ಶಂಕರ ರಾಮನ್ ಕೊಲೆ ಕೇಸ್ ಗೆ ರಿಪಬ್ಲಿಕ್ ಟಿವಿಯ ಹೊಸ ಟ್ವಿಸ್ಟ್?

Posted By: ಒನ್ ಇಂಡಿಯಾ ನ್ಯೂಸ್ ಡೆಸ್ಕ್
Subscribe to Oneindia Kannada

ನವದೆಹಲಿ, ಸೆಪ್ಟೆಂಬರ್ 13: ತಮಿಳುನಾಡಿನ ಪ್ರತಿಷ್ಠಿತ ಕಂಚಿ ಮಠದ ಶ್ರೀಗಳನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದ 2004ರ ಹತ್ಯೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆಂಗ್ಲ ಸುದ್ದಿವಾಹಿನಿ 'ರಿಪಬ್ಲಿಕ್ ಟಿವಿ' ವಿಡಿಯೋ ಕ್ಲಿಪ್ ಒಂದನ್ನು ಬಿಡುಗಡೆ ಮಾಡಿದ್ದು, ಹೊಸ ಸಂಚಲನ ಹುಟ್ಟುಹಾಕಿದೆ.

ಇದು 2004ರಲ್ಲಿ ನಡೆದಿದ್ದ ಶಂಕರ ರಾಮನ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟ ವಿಡಿಯೋ. ಈ ಪ್ರಕರಣದಲ್ಲಿ ಬಂಧಿತರಾಗಿದ್ದ ಕಂಚಿ ಶ್ರೀಗಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಅದರ ವಿಡಿಯೋನ ತುಣುಕನ್ನು ರಿಪಬ್ಲಿಕ್ ಟಿವಿ ಸೆ. 13ರ ರಾತ್ರಿ ಪ್ರಸಾರ ಮಾಡಿದೆ.

Will Republic tv brings a new twist in Shankar Raman Murder Case in which Kanchi Sri aquitted?

ಏನಿದೆ ವಿಡಿಯೋ ಕ್ಲಿಪ್ ನಲ್ಲಿ?
ಸುಮಾರು 30 ನಿಮಿಷಗಳಿಗೂ ಹೆಚ್ಚು ಕಾಲ ಇರುವ ಈ ವಿಡಿಯೋ ಕ್ಲಿಪ್ ನಲ್ಲಿ ಕಂಚಿ ಶ್ರೀಗಳು, ಶಂಕರ ರಾಮನ್ ಅವರ ಕೊಲೆಯ ಬಗ್ಗೆ ಹಲವಾರು ವಿಚಾರಗಳನ್ನು ಹೇಳಿಕೊಂಡಿದ್ದಾರೆನ್ನಲಾಗಿದೆ.

ಶಂಕರರಾಮನ್‌ ಕೊಲೆ ಪ್ರಕರಣ: ಕಂಚಿಶ್ರೀಗಳಿಗೆ ಮುಕ್ತಿ

ಅರ್ನಾಬ್ ಗೋಸ್ವಾಮಿ ಸ್ಪಷ್ಟನೆ
ಈ ಬಗ್ಗೆ ಸ್ಪಷ್ಟನೆಯನ್ನೂ ನೀಡಿರುವ ವಾಹಿನಿಯ ಸಂಪಾದಕ ಅರ್ನಾಬ್ ಗೋಸ್ವಾಮಿ, ''ಈ ವಿಡಿಯೋ ಪ್ರಸಾರದ ಮೂಲಕ ಕಂಚಿ ಶ್ರೀಗಳ ಮೇಲೆ ನಾವು ಯಾವುದೇ ಆರೋಪ ಮಾಡುತ್ತಿಲ್ಲ. ಆದರೆ, ಶ್ರೀಗಳ ವಿಚಾರಣೆ ವೇಳೆ ಈ ವಿಡಿಯೋವನ್ನು ನ್ಯಾಯಾಲಯವು ಪರಿಗಣಿಸಿಲ್ಲ ಎಂಬ ಅನುಮಾನವಿದೆ. ಹಾಗಾಗಿದ್ದರೆ, ಈ ವಿಡಿಯೋವನ್ನು ಈಗಾಲಾದರೂ ನ್ಯಾಯಾಲಯವಾಗಲೀ, ತಮಿಳುನಾಡು ಪೊಲೀಸ್ ಇಲಾಖೆಯಾಗಲೀ ಈಗ ಪರಿಗಣಿಸಬಹುದೇ ಎಂದು ವಾಹಿನಿ ಕೇಳುತ್ತಿದೆಯಷ್ಟೇ'' ಎಂದಿದ್ದಾರೆ.

ಏನಿದು ಪ್ರಕರಣ?
2004ರ ಸೆ. 3ರಂದು ಕಂಚೀಪುರಂನ ವಾದಿರಾಜ ಪೆರುಮಾಳ್ ದೇವಾಲಯದ ವ್ಯವಸ್ಥಾಪಕರಾಗಿದ್ದ ಶಂಕರ ರಾಮನ್ ಎಂಬುವರನ್ನು ದುಷ್ಕರ್ಮಿಗಳು ಹಾಡಹಗಲೇ ದೇವಾಲಯದ ಕಚೇರಿಗೆ ನುಗ್ಗಿ ಬರ್ಬರವಾಗಿ ಹತ್ಯೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಚಿ ಶ್ರೀಗಳನ್ನು ಬಂಧಿಸಲಾಗಿತ್ತು.

ಈ ಶಂಕರ್ ರಾಮನ್ ಅವರು ಹಿಂದೆ ಕಂಚಿ ಮಠದಲ್ಲಿ ಸೇವೆ ಸಲ್ಲಿಸುತ್ತಿದ್ದು, ಮಠದಲ್ಲಿ ನಡೆದಿದೆಯೆನ್ನಲಾದ ಕೆಲವಾರು ಆರ್ಥಿಕ ವ್ಯವಹಾರಗಳನ್ನು ಬಯಲು ಮಾಡಿದ್ದರು. ಹಾಗಾಗಿಯೇ, ಇಬ್ಬರ ನಡುವೆ ವಿರಸ ಏರ್ಪಟ್ಟಿತ್ತು. ಹೀಗಾಗಿಯೇ, ಶಂಕರ ರಾಮನ್ ಅವರ ಕೊಲೆಯನ್ನು ಕಂಚಿ ಶ್ರೀಗಳೇ ಮಾಡಿಸಿದ್ದಾರೆಂಬ ಆರೋಪಗಳು ಕೇಳಿಬಂದಿದ್ದವು. ಹಾಗಾಗಿ, ತಮಿಳುನಾಡು ಪೊಲೀಸರು ಕಂಚಿ ಶ್ರೀಗಳನ್ನು ಬಂಧಿಸಿದ್ದರು.

ಸುಮಾರು 10 ವರ್ಷಗಳ ಕಾಲ ಈ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆಗೊಳಪಟ್ಟು, 2013ರ ನವೆಂಬರ್ ನಲ್ಲಿ ಕಂಚಿ ಶ್ರೀಗಳು ಇದರಿಂದ ಖುಲಾಸೆಗೊಂಡಿದ್ದರು.

ಈಗೇಕೆ ಈ ವಿಡಿಯೋ?
ವಾಹಿನಿಯ ಪ್ರಕಾರ, ಕಂಚಿ ಶ್ರೀ ಬಂಧನವಾದ ಮೂರು ತಿಂಗಳ ನಂತರ ಪೊಲೀಸರು ಕಂಚಿ ಶ್ರೀಗಳನ್ನು ವಿಚಾರಣೆಗೆ ಒಳಪಡಿಸಿದ್ದರು. ಆ ವಿಚಾರಣೆಯ ವಿಡಿಯೋ ತುಣುಕೇ ಈಗ ತನ್ನ ಬಳಿಯಿದೆ ಎಂದು 'ರಿಪಬ್ಲಿಕ್ ಟಿವಿ' ಹೇಳಿದೆ. ಈವರೆಗೆ ಯಾರಿಗೂ ಸಿಗದ ಈ ವಿಡಿಯೋ ಈಗ ತನಗೆ ಸಿಕ್ಕಿದ್ದು ಹಾಗಾಗಿಯೇ ಇದನ್ನು ಪ್ರಸಾರ ಮಾಡುತ್ತಿರುವುದಾಗಿ ಅದು ತಿಳಿಸಿದೆ. ಇದನ್ನು 'ಸೂಪರ್ ಎಕ್ಲ್ ಕ್ಲೂಸಿವ್ ವರದಿ' ಎಂದು ವಾಹಿನಿ ಹೇಳಿಕೊಂಡಿದೆ.

(ವಿಶೇಷ ಸೂಚನೆ: ಈ ಸುದ್ದಿಯು, ಕಂಚಿ ಶ್ರೀಗಳ ಬಗ್ಗೆ ರಿಪಬ್ಲಿಕ್ ಟಿವಿಯು ನೀಡಿದ ವರದಿಯನ್ನು 'ಒನ್ ಇಂಡಿಯಾ ಕನ್ನಡ'ದ ಓದುಗರ ಗಮನಕ್ಕೆ ತರುವ ಪ್ರಯತ್ನವಷ್ಟೆ. ಕಂಚಿ ಶ್ರೀಗಳ ನಕಾರಾತ್ಮಕವಾಗಿ ಹೇಳುವುದಾಗಲೀ ಅಥವಾ ರಿಪಬ್ಲಿಕ್ ಟಿವಿಯ ನಿಲುವನ್ನು ಬೆಂಬಲಿಸುವುದಾಗಲೀ 'ಒನ್ ಇಂಡಿಯಾ ಕನ್ನಡ'ದ ಉದ್ದೇಶವಲ್ಲ.)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Republic TV has revealed a video clip, related to 2004 murder case in which Shankara Raman was hacked to death in Kanchipuram of Tamilnadu and following that, Kanchi Mutt Swamiji Sri Jayendra Saraswati was arrested in connection to Shankar Raman Murder Case. According to Republic TV, Kanchi Sri reveals many informations regarding the murder case of Shankar Raman during an police interrogation.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ