ಮಂಗಳಗ್ರಹದಲ್ಲೇ ವಾಸಿಸ್ತಾಳಂತೆ ಈ 19ರ ಬಾಲೆ!
ನವದೆಹಲಿ, ಫೆ. 18: ಮಂಗಳ ಗ್ರಹಕ್ಕೆ ಏಕಮುಖ ಪ್ರಯಾಣ ಎಷ್ಟು ಯಶಸ್ಸು ಗಳಿಸುವುದೋ ಗೊತ್ತಿಲ್ಲ. ಆದರೆ, ಈ ಪ್ರಯಾಣಕ್ಕೆ ಹದಿಹರೆಯದವರಿಂದ ಹಿಡಿದು ಮಧ್ಯವಸ್ಕರವರೆಗೆ ಹಲವರು ತಯಾರಾಗಿದ್ದಾರೆ. ಭಾರತದಿಂದ ಅರ್ಜಿ ಸಲ್ಲಿಸಿದ್ದ 100 ಜನರಲ್ಲಿ ಮೂವರು ಅಂತಿಮ ಆಯ್ಕೆ ಹಂತದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಇವರಲ್ಲೊಬ್ಬರಾದ ಕೇರಳದ ಪಾಲಕ್ಕಾಡ್ ನಿವಾಸಿಯಾಗಿರುವ 19 ವರ್ಷ ವಯಸ್ಸಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ ಶ್ರದ್ಧಾ ಪ್ರಸಾದ್ ಮಂಗಳ ಗ್ರಹದಲ್ಲಿಯೇ ವಾಸಿಸುವ ಕನಸು ಕಾಣುತ್ತಿದ್ದಾರೆ.
ಈ ಪ್ರಯಾಣಕ್ಕೆ ಸುಮಾರು 2.5 ಲಕ್ಷ ಜನ ಅರ್ಜಿ ಸಲ್ಲಿಸಿದ್ದರು. ಇವರಲ್ಲಿ ನಾನು ಆಯ್ಕೆಯಾಗಿರುವುದು ನನಗೆ ಸಂತಸ ತಂದಿದೆ. ನನ್ನ ಪಾಲಕರು ಮೊದಲು ಆತಂಕಗೊಂಡಿದ್ದರು. ಆದರೆ, ಆಯ್ಕೆ ಪ್ರಕ್ರಿಯೆ ಗಮನಿಸಿದ ಮೇಲೆ ಅವರೂ ಸಂತಸದಿಂದಿದ್ದಾರೆ. [ಮಂಗಳನ ಅಂಗಳಕ್ಕೆ ಮೂವರು ಭಾರತೀಯರು]
ಅಮೃತಾ ವಿಶ್ವವಿದ್ಯಾಲಯದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿರುವ ಶ್ರದ್ಧಾ ತನ್ನ ನಿರ್ಧಾರಕ್ಕೆ ಸ್ನೇಹಿತರೂ ಬೆಂಬಲ ಸೂಚಿಸಿದ್ದಾರೆಂದು ಹೇಳಿಕೊಂಡಿದ್ದಾರೆ. ಅಲ್ಲದೆ, ಆಯ್ಕೆಯ ನಾಲ್ಕನೇ ಹಂತದಲ್ಲಿಯೂ ಯಶಸ್ಸು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. [ಮಂಗಳನಲ್ಲಿ ಮೋಡವಿದೆಯಂತೆ]

ನೆದರ್‌ಲ್ಯಾಂಡ್ ಮೂಲದ ಸ್ವಯಂ ಸೇವಾ ಸಂಸ್ಥೆಯೊಂದು ಮಂಗಳ ಗ್ರಹಕ್ಕೆ ಏಕಮುಖ ಯಾನ ಹಮ್ಮಿಕೊಂಡಿದೆ. ಮಂಗಳ ಗ್ರಹದಲ್ಲಿ ಮಾನವರ ಕಾಲೋನಿ ನಿರ್ಮಿಸುವುದು ಈ ಯೋಜನೆಯ ಉದ್ದೇಶ ಎಂದು ಸಂಸ್ಥೆ ತಿಳಿಸಿದೆ. ಮಂಗಳ ಗ್ರಹಕ್ಕೆ ಏಕಮುಖ ಯಾನಕ್ಕೆ ಆಸಕ್ತರಿಂದ ಆಹ್ವಾನಿಸಿದ್ದ ಸಂಸ್ಥೆ ಅಂತಿಮ ಹಂತದ ಪರೀಕ್ಷೆಗೆ ಆಯ್ಕೆಯಾದವರ ಪಟ್ಟಿಯನ್ನು ಮಂಗಳವಾರವಷ್ಟೇ ಬಿಡುಗಡೆ ಮಾಡಿತ್ತು. [ಮಂಗಳ ಗ್ರಹದ ವಿಡಿಯೋ ನೋಡಿ]
ಭಾರತದಿಂದ ಮೂವರು ನಾಲ್ಕನೇ ಹಾಗೂ ಅಂತಿಮ ಹಂತದ ಪರೀಕ್ಷೆಗೆ ಆಯ್ಕೆಯಾಗಿದ್ದಾರೆ. ಕೇರಳದ ಪಾಲಕ್ಕಾಡ್ ನಿವಾಸಿ ಶ್ರದ್ಧಾ ಪ್ರಸಾದ್ (19), ಸೆಂಟ್ರಲ್ ಫ್ಲೋರಿಡಾ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ವಿಜ್ಞಾನ ವಿಷಯದಲ್ಲಿ ಡಾಕ್ಟರೇಟ್ ವಿದ್ಯಾರ್ಥಿಯಾಗಿರುವ ತನ್‌ಜೀತ್‌ಸಿಂಗ್ ಭಾಟಿಯಾ (29) ಹಾಗೂ ದುಬೈನಲ್ಲಿ ವಾಸಿಸುತ್ತಿರುವ ರಿತಿಕಾ ಸಿಂಗ್ (29) ಭಾರತದಿಂದ ಆಯ್ಕೆಯಾದವರು.
ಅರ್ಜಿ ಸಲ್ಲಿಸಿದವರು ಈಗಾಗಲೇ ಆನ್‌ಲೈನ್ ಸಂದರ್ಶನ, ವ್ಯಕ್ತಿತ್ವ ಹಾಗೂ ವೈದ್ಯಕೀಯ ಪರೀಕ್ಷೆಗಳನ್ನು ಎದುರಿಸಿದ್ದಾರೆ. ನಾಲ್ಕನೇ ಹಾಗೂ ಅಂತಿಮ ಸುತ್ತಿನ ಅರ್ಹತಾ ಪರೀಕ್ಷೆಯನ್ನು ಇನ್ನು ಮೇಲಷ್ಟೇ ನಡೆಸಬೇಕಾಗಿದೆ. [ಗಗನಕ್ಕೆ ಹಾರಲಿದ್ದಾನೆ ಭಾರತದ ಮಾನವ]
2024ರಲ್ಲಿ ನಡೆಯಲಿರುವ ಈ ಪ್ರಯಾಣ ನಡೆಸುವ ಯೋಜನೆ ಇದೆ. ಮಂಗಳಗ್ರಹಕ್ಕೆ 50 ಪುರುಷರು ಹಾಗೂ 50 ಮಹಿಳೆಯರು ಪಯಣ ಬೆಳೆಸಲಿದ್ದಾರೆ. ಅಮೆರಿಕದಿಂದ 39, ಯುರೋಪ್‌ನಿಂದ 31, ಏಷ್ಯಾದಿಂದ 16, ಆಫ್ರಿಕಾದಿಂದ 7 ಹಾಗೂ ಒಷೇನಿಯಾದಿಂದ 7 ಜನ ಪ್ರಯಾಣ ಬೆಳೆಸುವ ನಿರೀಕ್ಷೆ ಇದೆ.
-
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ












Click it and Unblock the Notifications