ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳೆ ಕೆಲಸಕ್ಕೆ ಹೋಗಲು ಬಯಸುವುದು ಕ್ರೌರ್ಯವಲ್ಲ: ಪತಿಯ ವಿಚ್ಛೇದನ ಅರ್ಜಿ ವಜಾ

|
Google Oneindia Kannada News

ಮುಂಬೈ, ಅಕ್ಟೋಬರ್ 6: ಸಂವಿಧಾನದ ಪ್ರಕಾರ ಮಹಿಳೆಗೆ ಬಲವಂತವಾಗಿ ಮಗುವಿಗೆ ಜನ್ಮ ನೀಡುವಂತಿಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ವಿವಾಹಿತ ಮಹಿಳೆಯು ಗರ್ಭಧಾರಣೆಯನ್ನು ಮುಂದುವರಿಸಬೇಕೆ ಅಥವಾ ಬೇಡವೇ ಎಂಬ ನಿರ್ಧಾರವು ಮಹಿಳೆಯ ಸಂಪೂರ್ಣ ಹಕ್ಕಾಗಿರುತ್ತದೆ ಹಾಗೂ ಪತ್ನಿಯು ತಾನು ಕೆಲಸಕ್ಕೆ ಹೋಗುವ ಇಚ್ಛೆಯನ್ನು ವ್ಯಕ್ತಪಡಿಸಿದರೆ ಅದು ಹಿಂದೂ ವಿವಾಹ ಕಾಯ್ದೆಯ ನಿಯಮಗಳಿಗೆ ಒಳಪಟ್ಟಿರುತ್ತದೆ ಎಂದು ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠವು ಮಹತ್ವದ ತೀರ್ಪಿನಲ್ಲಿ ಹೇಳಿದೆ.

ಮಹಿಳೆಯ ಪತಿ ತನ್ನ ಪತ್ನಿಯಿಂದ ವಿಚ್ಛೇದನಕ್ಕಾಗಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡಿಸಿದ ಬಾಂಬೆ ಹೈಕೋರ್ಟ್ ಕಲಂ 13ರ ಅಡಿಯಲ್ಲಿ ಮಹಿಳೆ ಮದುವೆಯ ಕೆಲಸಕ್ಕೆ ಹೋಗುವುದು ಕ್ರೌರ್ಯ ಎಂದು ಹೇಳಲಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿತು.

ವಿಚ್ಛೇದನ ಕೋರಿ ಪತಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಅತುಲ್ ಚಂದೂರ್ಕರ್ ಮತ್ತು ಊರ್ಮಿಳಾ ಜೋಶಿ-ಫಾಲ್ಕೆ ಅವರ ಪೀಠ ವಿಚಾರಣೆ ನಡೆಸಿತು. ಪತ್ನಿ ಕೆಲಸಕ್ಕೆ ಹೋಗುವುದಾಗಿ ಪತಿ ಜೊತೆ ಆಗಾಗ್ಗೆ ಜಗಳವಾಡುತ್ತಿದ್ದಳು ಮತ್ತು ಕೆಲಸ ಸಿಗುವವರೆಗೂ ಮಗುವನ್ನು ಹೆರುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದಳು ಎಂದು ಅರ್ಜಿದಾರರು ಆರೋಪಿಸಿದ್ದರು.

Wife Willing to Work After Marriage is Not Cruelty- Bombay HC Denies Divorce Plea of Husband

ಪತ್ನಿಯ ಅಧಿಕಾರ

ಆದರೆ, ಮಂಗಳವಾರ ಬಾಂಬೆ ಹೈಕೋರ್ಟ್ ನೀಡಿದ ಆದೇಶದಲ್ಲಿ "ಪ್ರಸ್ತುತ ಈ ಪ್ರಕರಣದಲ್ಲಿ ಅರ್ಹತೆ ಹೊಂದಿರುವ ಹೆಂಡತಿಯ ಬಯಕೆಯನ್ನು ಕ್ರೌರ್ಯ ಎಂದು ಕರೆಯಲಾಗುವುದಿಲ್ಲ, ಪತಿ ಸಮಯ ಮತ್ತು ವಿಧಾನದ ಬಗ್ಗೆ ಪುರಾವೆಗಳನ್ನು ಸಹ ತೋರಿಸಲಿಲ್ಲ. ಪತಿ ಕ್ರೌರ್ಯವೆಸಗಿದ್ದಕ್ಕೆ ಇನ್ನೊಂದು ಕಾರಣವೆಂದರೆ ಆತನ ಪತ್ನಿಯು ತನ್ನ ಒಪ್ಪಿಗೆಯಿಲ್ಲದೆ ಗರ್ಭಪಾತ ಮಾಡಿಸಿಕೊಂಡಿರುವುದು ಎಂದು ಪೀಠವು ಗಮನಿಸಿದೆ."

ಗರ್ಭಾವಸ್ಥೆಯ ಕಾರಣದಿಂದಲೇ ಪತ್ನಿ ಟ್ಯೂಷನ್ ತರಗತಿಗಳನ್ನು ನಿರಾಕರಿಸಿದ್ದಾರೆ ಎಂದು ನ್ಯಾಯಾಲಯವು ಕಂಡುಹಿಡಿದಿದೆ. ಹೀಗಾಗಿ ಆಕೆ ತನ್ನ ಮಗುವಿನ ಜವಾಬ್ದಾರಿಯನ್ನು ಹೊರಲು ಸಿದ್ಧ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಗರ್ಭಧಾರಣೆಯನ್ನು ಮುಂದುವರಿಸಬೇಕೆ ಅಥವಾ ಬೇಡವೇ ಎಂಬುದು ಪತ್ನಿಯ ಅಧಿಕಾರವಾಗಿದೆ. ಭಾರತದ ಸಂವಿಧಾನದ ಪ್ರಕಾರ ಮಹಿಳೆಗೆ ಬಲವಂತವಾಗಿ ಮಗುವಿಗೆ ಜನ್ಮ ನೀಡುವಂತಿಲ್ಲ. ಜತೆಗೆ ವಿಚ್ಛೇದನಕ್ಕೆ ಎರಡನೇ ಕಾರಣವಾಗಿ ಪತ್ನಿ ತನ್ನನ್ನು ಬಿಟ್ಟು ಹೋಗಿದ್ದಾಳೆ ಎಂದು ಪತಿ ಹೇಳಿಕೆ ನೀಡಿದ್ದರು. ಮದುವೆಯಾದ ನಾಲ್ಕೇ ವರ್ಷದಲ್ಲಿ ಪತ್ನಿ ಮನೆ ಬಿಟ್ಟು ಹೋಗಿದ್ದಾಳೆ ಎಂದು ಹೇಳಿಕೊಂಡಿದ್ದಾನೆ.

Wife Willing to Work After Marriage is Not Cruelty- Bombay HC Denies Divorce Plea of Husband

ಆದರೆ, ಆಕೆಯನ್ನು ಅತ್ತೆಯ ಮನೆಗೆ ಕರೆತರಲು ಪತಿಯಿಂದ ಹೆಚ್ಚಿನ ಪ್ರಯತ್ನ ನಡೆದಿಲ್ಲ ಎಂದು ನ್ಯಾಯಾಲಯ ಗಮನಿಸಿದ್ದು, ಹೆಂಡತಿಯು ಸಂಬಂಧವನ್ನು ಶಾಶ್ವತವಾಗಿ ಕೊನೆಗೊಳಿಸಲು ಬಯಸಿದ್ದಾಳೆಂದು ತೋರಿಸಲು ಯಾವುದೇ ಪುರಾವೆಗಳಿಲ್ಲ. ಇದರೊಂದಿಗೆ ವಿಚ್ಛೇದನ ಕೋರಿ ಪತಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಪೀಠ ವಜಾಗೊಳಿಸಿದೆ.

English summary
Wife Willing to Work After Marriage is Not Cruelty- Bombay HC Denies Divorce Plea of Husband. Read more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X