Pahalgam: ಪಾಕಿಸ್ತಾನಿ ಉಗ್ರರಿಗೆ ಅಟ್ಟಾಡಿಸಿಕೊಂಡು ಹೊಡೆಯುವುದು ಗ್ಯಾರಂಟಿ, ಪ್ರಧಾನಿ ಮೋದಿ ವಾರ್ನಿಂಗ್!
ಭಾರತದಲ್ಲಿ ರಕ್ತಪಾತ ನಡೆಸಿ ಓಡಿ ಹೋಗಿರುವ ಪಾಪಿ ಪಾಕಿಸ್ತಾನದ ಉಗ್ರರಿಗೆ ಇದೀಗ ಭಾರಿ ಹುಡುಕಾಟ ಶುರುವಾಗಿದೆ. ಒಂದು ಕಡೆ ಜಾಗತಿಕ ಮಟ್ಟದಲ್ಲೂ ಭಾರತಕ್ಕೆ ದೊಡ್ಡ ಮಟ್ಟದ ಬೆಂಬಲ ಸಿಗುತ್ತಿದ್ದು, ಇನ್ನೊಂದು ಕಡೆ ಕೇಂದ್ರ ಸರ್ಕಾರ ಕೂಡ ಪಾಕಿಸ್ತಾನಕ್ಕೆ ಸರಿಯಾಗಿ ಪಾಠ ಕಲಿಸಲು ಸಜ್ಜಾಗಿದೆ. ಅದರಲ್ಲೂ ಅಮಾಯಕರ ಜೀವ ತೆಗೆದ ಪಾಪಿ ಉಗ್ರರನ್ನು ಹಿಗ್ಗಾಮುಗ್ಗಾ ಅಟ್ಟಾಡಿಸಿಕೊಂಡು ಹೊಡೆದು ಹಾಕುವ ಪ್ರತಿಜ್ಞೆ ಕೂಡ ಮಾಡಲಾಗಿದೆ.
ಪ್ರಧಾನಿ ಮೋದಿ ಅವರು ಬಿಹಾರದಲ್ಲಿ ಇದ್ದು, ಬಿಹಾರದ ಮಧುಬನಿಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಪಂಚಾಯತ್ ರಾಜ್ ದಿನದ ಕಾರ್ಯಕ್ರಮ ಉದ್ಘಾಟಿಸಿದರು. ಇದೇ ಸಮಯದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಕಾಶ್ಮೀರ ಪಹಲ್ಗಾಮ್ ಪ್ರದೇಶದಲ್ಲಿ ನಮ್ಮ ದೇಶದ ಪ್ರಜೆಗಳನ್ನು ಪಾಪಿ ಪಾಕಿಸ್ತಾನದ ಉಗ್ರರು ಹತ್ಯೆ ಮಾಡಿರುವ ವಿಚಾರ ಪ್ರಸ್ತಾಪಿಸಿದರು. ಅಲ್ಲದೇ ಉಗ್ರರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ಎಚ್ಚರಿಕೆಯ ಸಂದೇಶವನ್ನೂ ರವಾನಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಉಗ್ರರ ಕಥೆ ಮುಗಿಸುವ ಶಪಥ ಮಾಡಿದ್ದಾರೆ!

ಯಾರೂ ಊಹಿಸದಂತೆ ಉಗ್ರರು ಮಟಾಷ್!
ಪ್ರವಾಸಕ್ಕೆ ಎಂದು ಪಹಲ್ಗಾಮ್ ಪ್ರದೇಶಕ್ಕೆ ಹೋಗಿದ್ದ ಕರ್ನಾಟಕ ಸೇರಿದಂತೆ ಭಾರತದ ಹಲವು ರಾಜ್ಯಗಳ ಪ್ರಜೆಗಳು, ಕಾಶ್ಮೀರದ ಸುಂದರ ವಾತಾವರಣದಲ್ಲಿ ಸುತ್ತಾಡುವ ಸಮಯದಲ್ಲೇ ಈ ಪಾಪಿ ಉಗ್ರರು ದಿಢೀರ್ ಗನ್ ಹಿಡಿದು ನುಗ್ಗಿ ಅಮಾಯಕರ ಮೇಲೆ ಶೂಟ್ ಮಾಡಿ ಹತ್ಯೆಯನ್ನು ಮಾಡಿದ್ದರು. ಪಾಪಿ ಉಗ್ರರ ಈ ಕೃತ್ಯ ಇದೀಗ ಜಾಗತಿಕ ಮಟ್ಟದಲ್ಲೂ ದೊಡ್ಡ ಸಂಚಲನ ಸೃಷ್ಟಿ ಮಾಡಿದ್ದು, ಪ್ರಧಾನಿ ಮೋದಿ ಅವರು ಪಾಪಿ ಪಾಕಿಸ್ತಾನದ ಉಗ್ರರನ್ನು ಯಾರೂ ಊಹಿಸದ ರೀತಿ ಹೊಡೆದು ಹಾಕುತ್ತೀವಿ ಎಂದು ಹೇಳಿದ್ದಾರೆ. ಈ ಮೂಲಕ ಉಗ್ರರ ವಿರುದ್ಧ ಅತಿ ಕಠಿಣ ಕ್ರಮ ಕೈಗೊಳ್ಳುವುದು ಗ್ಯಾರಂಟಿ ಆಗಿದೆ.
ಪಾಪಿ ಪಾಕಿಸ್ತಾನಕ್ಕೆ ತಕ್ಕ ಪಾಠ!
ಬಿಹಾರದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, ಭಾರತದ ಮಣ್ಣಿನ ಮೇಲೆ ಶತ್ರುಗಳು ದಾಳಿ ಮಾಡಿದ್ದಾರೆ. ಹಲವು ರಾಜ್ಯಗಳು ತಮ್ಮ ತಮ್ಮ ಮಕ್ಕಳನ್ನು ಕಳೆದುಕೊಂಡಿವೆ, ಹಾಗೇ ಭಯೋತ್ಪಾದಕರು ಮತ್ತೆ ಬಾಲ ಬಿಚ್ಚಿದ್ದಾರೆ. ಹೀಗಾಗಿ ಯಾರೂ ಊಹಿಸದ ರೀತಿಯಲ್ಲಿ ನಾವು ಉಗ್ರರನ್ನು ಶಿಕ್ಷಿಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುಡುಗಿದ್ದಾರೆ. ಅಲ್ಲದೆ ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ಕೂಡ ದಾಳಿ ನಡೆಯುವ ಮುನ್ಸೂಚನೆ ಸಿಕ್ಕಿದೆ. ಹೀಗಾಗಿ ಪ್ರಧಾನಿ ಮೋದಿ ಅವರ ಬಿಹಾರ ಕಾರ್ಯಕ್ರಮ ಶತ್ರು ದೇಶಗಳಿಗೆ ವಾರ್ನಿಂಗ್ ಕೊಟ್ಟಂತೆಯೇ ಇದೆ.
ಪುಲ್ವಾಮಾ ಬಳಿಕ ಮತ್ತೊಂದು ದಾಳಿ
ಅದು 2019ರ ಫೆಬ್ರವರಿ 14, ಇಂಡಿಯಾದ ಪ್ರತಿಯೊಬ್ಬ ಪ್ರಜೆಯೂ ಮರೆಯಲು ಆಗದಿರುವ ದಿನ. ಯಾಕಂದ್ರೆ ಇದೇ ದಿನ ಭಾರತದ 40 ಹೆಮ್ಮೆಯ ಯೋಧರು ಹುತಾತ್ಮರಾಗಿದ್ದರು. ಆ ದಿನವನ್ನು ಇಡೀ ಜಗತ್ತೇ ಕರಾಳ ದಿನ ಎನ್ನುತ್ತದೆ. ಹೀಗೆ, ಇಂತಹ ಭೀಕರ ಘಟನೆ ನಡೆದು 6 ವರ್ಷಗಳ ನಂತರ ಮತ್ತೊಂದು ರಣ ಭೀಕರ ಘಟನೆಗೆ ಜಮ್ಮು & ಕಾಶ್ಮೀರ ಸಾಕ್ಷಿಯಾಗಿದೆ. ಹೀಗಾಗಿ ಪಹಲ್ಗಾಮ್ ಮೇಲೆ ದಾಳಿ ಮಾಡಿದ ಉಗ್ರರನ್ನ ಅಟ್ಟಾಡಿಸಿಕೊಂಡು ಹೊಡೆಯುವುದು ಪಕ್ಕಾ ಆಗಿದೆ.












Click it and Unblock the Notifications