Get Updates
Get notified of breaking news, exclusive insights, and must-see stories!

Parliament Special Session: ಮಂಡನೆ ಆಗಲಿದೆಯಾ ನ್ಯಾ. ರೋಹಿಣಿ ಆಯೋಗದ ವರದಿ, ಬಿಜೆಪಿ ಲೆಕ್ಕಾಚಾರವೇನು?

ನವದೆಹಲಿ, ಸೆ 14: ಇದೇ ಬರುವ ಸೆಪ್ಟಂಬರ್ ಹದಿನೆಂಟರಿಂದ ಐದು ದಿನಗಳ ವಿಶೇಷ ಸಂಸತ್ ಅಧಿವೇಶನ ಆರಂಭವಾಗಲಿದೆ. ಸಂಸತ್ತಿನ 75 ವರ್ಷಗಳ ಇತಿಹಾಸದ ಕುರಿತು ಚರ್ಚೆ ನಡೆಯಲಿದೆ ಎಂದು ಕೇಂದ್ರ ಸರ್ಕಾರ ಬಹಿರಂಗ ಪಡಿಸುವ ಮೂಲಕ ಹಲವು ದಿನಗಳ ಊಹಾಪೋಹಗಳಿಗೆ ತೆರೆ ಎಳೆದಿದೆ.

ಸರ್ಕಾರವು, ಒಂದು ರಾಷ್ಟ್ರ, ಒಂದು ಚುನಾವಣೆ, ಏಕರೂಪ ನಾಗರಿಕ ಸಂಹಿತೆ (UCC) ಮತ್ತು ಮಹಿಳಾ ಮೀಸಲಾತಿಯನ್ನು ಪರಿಚಯಿಸಲು ಮಸೂದೆಗಳನ್ನು ತರಬಹುದು ಎಂದು ಹೇಳಲಾಗಿತ್ತು. ವಿಶೇಷ ಅಧಿವೇಶನದ ಕಾರ್ಯಸೂಚಿಯನ್ನು ಬಹಿರಂಗಪಡಿಸಲು ಸರ್ಕಾರ ನಿರಾಕರಿಸಿದ್ದರಿಂದ ಸಹಜವಾಗಿ ಅಧಿವೇಶನದ ಬಗ್ಗೆ ಕುತೂಹಲ ಮನೆ ಮಾಡಿತ್ತು.

Parliament Special Session: Will Justice Rohini Commissions OBC Sub-Categorization Recommendation Be Amended?

ಆದಾಗ್ಯೂ, ಸಂಸತ್ತಿನ ಈ ವಿಶೇಷ ಅಧಿವೇಶನದಲ್ಲಿ ಇತರ ಹಿಂದುಳಿದ ವರ್ಗಗಳ (ಒಬಿಸಿ) ಉಪ ವರ್ಗೀಕರಣ ಕುರಿತಂತೆ ಸಲ್ಲಿಕೆಯಾಗಿರುವ ನ್ಯಾ. ಜಿ.ರೋಹಿಣಿ ಆಯೋಗದ ವರದಿ ಮಂಡನೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಆ ಮೂಲಕ, ದೇಶದ ಒಟ್ಟು ಮತದಾರರ ಪೈಕಿ ಶೇ. 40ರಷ್ಟಿರುವ ಈ ವರ್ಗದ ಮತಬ್ಯಾಂಕ್ ಮೇಲೆ ಬಿಜೆಪಿಯ ಕಣ್ಣು ನೆಟ್ಟಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಏನಿದು ನ್ಯಾ. ರೋಹಿಣಿ ಆಯೋಗದ ವರದಿ?

ಆಯೋಗದ ರಚನೆ ಆಗಿದ್ದು: ಎರಡನೇ ಅಕ್ಟೋಬರ್ 2017ರಲ್ಲಿ ಈ ಆಯೋಗವನ್ನು ರಚಿಸಲಾಯಿತು. ದೆಹಲಿ ಹೈಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ಜಿ. ರೋಹಿಣಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಆಯೋಗವನ್ನು ರಚಿಸಿತ್ತು.

ಇತರ ಹಿಂದುಳಿದ ವರ್ಗಗಳ (Other Backward Classes) ಜಾತಿಗಳನ್ನು ಉಪವರ್ಗೀಕರಿಸುವ ಉದ್ದೇಶದಿಂದ, ಅಧ್ಯಯನ ನಡೆಸಿ ವಿಸ್ಕೃತ ವರದಿ ನೀಡುವಂತೆ ಸರ್ಕಾರ ಆಯೋಗಕ್ಕೆ ಸೂಚನೆಯನ್ನು ನೀಡಿತ್ತು.

ಸಂವಿಧಾನದ 340 ನೇ ವಿಧಿಯ ಅಡಿಯಲ್ಲಿ ಕೇಂದ್ರೀಯ ಪಟ್ಟಿಯಲ್ಲಿರುವ ಇತರ ಹಿಂದುಳಿದ ವರ್ಗಗಳ, ಉಪ ವರ್ಗೀಕರಣದ ವಿಚಾರದಲ್ಲಿ ಆಯೋಗ ತನ್ನ ವರದಿಯನ್ನು ಕಳೆದ ಜುಲೈ ತಿಂಗಳಲ್ಲಿ ಆಯೋಗ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿದೆ.

ಆಯೋಗ ರಚನೆಯ ಉದ್ದೇಶ

1. ಎಲ್ಲಾ ಇತರ ಹಿಂದುಳಿದ ವರ್ಗಗಳನ್ನು ಗುರುತಿಸಲು ಮತ್ತು ಅವುಗಳನ್ನು ಉಪ-ವರ್ಗಗಳಾಗಿ ವರ್ಗೀಕರಿಸುವ ಉದ್ದೇಶ ಆಯೋಗ ರಚನೆಯ ಹಿಂದಿದೆ.

2. ಮೀಸಲಾತಿ ನೀತಿಗಳಿಂದ ಉಪಯೋಗವಾಗುವ ವಿಚಾರದಲ್ಲಿ ಸುಮಾರು 2,600 ಜಾತಿಗಳನ್ನು ಒಳಗೊಂಡಿರುವ ಈ ವರ್ಗದದೊಳಗಿನ ವಿವಿಧ ಉಪಜಾತಿಗಳು ಮತ್ತು ಉಪ ಸಮುದಾಯಗಳ ನಡುವೆ ಇರುವ ಅಸಮಾನತೆಗಳನ್ನು ಅಧ್ಯಯನ ಮಾಡಿ ಪಟ್ಟಿ ಮಾಡುವುದು.

3. ಇತರ ಹಿಂದುಳಿದ ವರ್ಗಗಳಿಗೆ ಸಾಂವಿಧಾನಿಕವಾಗಿ ಪ್ರಯೋಜನ ಸಿಗುವಂತಾಗಲು ತೆಗೆದುಕೊಳ್ಳಬೇಕಾದ ಮಾನದಂಡಗಳ ಕುರಿತು ಅಧ್ಯಯನ ಮಾಡಿ ವರದಿ ನೀಡುವ ಜವಾಬ್ದಾರಿಯನ್ನು ಸರ್ಕಾರ ಆಯೋಗಕ್ಕೆ ನೀಡಿತ್ತು.

ಆಯೋಗದ ಶಿಫಾರಸಿನಲ್ಲಿ ಏನಿದೆ?

ಹನ್ನೆರಡು ವಾರದಲ್ಲಿ ಅಧ್ಯಯನ ನಡೆಸಿ ವರದಿ ನೀಡುವಂತೆ ಕೇಂದ್ರ ಸರ್ಕಾರ ಆಯೋಗಕ್ಕೆ ಸೂಚಿಸಿತ್ತು. ಆದರೆ, ಹದಿನಾಲ್ಕು ಬಾರಿ ಎಕ್ಸಟೆನ್ಸನ್ ಪಡೆದು ಆರು ವರ್ಷಗಳ ನಂತರ, ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಮೂಲಕ ರಾಷ್ಟ್ರಪತಿಗಳಿಗೆ ಜುಲೈ 31ರಂದು ವರದಿಯನ್ನು ಸಲ್ಲಿಸಲಾಗಿದೆ.

ಹಲವು ರಾಜ್ಯಗಳಲ್ಲಿ ಜಾತಿಗಣತಿ ಪ್ರಕ್ರಿಯೆ ಇನ್ನೂ ಮುಗಿದಿಲ್ಲ ಜೊತೆಗೆ ಈ ಸಂಬಂಧ ಸರ್ವೋಚ್ಚ ನ್ಯಾಯಾಲಯದಲ್ಲೂ ವಿಚಾರಣೆ ಪ್ರಕ್ರಿಯೆ ನಡೆಯುತ್ತಿರುವ ಮಧ್ಯೆಯೇ ವರದಿಯನ್ನು ನೀಡಲಾಗಿದೆ. ಈ ವರದಿಯಲ್ಲಿನ ಅಂಶಗಳನ್ನು ಇನ್ನೂ ಕೇಂದ್ರ ಸರ್ಕಾರ ಬಹಿರಂಗ ಪಡಿಸಿಲ್ಲ.

ಮೂಲಗಳ ಪ್ರಕಾರ ಒಂದು ಸಾವಿರಕ್ಕೂ ಅಧಿಕ ಪುಟದ ವರದಿಯನ್ನು ಎರಡು ಭಾಗದಲ್ಲಿ ಆಯೋಗ ಸಲ್ಲಿಸಿದೆ. ಮೊದಲ ಭಾಗದಲ್ಲಿ ಒಬಿಸಿ ಕೋಟಾವನ್ನು ಯಾವ ರೀತಿ ಹಂಚಿಕೆ ಮಾಡಬಹುದು ಎಂದು. ಎರಡನೇ ಭಾಗದಲ್ಲಿ 2,633 ಜಾತಿಗಳ ಪರಿಷ್ಕೃತ ಪಟ್ಟಿಯನ್ನು ಒಳಗೊಂಡಿದೆ ಎಂದು ಹೇಳಲಾಗುತ್ತಿದೆ.

1. ಒಬಿಸಿ ಸಮುದಾಯದ ಎಲ್ಲಾ ಜಾತಿಗಳನ್ನು ಉಪವರ್ಗೀಕರಣ ಮಾಡಿದರೆ ಎಲ್ಲಾ ಉಪಜಾತಿಗಳನ್ನು ಪತ್ತೆ ಮಾಡಲು ಸಹಕಾರಿಯಾಗಲಿದೆ.

2. 2,600ಕ್ಕೂ ಹೆಚ್ಚು ಇರುವ ಜಾತಿಗಳ ನಡುವಿನ ಅಸಮಾನತೆಯನ್ನು ಕಂಡುಕೊಂಡು ಪರಿಹಾರ ಸೂಚಿಸುವುದು.

3. ಒಬಿಸಿ ವರ್ಗದಲ್ಲಿ ಇತರ ಹಿಂದುಳಿದ ಮೀಸಲಾತಿ ಸೌಲಭ್ಯ ಸಿಗದ ವರ್ಗಗಳನ್ನು ಪತ್ತೆ ಮಾಡುವುದು.

4. ಉಪಜಾತಿಗಳ ಜನಸಂಖ್ಯೆಯನ್ನು ಆಧರಿಸಿ ಹೊಸ ಸೌಲಭ್ಯ, ಸೂತ್ರ ಮತ್ತು ಅದಕ್ಕೆ ಬೇಕಾದ ಮಾನದಂಡವನ್ನು ರಚಿಸುವ ಶಿಫಾರಸನ್ನು ಆಯೋಗ ಮಾಡಿದೆ ಎಂದು ಹೇಳಲಾಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+