ಫರೀದಾಬಾದ್ ಹೋಟೆಲ್‌ನ ಬಾತ್ ಟಬ್ ನಲ್ಲಿ ಮಹಿಳೆ ಶವ ಪತ್ತೆ
ನವದೆಹಲಿ, ಏಪ್ರಿಲ್ 27: ಫರೀದಾಬಾದ್ ನ ತಾಜ್ ವಿವಾಂತ ಹೋಟೆಲ್ ನ ಬಾತ್ ಟಬ್ ನಲ್ಲಿ ಲಂಡನ್ ಮೂಲದ ಭಾರತೀಯ ಮಹಿಳೆಯೊಬ್ಬಳ ಶವ ಪತ್ತೆಯಾಗಿದೆ.
ಸುಮಾರು 40 ವರ್ಷ ವಯಸ್ಸಿನ ಈ ಮಹಿಳೆ ಹೊಟೇಲ್ ಸ್ವಾಗತಕಾರರ ವಿಭಾಗದಲ್ಲಿ ತನ್ನ ಕೊಠಡಿಗೆ ಯಾರಿಗೂ ಪ್ರವೇಶ ಅವಕಾಶ ನೀಡದಂತೆ ಕೋರಿದ್ದಳು. ಅಲ್ಲದೇ ದಿನವಿಡೀ ತನ್ನ ಕುಟುಂಬದ ಸದಸ್ಯರು ದೂರವಾಣಿ ಕರೆ ಮಾಡಿದರೂ ಸ್ವೀಕರಿಸಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸಾವಿಗೆ ಕಾರಣ ಏನೆಂದು ತಿಳಿದುಬಂದಿಲ್ಲ, ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ, ಕುಟುಂಬದವರ ವಿಚಾರಣೆ ನಡೆಸಲಾಗುತ್ತಿದೆ.

ಇತ್ತೀಚೆಗೆ ಇದೇ ರೀತಿಯ ಘಟನೆಯೊಂದು ಹಿಂದಿ ಚಿತ್ರರಂಗವನ್ನೇ ಬೆಚ್ಚಿಬೀಳಿಸಿತ್ತು. ಬಾಲಿವುಡ್ ನಟಿ ಶ್ರೀದೇವಿ ಕೂಡ ದುಬೈ ನ ಹೋಟೆಲ್ ಒಂದರಲ್ಲಿ ಫೆ.24 ರಂದು ಬಾತ್ ಟಬ್ಬಿನಲ್ಲಿ ಬಿದ್ದು ಮೃತರಾದ ಮೃತರಾಗಿರುವ ವಿಚಾರವನ್ನು ಇಲ್ಲಿ ಸ್ಮರಿಸಬಹುದು.ಐದು ಭಾಷೆಗಳಲ್ಲಿ 245 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಶ್ರೀದೇವಿ 45 ವರ್ಷಗಳಿಂದ ಚಲನಚಿತ್ರ ರಂಗದಲ್ಲಿ ಸಕ್ರಿಯರಾಗಿದ್ದವರು.












Click it and Unblock the Notifications