ಮುಖ ಮುರಿದುಹಾಕುತ್ತೇನೆ: ಸಚಿವರಿಂದ ಬಿಜೆಪಿ ನಾಯಕನಿಗೆ ಧಮ್ಕಿ!

ಕೋಲ್ಕತ್ತಾ, ಮಾರ್ಚ್ 27: ರಾಜಕಾರಣಿಗಳ ಹೊಡಿಬಡಿ ಹೇಳಿಕೆಗೆ ಪಶ್ಚಿಮ ಬಂಗಾಳ ಸಾಕ್ಷಿಯಾಗಿದೆ. ಬಿಜೆಪಿ ಮುಖಂಡ ದಿಲಿಪ್ ಘೋಷ್ ಅವರ ಮೂಗು, ಕಣ್ಣು, ಮುಖ ಮುರಿದುಹಾಕುತ್ತೇನೆ ಎಂದು ತಮ್ಮೊಂದಿಗೆ ಕುಸ್ತಿಗೆ ಆಹ್ವಾನಿಸಿದ್ದಾರೆ ಪಶ್ಚಿಮ ಬಂಗಾಳದ ಮಂತ್ರಿ ರಬೀದ್ರನಾಥ್ ಘೋಷ್!

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇತ್ತೀಚೆಗೆ ನಡೆದ ರಾಮನವಮಿ ಉತ್ಸವದಂದು ನಡೆದ ಯಾತ್ರೆಯಲ್ಲಿ ಬಿಜೆಪಿ ಮುಖಂಡ ದಿಲಿಪ್ ಘೋಷ್ ಖಡ್ಗವೊಂದನ್ನು ಹಿಡಿದಿದ್ದರು. ಆದರೆ ಪಶ್ಚಿಮಬಂಗಾಳದಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಖಡ್ಗ, ಕತ್ತಿಯಂಥ ಮಾರಕಾಸ್ತ್ರಗಳನ್ನು ಬಳಸುವುದನ್ನು ವಿಷೇಧಿಸಿರುವ ಹಿನ್ನೆಲೆಯಲ್ಲಿ ದಿಲಿಪ್ ಅವರ ನಡೆ ವಿವಾದಾಸ್ಪದವೆನ್ನಿಸಿತ್ತು.

ಆದರೆ ಇದಕ್ಕೆ ಸಮಜಾಯಿಷಿ ನೀಡಿದ್ದ ದಿಲಿಪ್ ಘೋಷ್, 'ಹಿಂದು ಸಂಪ್ರದಾಯದಲ್ಲಿ ಆಯುದ್ಹಗಳನ್ನು ಪೂಜಿಸುವ ಪರಿಪಾಠವಿದೆ. ಅದಕ್ಕೆಂದೇ ನಾನು ಆಯುಧವನ್ನು ಹಿಡಿದಿದ್ದೆ. ಇದನ್ನು ನಿಷೇಧಿಸಿರುವ ಕುರಿತು ನನಗೆ ಮಾಹಿತಿ ಇಲ್ಲ. ಅಂಥ ಪ್ರಕಟಣೆಗಳು ಎಲ್ಲಿವೆ ತೋರಿಸಿ' ಕೇಳಿದ್ದರು.

Will break his nose, eyes and face: West Bengal Minister challenges BJPs Dilip Ghosh for a fight

ಇದಕ್ಕೆ ಪ್ರತಿಕ್ರಿಯಿಸಿದ ರಬೀಂದ್ರನಾಥ್ ಘೋಷ್, ಅವರಿಗೆ ಕುಸ್ತಿ ಆಹ್ವಾನ ನೀಡಿದ್ದಾರೆ. ನನ್ನೊಂದಿಗೆ ಹೊಡೆದಾಟಕ್ಕೆ ಸಿದ್ಧರಾಗಿ. ನಿಮಗೆ ಆಯುಧದಲ್ಲಿ ಹೊಡೆದಾಡುವುದಕ್ಕೆ ಬಾರದಿದ್ದರೆ, ಕುಸ್ತಿಗೆ ಬನ್ನಿ. ನಿಮ್ಮ ಮುಖ, ಮೂಗು, ಕಣ್ಣನ್ನು ಮುರಿದು ಹಾಕಲು ನನಗೆ ಮೂರೇ ಮೂರು ನಿಮಿಷ ಸಾಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ರಾಮನವಮಿ ಹಬ್ಬದ ಮೆರವಣಿಗೆ ಮೇಲೆ ಕಿಡಿಗೇಡಿಗಳು ದಾಳಿ ನಡೆಸಿದ್ದರಿಂದ ಪಶ್ಚಿಮ ಬಂಗಾಳದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+