ಕನ್ನಡಿಗ ದತ್ತಾತ್ರೇಯ ಹೊಸಬಾಳೆ ಆರ್ ಎಸ್ ಎಸ್ ನ ನೂತನ ಸರಕಾರ್ಯವಾಹ?

ನಾಗ್ಪುರ, ಮಾರ್ಚ್ 03: ಕನ್ನಡಿಗ ದತ್ತಾತ್ರೇಯ ಹೊಸಬಾಳೆ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂತನ ಸರಕಾರ್ಯವಾಹ ಹುದ್ದೆಗೆ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ಪ್ರಸ್ತುತ ಈ ಸ್ಥಾನ ಅಲಂಕರಿಸಿರುವ ಹಿರಿಯರಾದ ಭೈಯ್ಯಾಜಿ ಜೋಶಿ ಅವರು ಅನಾರೋಗ್ಯದ ಕಾರಣ ಈ ಸ್ಥಾನದಿಂದ ಹಿಂದೆ ಸರಿಯಲಿದ್ದು, ಈ ಸ್ಥಾನವನ್ನು ಹೊಸಬಾಳೆಯವರು ಅಲಂಕರಿಸಲಿದ್ದಾರೆ.

ಮಾರ್ಚ್ 9 ರಿಂದ 11 ರವರೆಗೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆಯಲಿರುವ ಅಖಿಲ ಭಾರತೀಯ ಪ್ರತಿನಿಧಿ ಸಭಾ(ಎಬಿಪಿಎಸ್)ದಲ್ಲಿ ಈ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

Will Kannadiga Dattatreya Hosabale be Sarakaryavah of RSS?

ಕಳೆದ ಒಂಭತ್ತು ವರ್ಷಗಳಿಂದ ಈ ಸ್ಥಾನದಲ್ಲಿದ್ದ ಭೈಯ್ಯಾಜಿ ಜೋಶಿಯವರು ಎಪ್ಪತ್ತರ ಹೊಸ್ತಿಲಲ್ಲಿದ್ದು, ವಿಶ್ರಾಂತಿಯ ಅಗತ್ಯವಿರುವುದರಿಂದ ತಮ್ಮ ಸ್ಥಾನದಿಂದ ಕೆಳಗಿಳಿಯಲು ಬಯಸಿದ್ದಾರೆ. ಸರಕಾರ್ಯವಾಹ ಸ್ಥಾನವು ಆರ್ ಎಸ್ ಎಸ್ ನ ಅತ್ಯುನ್ನತ ಹುದ್ದೆಯಾದ ಸರಸಂಘಚಾಲಕ್ ಹುದ್ದೆಯ ನಂತರದ ಸ್ಥಾನವಾಗಿದೆ. 2015 ರಲ್ಲೇ ಈ ಸ್ಥಾನಕ್ಕೆ ಹೊಸಬಾಳೆ ಅವರ ಹೆಸರು ಪ್ರಸ್ತಾಪವಾಗಿತ್ತಾದರೂ, ಹೊಸಬಾಳೆಯವರೇ ಇದಕ್ಕೆ ಒಪ್ಪಿರಲಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+