ಭಾರತ: ಜನವರಿ- ಮಾರ್ಚ್‌ ನಡುವೆಯೇ ಹೆಚ್ಚು ಹುಲಿಗಳ ಸಾವು: ಕಾರಣ ಏನು? ಇಲ್ಲಿದೆ ವಿವರ

ಜನವರಿ- ಮಾರ್ಚ್‌ ತಿಂಗಳಲ್ಲಿಯೇ ಏಕೆ ಹೆಚ್ಚು ಹುಲಿಗಳು ಸಾವನ್ನಪುತ್ತವೆ ಎನ್ನುವ ವಿವರಚನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ನವದೆಹಲಿ, ಫೆಬ್ರವರಿ, 28: ಭಾರತದಲ್ಲಿ ಹುಲಿಗಳ ಸಾವಿನ ಸಂಖ್ಯೆ ಏರಿಕೆ ಆಗುತ್ತಲೇ ಇದೆ. ಇತ್ತೀಚೆಗಷ್ಟೇ ಜನವರಿ ತಿಂಗಳಿಂದ ಫೆಬ್ರವರಿ ಮಧ್ಯಂತರವೆಗೆ 26 ಹುಲಿಗಳು ಸಾವನ್ನಪ್ಪಿವೆ ಎನ್ನುವ ವರದಿಯೊಂದು ಬಂದಿತ್ತು. ಇದೀಗ ಹುಲಿಗಳ ಸಾವಿನ ಸಂಖ್ಯೆ 30ಕ್ಕೆ ಏರಿಕೆಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಎಲ್ಲೆಲ್ಲಿ ಎಷ್ಟು ಹುಲಿಗಳು, ಯಾವ ಕಾರಣಕ್ಕೆ ಸಾವನ್ನಪ್ಪಿವೆ ಎನ್ನುವ ವರದಿ ಇಲ್ಲಿದೆ ನೋಡಿ.

2 ತಿಂಗಳಲ್ಲಿ ಸಾವನ್ನಪ್ಪಿದ ಹುಲಿಗಳ ವಿವರ

ಕಳೆದ 2 ತಿಂಗಳಲ್ಲಿ 30 ಹುಲಿಗಳು ಸಾವನ್ನಪ್ಪಿದ್ದು, ಅವುಗಳಲ್ಲಿ ಅರ್ಧದಷ್ಟು ಹುಲಿಗಳು ಸಂರಕ್ಷಿತ ಪ್ರದೇಶದಲ್ಲಿ ಸಾವನ್ನಪಿಪ್ಪಿವೆ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಾವುಗಳು ಸಾಮಾನ್ಯವಾಗಿವೆ ಎಂದು ಎನ್‌ಟಿಸಿಎ ಅಧಿಕಾರಿಗಳು ತಿಳಿಸಿದ್ದಾರೆ.

Why tigers death rise between January and March?, here see details,

ಎನ್‌ಟಿಸಿಎನ ಪ್ರಕಾರ, ಹುಲಿಗಳ ಸಾವಿನ ಸಂಖ್ಯೆ ಸಾಮಾನ್ಯವಾಗಿ ಜನವರಿ-ಮಾರ್ಚ್ ನಡುವೆ ಹೆಚ್ಚಾಗುತ್ತದೆ. ರಣಥಂಬೋರ್, ಜಿಮ್ ಕಾರ್ಬೆಟ್, ಕನ್ಹಾ, ಕಾಜಿರಂಗ, ಪನ್ನಾ, ಸಾತ್ಪುರ, ಒರಾಂಗ್, ಸತ್ಯಮಂಗಲಂ ಮತ್ತು ಪೆಂಚ್‌ಗಳಂತಹ ಮೀಸಲು ಪ್ರದೇಶಗಳಲ್ಲಿ ಹೆಚ್ಚಿನ ಹುಲಿಗಳು ಸಾವನ್ನಪ್ಪಿರುವುದು ಗಮನಾರ್ಹವಾಗಿದೆ.

ಅತಿ ಹೆಚ್ವು ಹುಲಿಗಳ ಸಾವು ಎಲ್ಲಿ?

ಸಾವನ್ನಪ್ಪಿದ್ದ 30 ಹುಲಿಗಳಲ್ಲಿ, 16 ಹುಲಿ ಸಂರಕ್ಷಿತ ಪ್ರದೇಶದ ಹೊರಗಿನ ಪ್ರದೇಶಗಳಲ್ಲಿ ಸಾವನ್ನಪ್ಪಿವೆ. ಹುಲಿಗಳ ಸಾವಿನ ಸಂಖ್ಯೆಯನ್ನು ರಾಜ್ಯವಾರು ನೋಡುವುದಾದರೆ, ಮಧ್ಯಪ್ರದೇಶದಲ್ಲಿ ಅತಿ ಹೆಚ್ಚು ಹುಲಿಗಳು 9 ಸಾವನ್ನಪ್ಪಿವೆ. ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ ಇದ್ದು, ಇಲ್ಲಿ ಏಳು ಹುಲಿಗಳು ಸಾವನ್ನಪ್ಪಿವೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಈ ಅವಧಿಯಲ್ಲಿ ಹುಲಿಗಳ ಸಾವಿನ ಸಂಖ್ಯೆ ಹೆಚ್ಚಾಗುವುದು ಸಹಜ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಸಮಯದಲ್ಲಿ, ಹುಲಿಗಳು ತಮ್ಮ ಪ್ರದೇಶಗಳಿಂದ ಹೊರಬರುತ್ತವೆ. ಆಗ ದೊಡ್ಡ ಬೆಕ್ಕುಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಬಹುದು. ನಂತರ ಪ್ರಾದೇಶಿಕ ಕಾದಾಟಗಳು ನಡೆದು ಹುಲಿಗಳು ಸಾವನ್ನಪ್ಪುವ ಘಟನೆಗಳು ಸಂಭವಿಸುತ್ತವೆ ಎಂದು ತಿಳಿಸಿದೆ.

Why tigers death rise between January and March?, here see details,

ಅಧಿಕಾರಿಗಳು ಹೇಳುವುದೇನು?

ಅಲ್ಲದೆ ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ಹೆಚ್ಚು ಹುಲಿಗಳನ್ನು ಹೊಂದಿದ ರಾಜ್ಯಗಳಾಗಿವೆ. ಹಾಗೆಯೇ ಈ ಎರಡು ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹುಲಿಗಳು ಸಾವನ್ನಪ್ಪಿವೆ. ಹಾಗೆಯೇ ವರ್ಷದಲ್ಲಿ ಸುಮಾರು 200 ಹುಲಿಗಳ ಸಾವನ್ನಪಿದರೆ ಅದು ಅಹಿತಕರವಲ್ಲ. ಇದೀಗ ಒಟ್ಟಾರೆಯಾಗಿ ಹುಲಿಗಳ ಸಂಖ್ಯೆಯು ಕೂಡ 6% ಹೆಚ್ಚಾಗಿವೆ ಎಂದು ಎನ್‌ಟಿಸಿಎ ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟರೆಯಾಗಿ ಹುಲಿಗಳು ಸಾಮಾನ್ಯವಾಗಿ ಸಾವನ್ನಪ್ಪಿವೆ ಎನ್ನುವ ಹೇಳಿಕೆಯು ಹಲವರಲ್ಲಿ ಅನುಮಾನ ಹುಟ್ಟು ಹಾಕಿದೆ. ಯಾವ ಕಾರಣದಿಂದ ಹುಲಿಗಳು ಸಾವನ್ನಪ್ಪಿವೆ ಎಂದು ಅರಣ್ಯ ಇಲಾಖೆಗಳು ನಿಖರವಾಗಿ ಮಾಹಿತಿಯನ್ನು ಕೊಡುತ್ತಿಲ್ಲ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಹಾಗಾಗಿ ಹುಲಿಗಳ ಸಾವನ್ನು ತಡೆಗಟ್ಟಲು ಸರ್ಕಾರ ಸೂಕ್ತ ನಿರ್ಧಾರ ತರೆಗೆದುಕೊಳ್ಳಬೇಕು. ಹಾಗೆಯೇ ಸಾವುಗಳ ಬಗ್ಗೆ ನಿಖರವಾದ ಮಾಹಿತಿಯನ್ನು ನೀಡಬೇಕು ಎನ್ನುವುದು ಪ್ರಾಣಿಪ್ರಿಯರ ಆಗ್ರಹವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+