ಕರ್ನಾಟಕದಲ್ಲಿ ಕೈ ತೆನೆ ಪತನ, 'ಕಾಂಗ್ರೆಸ್ ಮುಕ್ತವಾದ ದಕ್ಷಿಣ ಭಾರತ'
ಬೆಂಗಳೂರು, ಜುಲೈ 24: ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರವು ಮಂಗಳವಾರ(ಜುಲೈ23)ದಂದು ವಿಶ್ವಾಸಮತ ಕಳೆದುಕೊಳ್ಳುವ ಮೂಲಕ ಬಿಜೆಪಿಗೆ ಸರ್ಕಾರ ರಚಿಸುವ ಅವಕಾಶವನ್ನು ಮಾಡಿಕೊಟ್ಟಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗುತ್ತಿದ್ದಂತೆ, ದಕ್ಷಿಣ ಭಾರತದ ರಾಜ್ಯಗಳ ಪೈಕಿ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಂಡಿದೆ. ಈಗ ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರದಲ್ಲಿದೆ.
ತೆಲಂಗಾಣದಲ್ಲಿ ಪ್ರಾದೇಶಿಕ ಪಕ್ಷ ತೆಲಂಗಾಣ ರಾಷ್ಟ್ರ ಸಮಿತಿ ಅಧಿಕಾರದಲ್ಲಿದ್ದರೆ, ಆಂಧ್ರಪ್ರದೇಶದಲ್ಲಿ ವೈಎಸ್ಸಾರ್ ಕಾಂಗ್ರೆ ಪಕ್ಷ ಇತ್ತೀಚೆಗೆ ಅಧಿಕಾರ ಪಡೆದುಕೊಂಡಿದೆ. ತಮಿಳುನಾಡಿನಲ್ಲಿ ಎಐಎಡಿಎಂಕೆ ಆಡಳಿತ ನಡೆಸುತ್ತಿದೆ. ಕೇರಳದಲ್ಲಿ ಎಲ್ ಡಿ ಎಫ್ ಹಾಗೂ ಕಮ್ಯೂನಿಸ್ಟ್ ಪಾರ್ಟಿ ಮೈತ್ರಿ ಸರ್ಕಾರವಿದೆ.

ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರ ನೇತೃತ್ವದ ವಹಿಸಿಕೊಂಡಿದ್ದ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ವಿದಾಯ ಭಾಷಣ ಮಾಡಿ, ವಿಶ್ವಾಸಮತವನ್ನು ಡಿವಿಷನ್ ಮೂಲಕ ತಲೆ ಎಣಿಕೆ ಮಾಡಲು ಒಪ್ಪಿಕೊಂಡರು. ಈ ಪರೀಕ್ಷೆಯಲ್ಲಿ ಮೈತ್ರಿ ಸರ್ಕಾರಕ್ಕೆ ಸೋಲುಂಟಾಯಿತು.
ಅಂತಿಮ ಫಲಿತಾಂಶ:
ಒಟ್ಟು ಸದಸ್ಯರು : 204
ಮ್ಯಾಜಿಕ್ ನಂಬರ್ : 103
ಬಿಜೆಪಿ: 105
ಕಾಂಗ್ರೆಸ್ -ಜೆಡಿಎಸ್ ಮೈತ್ರಿ : 99
ಫಲಿತಾಂಶ : ಪ್ರಸ್ತಾಪದ ಪರ -ವಿರೋಧ ಸದಸ್ಯರ ತಲೆ ಎಣಿಕೆಯನ್ನು ಅಧಿಕಾರಿಗಳು ಪ್ರತ್ಯೇಕವಾಗಿ ಮಾಡಿದ್ದಾರೆ.
ಗೈರಾದವರು: 20
ಮೈತ್ರಿ ಸರ್ಕಾರಕ್ಕೆ ವಿಶ್ವಾಸಮತದಲ್ಲಿ ಸೋಲುಂಟಾಗುತ್ತಿದ್ದಂತೆ ಯಡಿಯೂರಪ್ಪ ಅವರು ತಮ್ಮ ಶಾಸಕರ ಜತೆಗೂಡಿ ಗುಂಪಾಗಿ ಗೆಲುವಿನ ಚಿಹ್ನೆ ತೋರುತ್ತಾ ಫೋಟೋಗೆ ಪೋಸ್ ನೀಡಿದರು.












Click it and Unblock the Notifications