ಅಪ್ಪ ಬಯಸಿದರೆ ರಾಜೀನಾಮೆ ನೀಡುವೆ, ಹೊಸ ಪಕ್ಷ ಇಲ್ಲ: ಅಖಿಲೇಶ್

Posted By:
Subscribe to Oneindia Kannada

ಲಕ್ನೋ, ಅಕ್ಟೋಬರ್ 24: 'ಉತ್ತರ ಪ್ರದೇಶದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಕೆಳಗಿಳಿಯಲು ನಾನು ಸಿದ್ಧ. ನೇತಾಜಿ(ಮುಲಾಯಂ)ಗಾಗಿ ನಾನು ಪಕ್ಷಕ್ಕೆ ಬಂದೆ, ಹೊಸ ಪಕ್ಷ ಕಟ್ಟುವುದಿಲ್ಲ' ಎಂದು ಯುಪಿ ಸಿಎಂ ಅಖಿಲೇಶ್ ಯಾದವ್ ಅವರು ಘೋಷಿಸಿದರು.

ಸಮಾಜವಾದಿ ಪಕ್ಷದ ಕಚೇರಿಯಲ್ಲಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಅವರು ಕರೆದಿದ್ದ ಸಭೆಯಲ್ಲಿ ಗಲಾಟೆ, ಗದ್ದಲ ಮುಂದುವರೆದಿದೆ. ಅಖಿಲೇಶ್ ಯಾದವ್ ಹಾಗೂ ಶಿವಪಾಲ್ ಯಾದವ್ ಕಾರ್ಯಕರ್ತರು ಕೈ ಕೈ ಮಿಲಾಯಿಸಿದ್ದು ನಡೆದಿದೆ.[ಸಮಾಜವಾದಿ ಪಕ್ಷ ಕುಟುಂಬವಿದ್ದಂತೆ, ಎಂದಿಗೂ ಒಡೆಯುವುದಿಲ್ಲ: ಮುಲಾಯಂ]

Will not form new party, will resign if Mulayam desires it: Akhilesh

'ನನ್ನ ತಂದೆಯೇ ನನಗೆ ಗುರು. ಹೀಗಿರುವಾಗ ನಾನ್ಯಾಕೆ ಹೊಸ ಪಕ್ಷ ಕಟ್ಟಲಿ. ನನ್ನ ತಂದೆ ಹೇಳಿದರೆ ನಾನು ರಾಜೀನಾಮೆ ಕೊಡಲು ಸಿದ್ಧನಿದ್ದೇನೆ. ಇದು ಮುಲಾಯಂ ಸಿಂಗ್ ಯಾದವ್ ಕಟ್ಟಿದ ಪಕ್ಷ. ನಾನು ನೇತಾಜಿ ಅವರ ಆಶಯದಿಂದ ಸಿಎಂ ಆಗಿದ್ದೇನೆ. ಪಕ್ಷದ ಒಳಗೆ ಕೆಲವರು ನನ್ನ ವಿರುದ್ಧ ಪಿತೂರಿ ಮಾಡುತ್ತಿದ್ದಾರೆ. ಈ ಮೂಲಕ ಪಕ್ಷದಲ್ಲಿ ಬಿಕ್ಕಟ್ಟು ಸೃಷ್ಟಿಸುತ್ತಿದ್ದಾರೆ. ಈ ಪಕ್ದಿಂದ ನನಗೆ ಏನೂ ಆಗಬೇಕಿಲ್ಲ. ಇದು ಸಂಪೂರ್ಣ ಮುಲಾಯಂ ಸಿಂಗ್ ಅವರ ಪಕ್ಷ ಎಂದು ಹೇಳಿದರು.[ಮಾಸಿಕ ಪಿಂಚಣಿ ಭಾಗ್ಯ ಬಡವರಿಗೆ ನೀಡಿ ಎಂದ ಬಿಗ್ ಬಿ]

ಭಾನುವಾರದಂದು ಸಿಎಂ ಅಖೀಲೇಶ್ ಯಾದವ್ ತನ್ನ ಚಿಕ್ಕಪ್ಪ ಶಿವಪಾಲ್ ಯಾದವ್ ಸೇರಿದಂತೆ ಐವರನ್ನು ಸಂಪುಟದಿಂದ ಕೈಬಿಟ್ಟಿದ್ರು. ಇದಕ್ಕೆ ಪ್ರತಿಯಾಗಿ ಅಖಿಲೇಶ್ ಜೊತೆ ಗುರುತಿಸಿಕೊಂಡಿದ್ದ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಮ್ ಗೋಪಾಲ್ ಯಾದವರನ್ನು 6 ವರ್ಷಗಳವರೆಗೆ ಪಕ್ಷದಿಂದ ಉಚ್ಚಾಟಿಸಲಾಗಿತ್ತು.[ಮುಲಾಯಂ ಕೆಣಕಿದ್ದಕ್ಕೆ ಐಪಿಎಸ್ ಅಮಿತಾಬ್ ಅಮಾನತು]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Uttar Pradesh Chief Minister Akhilesh Yadav on Monday said he would not form a new party and would step down if Samajwadi Party chief Mulayam Singh Yadav desires it.
Please Wait while comments are loading...