ಮೋದಿ ಪಬ್ಜಿ ಯಾಕೆ ಬ್ಯಾನ್ ಮಾಡಿಲ್ಲ? ಉತ್ತರ ನೀಡಿದ ಕಾಂಗ್ರೆಸ್
ನವದೆಹಲಿ, ಜುಲೈ 28: ಚೀನಾದ ಆ್ಯಪ್ ಗಳನ್ನು ನಿಷೇಧಿಸಿರುವ ನರೇಂದ್ರ ಮೋದಿ ಸರಕಾರ, ಪಬ್ಜಿ ಯನ್ನು ಯಾಕೆ ಬ್ಯಾನ್ ಮಾಡಿಲ್ಲ ಎನ್ನುವ ಪ್ರಶ್ನೆಯನ್ನು ಎತ್ತಿ, ಅದಕ್ಕೆ ಉತ್ತರವನ್ನೂ ಕಾಂಗ್ರೆಸ್ ನೀಡಿದೆ.
Recommended Video
ಚೀನಾ ಜೊತೆಗಿನ ಗಲ್ವಾನ್ ಗಡಿ ಸಂಘರ್ಷದ ನಂತರ, ಭಾರತ ಸರಕಾರ ಮೊದಲಿಗೆ 59, ನಂತರ 47 ಆ್ಯಪ್ ಗಳನ್ನು ಬ್ಯಾನ್ ಮಾಡಿತ್ತು. ಆದರೆ, ಈವರೆಗೂ ಜನಪ್ರಿಯ ಪಬ್ಜಿಗೆ ನಿಷೇಧ ಹೇರಿಲ್ಲ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ಸಿನ ವಕ್ತಾರ, ಖ್ಯಾತ ವಕೀಲರೂ ಆಗಿರುವ ಅಭಿಷೇಕ್ ಮನು ಸಿಂಘ್ವಿ, ಮೋದಿ ಸರಕಾರವನ್ನು ವ್ಯಂಗ್ಯವಾಡುವ ಟ್ವೀಟ್ ಮಾಡಿದ್ದಾರೆ. ಅವರು ಮಾಡಿದ ಟ್ವೀಟ್ ಹೀಗಿದೆ:

"ಮೋದಿಜಿ ಪಬ್ಜಿಯನ್ನು ಬ್ಯಾನ್ ಮಾಡಬೇಕೆಂದು ಬಯಸಿದ್ದರು. ಆದರೆ, ವಾಸ್ತವತೆಯನ್ನು ಅರಿತಿದ್ದಾರೆ. ಯುವಕರು ತಮ್ಮ ಕಲ್ಪನಾ ಲೋಕದಿಂದ ವಾಸ್ತವ ಲೋಕಕ್ಕೆ ಬಂದರೆ, ಉದ್ಯೋಗದ ಬಗ್ಗೆ ಕೇಳಿದರೆ, ಇದು ದೊಡ್ಡ ಸಮಸ್ಯೆಯಾಗಲಿದೆ"ಎಂದು ಸಿಂಘ್ವಿ, ಟ್ವೀಟ್ ಮೂಲಕ, ಮೋದಿ ಸರಕಾರವನ್ನು ಲೇವಡಿ ಮಾಡಿದ್ದಾರೆ.
ಪಬ್ಜಿ, ದಕ್ಷಿಣ ಕೊರಿಯಾ ಮೂಲದ ಸಂಸ್ಥೆಯಾಗಿದ್ದರೂ, ಅದಕ್ಕೆ ಬಂಡವಾಳ ಹರಿದು ಬಂದಿದ್ದು ಚೀನಾ ಮೂಲದ ಕಂಪೆನಿಯಿಂದ. ಪಬ್ಜಿ ಆ್ಯಪ್, ಭಾರತದಲ್ಲಿ ಹೆಚ್ಚು ಬಳಕೆಯಾಗುತ್ತಿದೆ.

ಚೀನಾ ಮೂಲದ ಟಿಕ್ ಟಾಕ್ ಸೇರಿದಂತೆ 59 ಆ್ಯಪ್ಗಳನ್ನು ಮೊದಲು ಬ್ಯಾನ್ ಮಾಡಿದ್ದ ಕೇಂದ್ರ ಸರಕಾರ, ಮತ್ತೆ 47 ಆ್ಯಪ್ಗಳನ್ನು ನಿಷೇಧಿಸಿತ್ತು.












Click it and Unblock the Notifications