ್ರ ಕಂದಾಯ ಇಲಾಖೆಯ ಕಾರ್ಯದರ್ಶಿ ಹನ್ಸ್ ಮುಖ್ ಆಧಿಯಾ ಅವರು ಈ ವಿಚಾರ ತಿಳಿಸಿದ್ದಾರೆ.

'Won't Punish Genuine Mistakes', Promises Government Ahead of GST Rollout

ಯಾವುದೇ ಒಂದು ಹೊಸ ಪದ್ಧತಿಯನ್ನು ಅಳವಡಿಸಿಕೊಳ್ಳುವಾಗ ಕೆಲ ಗೊಂದಲಗಳು ಆಗುವುದು ಸಹಜ. ಈ ಸಂದರ್ಭಗಳಲ್ಲಿ ಕೆಲವರಿಂದ ಪ್ರಮಾದಗಳೂ ಆಗಬಹುದು. ಆದರೆ, ಅಂಥ ತಪ್ಪುಗಳಾದಾಗ ಆದಷ್ಟು ಅವನ್ನು ಪರಿಹಾರ ಮಾಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿದೆಯೇ ಹೊರತು, ಯಾವುದೇ ಶಿಸ್ತು ಕ್ರಮ ಕೈಗೊಳ್ಳುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

GST ಗೊಂದಲ: ಜುಲೈ 1ರಿಂದ ಹೋಟೆಲ್ ತಿಂಡಿ ಗ್ರಾಹಕರಿಗೆ ಭಾರ GST ಗೊಂದಲ: ಜುಲೈ 1ರಿಂದ ಹೋಟೆಲ್ ತಿಂಡಿ ಗ್ರಾಹಕರಿಗೆ ಭಾರ

ತಮ್ಮ ಮಾತನ್ನು ಮುಂದುವರಿಸಿದ ಅವರು, ''ಈವರೆಗೆ ಒಂದು ವ್ಯವಸ್ಥಿತ ಚೌಕಟ್ಟಿನಲ್ಲಿ ಸರಾಗವಾಗಿ ನಡೆಯುತ್ತಿದ್ದ ಉದ್ಯಮಗಳಿಗೆ ಜಿಎಸ್ ಟಿ ಜಾರಿಗೊಂಡ ಆರಂಭಿಕ ದಿನಗಳಲ್ಲಿ ಕೊಂಚ ತೊಂದರೆಯಾಗಬಹುದು'' ಎಂದು ಅವರು ಅಭಿಪ್ರಾಯಪಟ್ಟರು.

''ಉದ್ಯಮ ವಲಯ ಅಥವಾ ಗ್ರಾಹಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರ ಟೊಂಕ ಕಟ್ಟಿ ನಿಂತಿದೆ. ಈವರೆಗೆ ನಡೆದಂತೆ ಮಾರುಕಟ್ಟೆ ವ್ಯವಹಾರಗಳು ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳಲಾಗುವುದು'' ಎಂದು ಅವರು ಭರವಸೆ ನೀಡಿದರು.

English summary
As GST implementing from July 1, Revenue Secretary Hasmukh Adhia assured the business community that they won't be harassed under the new tax regime and the government would not punish genuine mistakes made by businesses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X