ಮುಸ್ಲಿಮರಿಂದ ಅಲ್ಪಸಂಖ್ಯಾತ ಸ್ಥಾನಮಾನ ಹಿಂಪಡೆಯಿರಿ: ತೊಗಾಡಿಯಾ
ಜೈಪುರ, ಜುಲೈ 04: 'ಮುಸ್ಲಿಮರಿಗೆ ನೀಡಿರುವ ಅಲ್ಪಸಂಖ್ಯಾತ ಸ್ಥಾನಮಾನವನ್ನು ಹಿಂಪಡೆಯಬೇಕು ಮತ್ತು ಜನಸಂಖ್ಯೆಯನ್ನು ನಿಯಂತ್ರಿಸುವ ಸಲುವಾಗಿ ಅವರಿಗೂ 'ಟು ಚೈಲ್ಡ್ ಪಾಲಿಸಿ'ಯನ್ನು ಅನ್ವಯಿಸುವಂಥೆ ಮಾಡಬೇಕು' ಎಂದು ವಿಶ್ವ ಹಿಂದು ಪರಿಷತ್ತಿನ ಮಾಜಿ ಮುಖಂಡ ಪ್ರವೀಣ್ ಭಾಯಿ ತೊಗಾಡಿಯಾ ಹೇಳಿದ್ದಾರೆ.
ರಾಜಸ್ಥಾನದ ಜೈಪುರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ, ಅವರು ಮಾತನಾಡುತ್ತಿದ್ದರು. ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಹಿಂದು ಪರಿಷತ್ತನ್ನು ಸ್ಥಾಪಿಸಿರುವ ತೊಗಾಡಿಯಾ, ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧವೂ ಹರಿಹಾಯ್ದರು.
ಮುಸ್ಲಿಮರಿಗೆ ನೀಡಿದ ಅಲ್ಪಸಂಖ್ಯಾತ ಸ್ಥಾನಮಾನವನ್ನು ವಾಪಸ್ ಪಡೆದು, ಅವರಿಗೂ ಟು ಚೈಲ್ಡ್ ಪಾಲಿಸಿ ಅನ್ವಯವಾಗುವಂತೆ ಮಾಡಿದರೆ, 20 ಕೋಟಿ ಹಿಂದು ವೋಟ್ ಬ್ಯಾಂಕ್ ಪಡೆಯಬಹುದು ಎಂದಿದ್ದಾರೆ.

'ನಾಣು ಎಂದಿಗೂ ಹಿಂದುತ್ವದ ಅಜೆಂಡಾ ಇಟ್ಟುಕೊಂಡೇ ಹೋರಾಡುವವನು. ಗುಣಮಟ್ಟದ ಶಿಕ್ಷಣ, ಉದ್ಯೋಗಾವಕಾಶ, ಕಾರ್ಮಿಕರ ರಕ್ಷಣೆ, ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಇವುಗಳ ಬಗ್ಗೆ ನಾನು ಹೆಚ್ಚು ಗಮನ ಹರಿಸುತ್ತೇನೆ' ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹಣದುಬ್ಬರವನ್ನು ಕಡಿಮೆ ಮಾಡುವಲ್ಲಿ, ರೈತರ ಆತ್ಮಹತ್ಯೆಯನ್ನು ನಿಯಂತ್ರಣಕ್ಕೆ ತರುವಲ್ಲಿ, ಉದ್ಯೋಗ ಸೃಷ್ಟಿಯಲ್ಲಿ ಮತ್ತು ಮಹಿಳೆಯರ ರಕ್ಷಣೆಯ ವಿಷಯದಲ್ಲಿ ಸಂಪೂರ್ಣ ವಿಫಲವಾಗಿ ಎಂದು ತೊಗಾಡಿಯಾ ದೂರಿದರು.












Click it and Unblock the Notifications