ಭಾರತದಲ್ಲಿ ಜನಾಂಗೀಯ ಪರಿಶುದ್ಧತೆ ಅಧ್ಯಯನಕ್ಕೆ ತಜ್ಞರ ವಿರೋಧವೇಕೆ?

ನವದೆಹಲಿ, ಜೂನ್ 13: ಭಾರತದಲ್ಲಿ ಜಾತಿ, ಧರ್ಮ, ಮೇಲ್ಜಾತಿ ಮತ್ತು ಕೀಳುಜಾತಿ ಎನ್ನುವ ಪದ್ಧತಿಗೆ ಮೊದಲಿನಿಂದಲ ಕೆಲ ಸಮುದಾಯಗಳು ಕಿಮ್ಮತ್ತು ಕೊಡುತ್ತಲೇ ಬಂದಿವೆ. ಈ ಜನಾಂಗಗಳ ಆಧಾರದ ಮೇಲೆಯೇ ಸಮಾಜದಲ್ಲಿ ಸ್ಥಾನಮಾನಗಳನ್ನು ನೀಡುತ್ತಿರುವುದೂ ಕಂಡು ಬರುತ್ತಿದೆ. ಇಂಥದರ ಮಧ್ಯೆದಲ್ಲೇ ನಡೆೆಸುತ್ತಿರುವ ಯೋಜನೆಯೊಂದಕ್ಕೆ 100ಕ್ಕೂ ಹೆಚ್ಚು ತಜ್ಞರು, ವಿಜ್ಞಾನಿಗಳು, ಇತಿಹಾಸಕಾರರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

"ಭಾರತೀಯ ಜನಸಂಖ್ಯೆಯ ಗುಂಪುಗಳ ಆನುವಂಶಿಕ ಹೋಲಿಕೆಗಳು ಮತ್ತು ಡಿಎನ್‌ಎ (ಜೆನೆಟಿಕ್) ಪ್ರೊಫೈಲ್‌ಗಳಲ್ಲಿನ ವ್ಯತ್ಯಾಸಗಳನ್ನು" ಅಧ್ಯಯನ ಮಾಡುವ ಯೋಜನೆಗೆ ಧನಸಹಾಯ ನೀಡುವುದಕ್ಕೆ ವಿಜ್ಞಾನಿಗಳು ತೀವ್ರವಾಗಿ ವಿರೋಧಿಸಿದ್ದಾರೆ. ಈ ಸಂಬಂಧ 100ಕ್ಕೂ ಹೆಚ್ಚು ಪ್ರಮುಖ ಜೀವಶಾಸ್ತ್ರಜ್ಞರು, ಇತಿಹಾಸಕಾರರು, ಮಾನವಶಾಸ್ತ್ರಜ್ಞರು ಮತ್ತು ಬುದ್ಧಿಜೀವಿಗಳು ಕೇಂದ್ರ ಸಂಸ್ಕೃತಿ ಸಚಿವಾಲಯಕ್ಕೆ ಜಂಟಿ ಪತ್ರವನ್ನು ಬರೆದಿದ್ದಾರೆ.

ಭಾರತೀಯ ಮಾನವಶಾಸ್ತ್ರೀಯ ಸಮೀಕ್ಷೆ, ಲಕ್ನೋ ಮೂಲದ ಬೀರಬಲ್ ಸಹಾನಿ ಇನ್‌ಸ್ಟಿಟ್ಯೂಟ್ ಆಫ್ ಪ್ಯಾಲಿಯೊ ಸೈನ್ಸಸ್‌ನ (ಬಿಎಸ್‌ಐಪಿ) ಕೆಲವು ವಿಜ್ಞಾನಿಗಳು ಮತ್ತು ಖ್ಯಾತ ಪುರಾತತ್ವಶಾಸ್ತ್ರಜ್ಞ ವಸಂತ ಶಿಂಧೆ ಡೆಕ್ಕನ್ ಕಾಲೇಜ್ ಸ್ನಾತಕೋತ್ತರ ಮತ್ತು ಸಂಶೋಧನಾ ಸಂಸ್ಥೆಯ ಮಾಜಿ ನಿರ್ದೇಶಕರನ್ನು ಒಳಗೊಂಡ ಯೋಜನೆಯ ಕುರಿತು ಕಳೆದ ತಿಂಗಳು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಕುರಿತು ವಿಜ್ಞಾನಿಗಳು ವಿರೋಧ ವ್ಯಕ್ತಪಡಿಸಿದ್ದು ಏಕೆ, ಇದರ ಹಿಂದಿನ ಅಸಲಿ ಕಾರಣವೇನು ಎಂಬುದನ್ನು ವರದಿಯಲ್ಲಿ ತಿಳಿದುಕೊಳ್ಳೋಣ.

ಭಾರತೀಯ ಜನಸಂಖ್ಯೆಯಲ್ಲಿನ ಅನುವಂಶಿಕತೆ ಪತ್ತೆಗೆ ಯೋಜನೆ

ಭಾರತೀಯ ಜನಸಂಖ್ಯೆಯಲ್ಲಿನ ಅನುವಂಶಿಕತೆ ಪತ್ತೆಗೆ ಯೋಜನೆ

ಭಾರತದಲ್ಲಿ ಜನಾಂಗಗಳ ಪರಿಶುದ್ಧತೆಯನ್ನು ಪತ್ತೆ ಹಚ್ಚಲು ಆನುವಂಶಿಕ ಇತಿಹಾಸವನ್ನು ತಿಳಿಯುವುದಕ್ಕಾಗಿ ಇತ್ತೀಚಿನ ಡಿಎನ್ಎ ಅನುಕ್ರಮ ಸಾಧನಗಳನ್ನು ಸಂಗ್ರಹಿಸುವುದು ಯೋಜನೆಗೆ ವಿರೋಧ ವ್ಯಕ್ತವಾಗಿದೆ. ಈ ಯೋಜನೆಯು "ಕಳೆದ 10,000 ವರ್ಷಗಳಲ್ಲಿ ಭಾರತೀಯ ಜನಸಂಖ್ಯೆಯಲ್ಲಿನ ಅನುವಂಶಿಕ ರೂಪಾಂತರ ಮತ್ತು ಮಿಶ್ರಣದ ಪ್ರಕ್ರಿಯೆಯನ್ನು" ಅಧ್ಯಯನ ಮಾಡುವ ಗುರಿಯನ್ನು ಹೊಂದಿದೆ ಎಂದು ಶಿಂಧೆ ಹೇಳಿದ್ದಾರೆ ಎಂದು ವರದಿ ಉಲ್ಲೇಖಿಸಲಾಗಿದೆ.

ವರದಿಗಳ ಬಗ್ಗೆ ಶಿಂಧೆ ನೀಡಿದ ಸ್ಪಷ್ಟನೆ ಏನು?

ವರದಿಗಳ ಬಗ್ಗೆ ಶಿಂಧೆ ನೀಡಿದ ಸ್ಪಷ್ಟನೆ ಏನು?

ಬೆಂಗಳೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‌ಡ್ ಸ್ಟಡೀಸ್‌ನಲ್ಲಿ ಅಡ್ಜಂಕ್ಟ್ ಪ್ರಾಧ್ಯಾಪಕರಾಗಿರುವ ಶಿಂಧೆ, ಹರ್ಯಾಣದ ರಾಖಿಗರ್ಹಿಯಲ್ಲಿ ಹರಪ್ಪ ನಾಗರಿಕತೆ ಯುಗದ ಅಂತ್ಯದ ಅಸ್ಥಿಪಂಜರಗಳ ಇತಿಹಾಸವನ್ನು ಪತ್ತೆಹಚ್ಚಲು ಪುರಾತತ್ತ್ವ ಶಾಸ್ತ್ರದ ನೇತೃತ್ವ ವಹಿಸಿದ್ದರು. "ಪ್ರಸ್ತುತ ಹೇಳಿಕೆಯು ವೈರಲ್ ಆಗುತ್ತಿದ್ದಂತೆ ತಮ್ಮ ಹೇಳಿಕೆಯನ್ನು ತಿರುಚಲಾಗಿದ್ದು, ಇದೊಂದು ಕಟ್ಟುಕಥೆಯಾಗಿದೆ" ಎಂದಿದ್ದಾರೆ.

ಟ್ವೀಟ್ ಮೂಲಕ ಸಂಸ್ಕೃತಿ ಸಚಿವಾಲಯ ನೀಡಿದ ಸ್ಪಷ್ಟನೆ

ಟ್ವೀಟ್ ಮೂಲಕ ಸಂಸ್ಕೃತಿ ಸಚಿವಾಲಯ ನೀಡಿದ ಸ್ಪಷ್ಟನೆ

ಈ ಕುರಿತಾದ ಎಲ್ಲ ವರದಿಗಳು ತಪ್ಪಾಗಿದೆ. ಇದಕ್ಕೆ ಸಂಬಂಧಿಸಿದ ಯೋಜನೆಗಳು "ಜನಾಂಗಗಳ ಆನುವಂಶಿಕ ಇತಿಹಾಸ"ವನ್ನು ಸ್ಥಾಪಿಸುವುದಕ್ಕೆ ಸಂಬಂಧಿಸಿಲ್ಲ ಎಂದು ಸಂಸ್ಕೃತಿ ಸಚಿವಾಲಯ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದೆ.

ಶಿಕ್ಷಣ ತಜ್ಞರು ಹೇಳುವಂತೆ ಸರ್ಕಾರವು ಅಂತಹ ಯೋಜನೆಯಿಂದ ತನ್ನನ್ನು ತಾನು ಬೇರ್ಪಡಿಸಿಕೊಂಡಿರುವುದು "ಸ್ವಾಗತ" ಆದರೆ ಜನಾಂಗಕ್ಕೆ ಸಂಬಂಧಿಸಿದ ಯಾವುದೇ ಪ್ರಸ್ತುತ ಅಥವಾ ಭವಿಷ್ಯದ ಯೋಜನೆಗಳ "ಸಾರ್ವಜನಿಕ ನಿರಾಕರಣೆ" ಅಗತ್ಯವಾಗಿದೆ, ವಿಶೇಷವಾಗಿ ಜನಾಂಗೀಯ ಶುದ್ಧತೆಯನ್ನು ಅಧ್ಯಯನ ಮಾಡುವುದಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಜೈವಿಕ ಜನಾಂಗಗಳ ಪರಿಕಲ್ಪನೆಯನ್ನು ಬಹಳ ಹಿಂದೆಯೇ ತಿರಸ್ಕರಿಸಲಾಗಿದೆ. "ಜನಾಂಗ" ಎಂಬ ಪದವನ್ನು ಮೂಳೆಯ ರಚನೆ ಮತ್ತು ಚರ್ಮದ ಬಣ್ಣ, ನಂಬಿಕೆ ಹಾಗೂ ಧರ್ಮದಂತಹ ಸಾಮಾಜಿಕ ಗುಣಲಕ್ಷಣಗಳು ಮತ್ತು ದೈಹಿಕ ಲಕ್ಷಣಗಳ ಆಧಾರದ ಮೇಲೆ ಜನರನ್ನು ವಿಂಗಡಿಸಲಾಗುತ್ತದೆ. ಇದನ್ನು ಮನುಷ್ಯರ ವಿಭಿನ್ನ ಗುಂಪುಗಳ ವರ್ಗೀಕರಣ ಪ್ರಯತ್ನದ ಭಾಗವಾಗಿ ಮಾಡಲಾಗುತ್ತಿದೆ. ಈ ಗುಂಪುಗಳು ಹೇಗಾದರೂ "ನೈಸರ್ಗಿಕ" ಅಥವಾ ಅವುಗಳು ಅರ್ಥಪೂರ್ಣ ಜೈವಿಕ ಆಧಾರವನ್ನು ಹೊಂದಿವೆ ಎಂದು ಊಹಿಸಲಾಗಿದೆ.

ವೈಯಕ್ತಿಕ ಜೈವಿಕ ಆನುವಂಶಿಕತೆಯನ್ನು ರೂಪಿಸುವ ಜೀನ್‌ಗಳ ವಿಷಯದಲ್ಲಿ, ಎಲ್ಲರೂ ಮನುಷ್ಯರೇ ಆಗಿರುತ್ತಾರೆ. ಅವರು ಎಲ್ಲಿಂದ ಬಂದರು ಎಂಬುದನ್ನು ಲೆಕ್ಕಿಸದೆ, ಒಂದೇ "ಜೀನ್ ಪೂಲ್" ಅನ್ನು ಹಂಚಿಕೊಳ್ಳುತ್ತಾರೆ ಎಂದು ಉಲ್ಲೇಖಿಸಲಾಗಿದೆ.

"ಶುದ್ಧತೆ" ಎಂಬ ಪರಿಕಲ್ಪನೆಯು ಅರ್ಥಹೀನವೇಕೆ?

ಶುದ್ಧತೆ ಎಂಬ ಪರಿಕಲ್ಪನೆಯು ಅರ್ಥಹೀನವಾಗಿದೆ. ಇದರ ಜೊತೆಗೆ, ಕೆಲವು ಗುಂಪುಗಳು ಇತರರಿಗಿಂತ "ಕಡಿಮೆ ಶುದ್ಧ ಅಥವಾ ಹೆಚ್ಚು ಶುದ್ಧ" ಎಂಬ ಅರ್ಥವನ್ನು ಹೊಂದಿದೆ. ಈ ವ್ಯಕ್ತಿಗಳ ಹಿನ್ನೆಲೆ ತಿಳಿಯುವ ಇತಿಹಾಸ ಭಯಾನಕ ಅನ್ಯಾಯದ ಪಾಠವನ್ನು ಕಲಿಸಿದೆ. ಪ್ರಯೋಜನಗಳ ನಿರಾಕರಣೆ ಅಥವಾ ಕಿರುಕುಳವು "ಹೆಚ್ಚು ಶುದ್ಧ" ಗುಂಪುಗಳಿಂದ "ಕಡಿಮೆ ಶುದ್ಧ" ಗುಂಪುಗಳಿಗೆ ಭಿನ್ನವಾಗಿರುತ್ತದೆ. ಮಾನವರ ಜನಾಂಗೀಯ ಪತ್ತೆ ಮಾಡುವುದನ್ನು ಈ ಹಿಂದಿಯೂ ತಿರಸ್ಕರಿಸಲಾಗಿದೆ, ಭಾರತದಲ್ಲಿ ಈ ಪರಿಕಲ್ಪನೆಯನ್ನು ಪುನರುಜ್ಜೀವನಗೊಳಿಸುವ ಯಾವುದೇ ಪ್ರಯತ್ನ ಮಾಡಬಾರದು ಎಂಬುದನ್ನು ಅವರು ಗಮನಿಸುತ್ತಾರೆ.

ಅನುವಂಶಿಕತೆಯ ಪತ್ತೆಗೆ ವಿರೋಧ ವ್ಯಕವಾಗಿದ್ದು ಏಕೆ?

ಅನುವಂಶಿಕತೆಯ ಪತ್ತೆಗೆ ವಿರೋಧ ವ್ಯಕವಾಗಿದ್ದು ಏಕೆ?

ಮಾನವ ಜನಸಂಖ್ಯೆಯ ತಳಿಶಾಸ್ತ್ರಜ್ಞರು ಮತ್ತು ಸಂಸ್ಕೃತಿ ಸಚಿವಾಲಯದ ಅಡಿಯಲ್ಲಿ ಭಾರತದ ಮಾನವಶಾಸ್ತ್ರೀಯ ಸಮೀಕ್ಷೆ ಸೇರಿದಂತೆ ವಿವಿಧ ಭಾರತೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಮಾನವಶಾಸ್ತ್ರಜ್ಞರು, ಭಾರತದ ವಿವಿಧ ಸಮುದಾಯಗಳಿಂದ ಸಂಗ್ರಹಿಸಿದ ವ್ಯಕ್ತಿಗಳ ವಿವರವಾದ DNA ವಿಶ್ಲೇಷಣೆಯನ್ನು ಕೈಗೊಂಡಿದ್ದಾರೆ. ಬುಡಕಟ್ಟು ಸಮುದಾಯ ಒಳಗೊಂಡಂತೆ ಪ್ರತಿಯೊಂದು ಸಮುದಾಯವು ಹಲವಾರು ಪೂರ್ವಜರ ಸಮುದಾಯಗಳ ಮಿಶ್ರ ಸಮುದಾಯವಾಗಿದೆ ಎಂದು ಈ ವಿಶ್ಲೇಷಣೆಯು ಹೇಳುತ್ತದೆೆ. ಈ ಗುರುತುಗಳನ್ನು ಆರಾಮವಾಗಿ ಪತ್ತೆ ಮಾಡಬಹುದು, ಆದರೆ ಖಚಿತವಾಗಿ ಹೇಳುವುದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆೆ.

"ಸಂಸ್ಕೃತಿ ಸಚಿವಾಲಯದ ಪರಿಗಣನೆಯಲ್ಲಿರುವ ಯೋಜನೆಯಿಂದ ಇನ್ನೇನು ಫಲಿತಾಂಶವನ್ನು ನಿರೀಕ್ಷಿಸಲಾಗಿದೆ, ನಮಗೆ ತಿಳಿದಿಲ್ಲ. ಆದರೆ ಇದು "ಜನಾಂಗೀಯ ಶುದ್ಧತೆಯ" ಪ್ರಶ್ನೆಗಳಿಗೆೆ ಉತ್ತರ ಕಂಡುಕೊಳ್ಳುವ ಪ್ರಯತ್ನೇ ಆಗಿದ್ದರೆ, ಇದರಿಂದ ಮತ್ತೊಂದು ರೀತಿಯ ಸಮಸ್ಯೆೆಗಳು ಸೃಷ್ಟಿ ಆಗುವುದರಲ್ಲಿ ಎರಡು ಮಾತಿಲ್ಲ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಂಸ್ಕೃತಿ ಸಚಿವಾಲಯಕ್ಕೆ ಪತ್ರ ಬರೆದವರ ಸಹಿ ಸಂಗ್ರಹ

ಸಂಸ್ಕೃತಿ ಸಚಿವಾಲಯಕ್ಕೆ ಪತ್ರ ಬರೆದವರ ಸಹಿ ಸಂಗ್ರಹ

ಭಾರತೀಯ ಜನಸಂಖ್ಯೆಯ ಗುಂಪುಗಳ ಆನುವಂಶಿಕ ಹೋಲಿಕೆಗಳು ಮತ್ತು ಡಿಎನ್‌ಎ (ಜೆನೆಟಿಕ್) ಪ್ರೊಫೈಲ್‌ಗಳಲ್ಲಿನ ವ್ಯತ್ಯಾಸಗಳನ್ನು" ಅಧ್ಯಯನ ಮಾಡುವ ಯೋಜನೆಗೆ ವಿರೋಧಿಸಿ ಕೇಂದ್ರಕ್ಕೆ ಬರೆದ ಪತ್ರದಲ್ಲಿ ಸಹಿ ಮಾಡಿದವರಲ್ಲಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಬಯೋಮೆಡಿಕಲ್ ಜೀನೋಮಿಕ್ಸ್‌ನ ಪಾರ್ಥ ಮಜುಂದಾರ್ ಸೇರಿದ್ದಾರೆ. ಇವರ ಜೊತೆಗೆ ಸೆಂಟರ್ ಫಾರ್ ಹ್ಯೂಮನ್ ಜೆನೆಟಿಕ್ಸ್ ವಿದ್ಯಾನಂದ ನಂಜುಂಡಯ್ಯ, ಹರ್ಯಾಣದ ಅಶೋಕ ವಿಶ್ವವಿದ್ಯಾಲಯದ ಎಲ್.ಎಸ್. ಶಶಿಧರ, ಇತಿಹಾಸಾರ ಮತ್ತು ಬರಹಗಾರ ರಾಮಚಂದ್ರ ಗುಹಾ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ರಾಘವೇಂದ್ರ ಗದಗಕರ್, ಬೆಂಗಳೂರಿನ ಸೈದ್ಧಾಂತಿಕ ವಿಜ್ಞಾನಗಳ ಅಂತರರಾಷ್ಟ್ರೀಯ ಕೇಂದ್ರದ ರಾಮ ಗೋವಿಂದರಾಜನ್ ಸಹ ಸೇರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+