Tirumala temple: ತಿರುಮಲ ದೇವಸ್ಥಾನದಲ್ಲಿ ಮರದ ಕೊಂಬೆ ಬಿದ್ದು ಬೆಂಗಳೂರಿನ ಮಹಿಳೆಗೆ ಗಂಭೀರ ಗಾಯ, ಭಯಾನಕ ವಿಡಿಯೋ ಇಲ್ಲಿದೆ
ಅಮರಾವತಿ, ಜುಲೈ. 14: ಆಂಧ್ರಪ್ರದೇಶದ ತಿರುಮಲ ದೇಗುಲದ ಸಂಕೀರ್ಣದೊಳಗೆ ಮರದ ಕೊಂಬೆಯೊಂದು ಬಿದ್ದ ಪರಿಣಾಮ ಮಹಿಳಾ ಭಕ್ತರೊಬ್ಬರು ಗಂಭೀರ ಗಾಯಗೊಂಡಿರುವ ಘಟನೆ ವರದಿಯಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಈ ದುರಂತ ಘಟನೆಯು ಪವಿತ್ರ ಜಲಮೂಲವಾದ ಜಪಾಲಿ ತೀರ್ಥಂನಲ್ಲಿ ಸಂಭವಿಸಿದೆ. ಭಕ್ತೆ ದೇವಸ್ಥಾನದ ಪ್ರವೇಶ ದ್ವಾರದ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಸಮೀಪದ ಮರದ ಕೊಂಬೆಯೊಂದು ಏಕಾಏಕಿ ಮುರಿದುಬಿದ್ದು ಆಕೆಯ ಮೇಲೆ ಬಿದ್ದು ಗಂಭೀರ ಗಾಯಗಳಾಗಿವೆ.

ಕ್ಯಾಮೆರಾದಲ್ಲಿ ಈ ಆತಂಕಕಾರಿ ಘಟನೆ ಸೆರೆಯಾಗಿದೆ. ಆಂಧ್ರಪ್ರದೇಶದ ತಿರುಮಲ ದೇಗುಲದ ಸಂಕೀರ್ಣದಲ್ಲಿ ಹನುಮಂತನ ಜಪಾಲಿ ತೀರ್ಥದ ಕಡೆಗೆ ಹೋಗುತ್ತಿದ್ದಾಗ ನಡೆದಿದೆ. ಈ ಘಟನೆಯನ್ನು ಅಲ್ಲೇ ಇದ್ದ ಭಕ್ತರೊಬ್ಬರು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಏಕಾಏಕಿ ಮರ ಬಿದ್ದ ಕಾರಣ ಮಹಿಳೆ ಅಲ್ಲಿಯೇ ಕುಸಿದು ಪ್ರಜ್ಞಾಹೀನರಾಗಿದ್ದಾರೆ.
ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ಭಕ್ತರು ನಡೆದುಕೊಂಡು ಹೋಗುವಾಗ ಎಲ್ಲವೂ ಸಾಮಾನ್ಯವಾಗಿದೆ ಎನ್ನುವಂತೆಯೇ ಇದೆ. ರಸ್ತೆಯುದ್ದಕ್ಕೂ ಹಲವಾರು ಮರಗಳನ್ನು ಹೊಂದಿರುವ ಪ್ರಶಾಂತ ವಾತಾವರಣದ ನಡುವೆ, ದೊಡ್ಡ ಕೊಂಬೆ ಹಠಾತ್ ಆಗಿ ಮಹಿಳೆಯ ಮೇಲೆ ಬೀಳುತ್ತದೆ. ಆಕೆ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾರೆ.
A branch of a tree falls on a woman in a temple. pic.twitter.com/G3A3tlNmZc
— T_CAS videos (@tecas2000) July 12, 2024
ಇಂಡಿಯಾ ಟುಡೇ ಮೂಲಗಳ ಪ್ರಕಾರ, ಬೆಂಗಳೂರಿನ ಉಮಾರಾಣಿ ಎಂದು ಗುರುತಿಸಲಾದ ಮಹಿಳೆ ತಿರುಮಲಕ್ಕೆ ಭೇಟಿ ನೀಡಿದ್ದರು. ಘಟನೆಯಲ್ಲಿ ಅವರ ಬೆನ್ನುಹುರಿಗೆ ಗಾಯವಾಗಿದೆ. ಅವರು ಪ್ರಸ್ತುತ ತೀವ್ರ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರಿನ ಉಮಾರಾಣಿ ತಮ್ಮ ಕುಟುಂಬದೊಂದಿಗೆ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ದರ್ಶನ ಪಡೆಯಲು ತಿರುಮಲಕ್ಕೆ ಭೇಟಿ ನೀಡಿದ್ದರು. ಅವರು ಜಪಾಲಿ ತೀರ್ಥಂನಲ್ಲಿರುವ ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡಲು ಯೋಜಿಸಿದ್ದರು.
ಈ ದುರದೃಷ್ಟಕರ ಘಟನೆಯು ದೇವಾಲಯದ ಸಂಕೀರ್ಣದೊಳಗಿನ ಸುರಕ್ಷತಾ ಪ್ರೋಟೋಕಾಲ್‌ಗಳ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ ಅಸ್ತಿತ್ವದಲ್ಲಿರುವ ಸುರಕ್ಷತಾ ಕ್ರಮಗಳನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಆಡಳಿತ ಮಂಡಳಿಗೆ ಪ್ರೇರೇಪಿಸಿದೆ.












Click it and Unblock the Notifications