ಮಾಜಿ ಗಂಡ, ಸ್ನೇಹಿತರಿಂದ ಅತ್ಯಾಚಾರಕ್ಕೊಳಗಾಗಿದ್ದ ಮಹಿಳೆ ಸಾವು

ಜಂತಾರಾ (ಜಾರ್ಖಂಡ್), ನವೆಂಬರ್ 09 : ತನ್ನ ಮಾಜಿ ಗಂಡ ಮತ್ತು ಆತನ ಇಬ್ಬರು ಸ್ನೇಹಿತರಿಂದ ಸಾಮೂಹಿಕ ಅತ್ಯಾಚಾರಕ್ಕೀಡಾಗಿದ್ದ ಮಹಿಳೆಯೋರ್ವರು ಸಾವಿಗೀಡಾಗಿದ್ದಾರೆ. ದುರುಳರು ಆಕೆಯ ಗುಪ್ತಾಂಗದಲ್ಲಿ ಕಟ್ಟಿಗೆ ತುರುಕಿದ್ದರು ಎಂದು ಪೊಲೀಸರು ಹೇಳಿದ್ದಾರೆ.

2012ರ ಡಿಸೆಂಬರ್ 16ರಂದು ದೆಹಲಿಯಲ್ಲಿ ನಡೆಯಿದ್ದ 'ನಿರ್ಭಯಾ'ಳ ಸಾಮೂಹಿಕ ಅತ್ಯಾಚಾರದ ಘಟನೆಗೂ, ಜಾರ್ಖಂಡ್ ನ ಜಂತಾರಾ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿರುವ ಈ ಅಮಾನವೀಯ ಘಟನೆಗೂ ಅಂತಹ ವ್ಯತ್ಯಾಸವೇನಿಲ್ಲ. ದೆಹಲಿಯ ಘಟನೆಯಲ್ಲಿ ನಿರ್ಭಯಾಳ ಗುಪ್ತಾಂಗದಲ್ಲಿ ಕಬ್ಬಿಣದ ಸಲಾಕೆಯನ್ನೇ ಅತ್ಯಾಚಾರಿಗಳು ತೂರಿಸಿ, ಆಕೆಯ ಕರುಳನ್ನು ಬಗೆದಿದ್ದರು.

ಬುಧವಾರ ರಾತ್ರಿ ಕಾಳಿ ಪೂಜೆಯ ದಿನದಂದು ಆ ಮಹಿಳೆ ಒಂದು ನಾಟಕವನ್ನು ನೋಡಲು ಹೋಗಿದ್ದಳು. ಅಲ್ಲಿಗೆ ಬಂದಿದ್ದ ಆಕೆಯ ಮಾಜಿ ಗಂಡ ಮತ್ತು ಇಬ್ಬರು ಸ್ನೇಹಿತರು ಆಕೆಯನ್ನು ಬಲವಂತವಾಗಿ ಗ್ರಾಮದಲ್ಲಿರುವ ಹೊಲವೊಂದಕ್ಕೆ ಎಳೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾರೆ. ನಂತರ ಆಕೆಯ ಗುಪ್ತಾಂಗದಲ್ಲಿ ಕಟ್ಟಿಗೆಯನ್ನು ತುರುಕಿದ್ದಾರೆ.

Woman dies after being gangraped and brutalised by ex-husband

ನೋವು ತಾಳಲಾಗರೆ ಆಕೆ ಕಿರುಚಿಕೊಳ್ಳಲು ಪ್ರಾರಂಭಿಸಿದಾಗ ಮೂವರೂ ಅಲ್ಲಿಂದ ಪರಾರಿಯಾಗಿದ್ದಾರೆ. ಆ ಮಹಿಳೆ ನರಳಿಕೊಂಡು ಇಡೀ ರಾತ್ರಿ ಅಲ್ಲಿಯೇ ಬಿದ್ದಿದ್ದಾಳೆ. ಮರುದಿನ ಬೆಳಿಗ್ಗೆ ಆಕೆ ಕೂಗಿಕೊಳ್ಳುವುದನ್ನು ಗಮನಿಸಿದ ಗ್ರಾಮಸ್ಥರು ನಾರಾಯಣಪುರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿಂದ ಆಕೆಯನ್ನು ಜಂತಾರಾ ಸರ್ದಾರ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಅಲ್ಲಿಗೆ ಕರೆದೊಯ್ಯುವ ವೇಳೆಗೆ ಆಕೆಯ ಪ್ರಾಣಪಕ್ಷಿ ಹಾರಿಹೋಗಿದೆ.

ಆಸ್ಪತ್ರೆಗೆ ಕೊಂಡೊಯ್ಯುವಾಗ ಈ ಅಮಾನವೀಯ ಕೃತ್ಯವನ್ನು ಆಕೆಯ ಮಾಜಿ ಗಂಡ ಮತ್ತು ಇಬ್ಬರು ಎಸಗಿದ್ದಾರೆ ಎಂದು ಆಕೆ ಗ್ರಾಮಸ್ಥರಿಗೆ ಹೇಳಿದ್ದಾಳೆ. ಆಕೆಯ ಮಾಜಿ ಗಂಡನನ್ನು ಪೊಲೀಸರು ಬಂಧಿಸಿದ್ದು, ಇನ್ನಿಬ್ಬರ ಹುಡುಕಾಟದಲ್ಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+