ಸಮಾಜವಾದಿ ಪಕ್ಷ ಕುಟುಂಬವಿದ್ದಂತೆ, ಎಂದಿಗೂ ಒಡೆಯುವುದಿಲ್ಲ: ಮುಲಾಯಂ

By: ವಿಕಾಸ್ ನಂಜಪ್ಪ
Subscribe to Oneindia Kannada

ಲಕ್ನೋ, ಸೆ. 16: ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹಾಗೂ ಅವರ ಅಂಕಲ್ ಶಿವಪಾಲ್ ಯಾದವ್ ಜತೆ ಕಿತ್ತ್ತಾಡಿಕೊಂಡಿದ್ದಾರೆ. ಆಡಳಿತರೂಢ ಸಮಾಜವಾದಿ ಪಕ್ಷದ ಅವನತಿ ಹಾದಿ ಹಿಡಿದಿದೆ ಎಂಬ ಸುದ್ದಿಯನ್ನು ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅಲ್ಲಗೆಳೆದಿದ್ದಾರೆ.

ಸಮಾಜವಾದಿ ಪಕ್ಷ ಕುಟುಂಬವಿದ್ದಂತೆ, ನಮ್ಮ ಕುಟುಂಬವನ್ನು ಒಡೆಯಲು ನೋಡಬೇಡಿ. ಪಕ್ಷದಲ್ಲೂ ಯಾವುದೇ ಭಿನ್ನಮತ, ಮನಸ್ತಾಪಗಳಿಲ್ಲ ಎಂದು ಮುಲಾಯಂ ಹೇಳಿದ್ದಾರೆ.

In UP, Mulayam smooths over rift with Akhilesh, softens up Shivpal, says party 'amar' as long as he'

ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ತಂದೆಗೇ ತಿರುಗೇಟು ನೀಡಿದ್ದಾರೆ. ಇದರೊಂದಿಗೆ ಉತ್ತರ ಪ್ರದೇಶದ ಆಡಳಿತಾರೂಢ ಪಕ್ಷದ ಕುಟುಂಬ ರಾಜಕೀಯ ಬಿಕ್ಕಟ್ಟು ಹೊಸ ಸ್ವರೂಪ ಪಡೆದಿದೆ.

ಗೊಂದಲ ಏನು?: ಪಕ್ಷದ ಮುಖ್ಯಸ್ಥ ಹುದ್ದೆಯನ್ನು ತಮ್ಮ ಸಹೋದರ ಶಿವಪಾಲ್ ಯಾದವ್ ಅವರಿಗೆ ನೀಡಲು ಮುಲಾಯಂ ಮುಂದಾಗಿದ್ದರು. ಆದರೆ, ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಚಿಕ್ಕಪ್ಪನನ್ನು ಸಂಪುಟ ಹುದ್ದೆಯಿಂದ ಕಿತ್ತುಹಾಕಿದ್ದರು. ಬಂಜರು ಭೂಮಿ ಅಭಿವೃದ್ಧಿ ಖಾತೆ ಕಳೆದುಕೊಂದ ಶಿವಪಾಲ್ ಯಾದವ್ ಅವರು ಏಕ್ತಾ ದಳ ಜತೆಗೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದು ಕ
ಾರಣ ಎಂದು ಹೇಳಲಾಯಿತು.

ಆದರೆ, ಎಲ್ಲಾ ಸುದ್ದಿಗಳನ್ನು ಅಲ್ಲಗೆಳೆದಿರುವ ಮುಲಾಯಂ, ಚುನಾವಣೆ ಸಂದರ್ಭದಲ್ಲಿ ಈ ರೀತಿ ಸುದ್ದಿ ಹಬ್ಬಿಸಲಾಗುತ್ತದೆ. ಇದನ್ನು ಯಾರು ನಂಬಬೇಡಿ ಎಂದಿದ್ದಾರೆ.

ಆದರೆ, ಶುಕ್ರವಾರದಂದು ಅಖಿಲೇಶ್ ಯಾದವ್ ಹಾಗೂ ಶಿವಪಾಲ್ ಅವರ ನಡುವೆ ಮಹತ್ವದ ಸಭೆ ನಡೆದಿದ್ದು ಸುಳ್ಳಲ್ಲ. ಅಖಿಲೇಶ್ ನನಗೆ ಇಲ್ಲವೆನ್ನಲು ಸಾಧ್ಯವೇ? ಎಂದು ಮಾಧ್ಯಮಗಳಿಗೆ ಶಿವಪಾಲ್ ಪ್ರತಿಕ್ರಿಯಿಸಿದ್ದಾರೆ. ನೇತಾಜಿ(ಮುಲಾಯಂ) ಅವರ ಅಣತಿಯಂತೆ ನಡೆಯುತ್ತೇನೆ. ನಾನು ಪಕ್ಷವನ್ನು ತೊರೆಯುವುದಿಲ್ಲ ಎಂದು ಶಿವಪಾಲ್ ಹೇಳಿದ್ದಾರೆ.(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Seeking to rubbish all reports that the Samajwadi Party is on the verge of a split, party supremo Mulayam Singh Yadav tried to set the record straight. "Samajwadi Party is a family and there can be no rift in it," said Yadav.
Please Wait while comments are loading...