ಪನ್ವೇಲ್ ನಲ್ಲಿ ಹದಿಮೂರು ತುಂಡು ಮಾಡಿದ ಮಹಿಳೆ ಶವ ಪತ್ತೆ

Posted By:
Subscribe to Oneindia Kannada

ಪನ್ವೇಲ್, ಡಿಸೆಂಬರ್ 29: ಅಪರಿಚಿತ ಮಹಿಳೆಯೊಬ್ಬರನ್ನು ಹದಿಮೂರು ತುಂಡುಗಳಾಗಿ ಕತ್ತರಿಸಿದ ಘಟನೆ ಮುಂಬೈ ಸಮೀಪದ ಪನ್ವೇಲ್ ನಲ್ಲಿ ನಡೆದಿದೆ. ಮೂರು ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ತುಂಬಿದ ದೇಹದ ತುಂಡುಗಳು ಬುಧವಾರ ಸಂಜೆ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ದೇಹವನ್ನು ಗುರುತು ಪತ್ತೆ ಮಾಡಲಾಗದ ಪರಿಸ್ಥಿತಿಯಿತ್ತು. ಆ ಮಹಿಳೆಯ ಕೈ, ಕಾಲು ಹಾಗೂ ತಲೆಗೆ ಗಂಭೀರ ಗಾಯಗಳಾಗಿದ್ದವು. ಪಶ್ಚಿಮ ಪನ್ವೇಲ್ ನ ಖಾಂಡಾ ಕಾಲೇನಿಯ ಗ್ಯಾರೇಜ್ ವೊಂದರ ಬಳಿ ಶವವನ್ನು ಬಿಸಾಡಲಾಗಿತ್ತು. ಗ್ಯಾರೇಜ್ ನಲ್ಲಿ ಕೆಲಸ ಮಾಡುವವರು ದೇಹವನ್ನು ನೋಡಿ, ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ.[ಕಾರು ಚಾಲಕನಿಂದ ಬಾಲಕಿಯರ ಮೇಲೆ 6 ತಿಂಗಳು ಅತ್ಯಾಚಾರ]

Murder

ಸದ್ಯಕ್ಕೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ. ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಪರೀಕ್ಷೆಯ ಫಲಿತಾಂಶ ಬಂದ ನಂತರ ತನಿಖೆಗೆ ಮತ್ತಷ್ಟು ಸಹಕಾರಿಯಾಗಲಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿಯನ್ನು ನೀಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A body of an unidentified woman chopped in 13 pieces was found stuffed inside three plastic bags in Panvel, near Mumbai, on Wednesday evening.
Please Wait while comments are loading...