Get Updates
Get notified of breaking news, exclusive insights, and must-see stories!

ಭಾರತದಲ್ಲಿ ಕೊರೊನಾವೈರಸ್ ಹಾಗೂ ಕುಂಭ ಮೇಳದ ನಡುವಿನ ನಂಟು!

ನವದೆಹಲಿ, ಮೇ 30: ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಏರಿಕೆ ಆಗುತ್ತಿರುವುದ ಹಿಂದೆ ಕುಂಭ ಮೇಳ ನಡೆಸಿರುವುದೇ ಪ್ರಮುಖ ಕಾರಣ ಎಂಬ ಆರೋಪಿಗಳು ಮೇಲಿಂದ ಮೇಲೆ ಕೇಳಿ ಬರುತ್ತಿವೆ.

ದೇಶದಲ್ಲಿ ಕೊವಿಡ್-19 ಹೊಸ ಪ್ರಕರಣಗಳ ಸಂಖ್ಯೆ 4 ಲಕ್ಷದಿಂದ 1.70 ಲಕ್ಷಕ್ಕೆ ಇಳಿಮುಖವಾಗಿದೆ. ಇದರ ಹಿಂದೆಯೂ ಒಂದು ಕಥೆಯಿದೆ. ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆಯೇ ವಿನಃ ಪಾಸಿಟಿವಿಟಿ ದರ ಮೊದಲಿನಷ್ಟೇ ಇದೆ. ಅಂದರೆ ಕೊರೊನಾವೈರಸ್ ಪರೀಕ್ಷೆಗೊಳಪಟ್ಟವರಲ್ಲಿ ಶೇಕಡಾವಾರು ಸೋಂಕಿತ ಪ್ರಕರಣಗಳ ಸಂಖ್ಯೆ ಮೊದಲಿನಷ್ಟೇ ಉಳಿದಿದೆ.

ಹರಿದ್ವಾರದ ಕುಂಭ ಮೇಳದಲ್ಲಿ ಭಾಗವಹಿಸಿದವರು ಮತ್ತು ಅಲ್ಲಿಂದ ವಾಪಸ್ ಆಗಿರುವವರಲ್ಲಿ ಎಷ್ಟು ಜನರಿಗೆ ಕೊವಿಡ್-19 ಸೋಂಕು ತಗುಲಿದೆ. ಕುಂಭ ಮೇಳವೇ ಕೊವಿಡ್-19 ಸೂಪರ್ ಸ್ಪ್ರೆಡರ್ ಎನ್ನುವುದರ ಹಿಂದಿನ ಅಸಲಿ ಕಥೆಯೇನು. ಕುಂಭ ಮೇಳ ಮತ್ತು ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಅಂಕಿ-ಅಂಶಗಳು ಬಿಚ್ಚಿಟ್ಟ ಮಾಹಿತಿಯೇನು. ಕುಂಭ ಮೇಳದಲ್ಲಿ ಭದ್ರತಾ ಉಸ್ತುವಾರಿ ವಹಿಸಿಕೊಂಡ ಅಧಿಕಾರಿಗಳು ಹೇಳುವುದೇನು ಎಂಬುದರ ಕುರಿತು ಸಂಪೂರ್ಣ ವರದಿ ಇಲ್ಲಿದೆ ಓದಿ.

ಹರಿದ್ವಾರದ ಕುಂಭ ಮೇಳದಲ್ಲಿ ಎಷ್ಟು ಜನರಿಗೆ ಸೋಂಕು?

ಹರಿದ್ವಾರದ ಕುಂಭ ಮೇಳದಲ್ಲಿ ಎಷ್ಟು ಜನರಿಗೆ ಸೋಂಕು?

ಹರಿದ್ವಾರದಲ್ಲಿ ನಡೆದ ಕುಂಭ ಮೇಳವನ್ನು ಕೊರೊನಾವೈರಸ್ ಸೂಪರ್ ಸ್ಪ್ರೆಡರ್ ಎಂದು ಕರೆಯುವುದು ಸರಿಯಲ್ಲ. ಕಳೆದ ಜನವರಿ 1 ರಿಂದ ಕುಂಭ ಮೇಳ ಮುಕ್ತಾಯಗೊಳ್ಳುವವರೆಗೂ ನಡೆಸಿ RT-PCR ಪರೀಕ್ಷೆಯಲ್ಲಿ ಶೇ. 0.20ರಷ್ಟು ಮಂದಿಯಲ್ಲಿ ಮಾತ್ರ ಸೋಂಕು ಕಾಣಿಸಿಕೊಂಡಿದೆ. ಕುಂಭ ಮೇಳದ ಭದ್ರತೆಗೆ ನಿಯೋಜನೆಗೊಂಡ ಶೇ.0.50ರಷ್ಟು ಸಿಬ್ಬಂದಿಗೆ ಸೋಂಕು ತಗುಲಿರುವುದು ಪರೀಕ್ಷೆಯಲ್ಲಿ ಖಚಿತಗೊಂಡಿದೆ ಎಂದು ಕುಂಭ ಮೇಳದ ಉಸ್ತುವಾರಿ ವಹಿಸಿಕೊಂಡಿದ್ದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕುಂಭ ಮೇಳಕ್ಕೂ ಮೊದಲೇ ಎರಡನೇ ಅಲೆ ಶುರು

ಕುಂಭ ಮೇಳಕ್ಕೂ ಮೊದಲೇ ಎರಡನೇ ಅಲೆ ಶುರು

"ಕಳೆದ ಏಪ್ರಿಲ್ 1ರಿಂದ ಹರಿದ್ವಾರದಲ್ಲಿ ಕುಂಭ ಮೇಳ ಆರಂಭಗೊಳ್ಳುವುದಕ್ಕೂ ಮೊದಲೇ ದೇಶದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ 2ನೇ ಅಲೆ ಶುರುವಾಗಿತ್ತು. ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ದಾಖಲೆ ಮಟ್ಟದ ಕೊವಿಡ್-19 ಪ್ರಕರಣಗಳು ವರದಿಯಾಗಿದ್ದವು. ಹರಿದ್ವಾರ ಜಿಲ್ಲೆಯಲ್ಲಿ ಜನವರಿ 1 ರಿಂದ ಏಪ್ರಿಲ್ 30ರವರೆಗಿನ ಕೊವಿಡ್-19 ಅಂಕಿ-ಅಂಶಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿದರೆ ಕುಂಭ ಮೇಳವನ್ನು ರೋಗದ ಸೂಪರ್ ಸ್ಪ್ರೆಡರ್ ಎಂದು ಕರೆಯುವುದಕ್ಕೆ ಆಗುವುದಿಲ್ಲ" ಕುಂಭ ಮೇಳದ ಐಜಿ ಸಂಜಯ್ ಗುಂಜ್ಯಾಲ್ ಹೇಳಿದ್ದಾರೆ.

ಕೊರೊನಾ ಪರೀಕ್ಷೆ ಮತ್ತು ಶೇಕಡಾವಾರು ಪಾಸಿಟಿವಿಟಿ ದರ

ಕೊರೊನಾ ಪರೀಕ್ಷೆ ಮತ್ತು ಶೇಕಡಾವಾರು ಪಾಸಿಟಿವಿಟಿ ದರ

ಹರಿದ್ವಾರದಲ್ಲಿ ನಡೆದ ಕುಂಭ ಮೇಳದ ಭದ್ರತಾ ನಿರ್ವಹಣೆಯ ಹೊಣೆಯನ್ನು ಐಜಿ ಸಂಜಯ್ ಗುಂಜ್ಯಾಲ್ ರಿಗೆ ವಹಿಸಲಾಗಿತ್ತು. ಅವರು ನೀಡಿರುವ ಅಂಕಿ-ಅಂಶಗಳ ಪ್ರಕಾರ, ಜನವರಿ 1 ರಿಂದ ಏಪ್ರಿಲ್ 30ರವರೆಗೂ ಹರಿದ್ವಾರ ಜಿಲ್ಲೆಯಲ್ಲಿ 8.91 ಲಕ್ಷ ಜನರಿಗೆ ಕೊವಿಡ್-19 ಪರೀಕ್ಷೆ ಮಾಡಲಾಯಿತು. ಈ ಪೈಕಿ ಶೇ.0.20ರಷ್ಟು ಅಂದರೆ ಕೇವಲ 1,954 ಜನರಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿತ್ತು.

ಕುಂಭ ಮೇಳ ಏಕೆ ಕೊವಿಡ್ ಸೂಪರ್ ಸ್ಪ್ರೆಡರ್?

ಕುಂಭ ಮೇಳ ಏಕೆ ಕೊವಿಡ್ ಸೂಪರ್ ಸ್ಪ್ರೆಡರ್?

ಹರಿದ್ವಾರದ ಕುಂಭ ಮೇಳವನ್ನು ಕೊರೊನಾವೈರಸ್ ಸೂಪರ್ ಸ್ಪ್ರೆಡರ್ ಎಂಬುದನ್ನು ಸಾಬೀತುಪಡಿಸುವುದಕ್ಕೆ ಐಜಿ ಸಂಜಯ್ ಗುಂಜ್ಯಾಲ್ ಮತ್ತೊಂದು ಕಾರಣ ಕೊಟ್ಟಿದ್ದಾರೆ. ಏಪ್ರಿಲ್ 30ರವರೆಗೂ ಕುಂಭ ಮೇಳದಲ್ಲಿ ಭದ್ರತೆಗೆ ನಿಯೋಜಿಸಿದ 16,000 ಭದ್ರತಾ ಸಿಬ್ಬಂದಿ ಪೈಕಿ ಶೇ.0.50ರಷ್ಟು ಅಂದರೆ 88 ಸಿಬ್ಬಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಈ ಅಂಕಿ-ಸಂಖ್ಯೆಯು ಕೊವಿಡ್-19 ಸ್ಥಿತಿಗತಿಯ ಸತ್ಯಾಂಶವನ್ನು ತೋರಿಸುತ್ತದೆ. ಏಕೆಂದರೆ ಹರ್-ಕೀ-ಪೈರಿ ಸೇರಿದಂತೆ ಪುಣ್ಯಸ್ನಾನ ಮಾಡುವ ಹಲವು ಗಂಗಾ ಘಾಟ್ ನಲ್ಲಿ ಜನರ ಜೊತೆಗೆ ಈ ಸಿಬ್ಬಂದಿ ನೇರವಾಗಿ ಸಂಪರ್ಕದಲ್ಲಿದ್ದರು ಎಂದು ತಿಳಿಸಿದ್ದಾರೆ.

ಹರಿದ್ವಾರದಲ್ಲಿ ನಡೆಸಿದ ಕೊರೊನಾವೈರಸ್ ಪರೀಕ್ಷೆ

ಹರಿದ್ವಾರದಲ್ಲಿ ನಡೆಸಿದ ಕೊರೊನಾವೈರಸ್ ಪರೀಕ್ಷೆ

ಕಳೆದ ಏಪ್ರಿಲ್ 1 ರಿಂದ 30ರವರೆಗೂ ನಡೆದ ಕುಂಭ ಮೇಳದಲ್ಲಿ ಭಾಗವಹಿಸಿದ 55,55,893 ಜನರಿಗೆ ಕೊವಿಡ್-19 ಸೋಂಕಿನ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ 17,333 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಏಪ್ರಿಲ್ 1ರ ಒಂದೇ ದಿನ ಹರಿದ್ವಾರ ಜಿಲ್ಲೆಯಲ್ಲಿ 144 ಮಂದಿಗೆ ಸೋಂಕು ತಗುಲಿರುವುದು ವರದಿಯಾಗಿತ್ತು.

ಕುಂಭ ಮೇಳದಲ್ಲಿ ಭಕ್ತಾಧಿಗಳ ಪುಣ್ಯಸ್ನಾನ

ಕುಂಭ ಮೇಳದಲ್ಲಿ ಭಕ್ತಾಧಿಗಳ ಪುಣ್ಯಸ್ನಾನ

ಉತ್ತರಾಖಂಡದ ಹರಿದ್ವಾರ ಜಿಲ್ಲೆಯಲ್ಲಿ 12 ವರ್ಷಗಳಿಗೆ ಒಂದು ಬಾರಿ ನಡೆಯುವ ಕುಂಭಮೇಳ ಸಾಮಾನ್ಯವಾಗಿ 4 ತಿಂಗಳವರೆಗೆ ನಡೆಯುತ್ತದೆ. ಆದರೆ ಕೊರೊನಾವೈರಸ್ ಪಿಡುಗಿನ ಹಿನ್ನೆಲೆ ಏಪ್ರಿಲ್ 1 ರಿಂದ 30ರವರೆಗೂ ಕುಂಭ ಮೇಳಕ್ಕೆ ಅನುಮತಿ ನೀಡಲಾಗಿತ್ತು. ಈ ಅವಧಿಯಲ್ಲಿ 34.76 ಲಕ್ಷ ಭಕ್ತಾಧಿಗಳು ಪುಣ್ಯಸ್ನಾನ ಮಾಡಿದ್ದಾರೆ. ಏಪ್ರಿಲ್ 12ರ ಸೋಮವತಿ ಅಮವಾಸ್ಯೆ ದಿನ 21 ಲಕ್ಷ ಜನರು, ಏಪ್ರಿಲ್ 14ರ ಮೇಷ ಸಂಕ್ರಾಂತಿ ದಿನ 13.51 ಲಕ್ಷ ಹಾಗೂ ಏಪ್ರಿಲ್ 27ರ ಚೈತ್ರ ಪೂರ್ಣಿಮೆ ದಿನ 25,104 ಭಕ್ತಾಧಿಗಳು ಪುಣ್ಯಸ್ನಾನ ಮಾಡಿದ್ದಾರೆ ಎಂದು ಐಜಿ ಸಂಜಯ್ ಗುಂಜ್ಯಾಲ್ ತಿಳಿಸಿದ್ದಾರೆ.

ದೇಶದಲ್ಲಿ ಕೊವಿಡ್-19 ಪರೀಕ್ಷೆಯ ಸಂಖ್ಯೆ

ದೇಶದಲ್ಲಿ ಕೊವಿಡ್-19 ಪರೀಕ್ಷೆಯ ಸಂಖ್ಯೆ

ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆ ನಡುವೆ ಪ್ರತಿನಿತ್ಯ 20 ಲಕ್ಷಕ್ಕೂ ಅಧಿಕ ಜನರಿಗೆ ಪರೀಕ್ಷೆ ನಡೆಸಲಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 20,63,839 ಜನರ ಮಾದರಿಯನ್ನು ತಪಾಸಣೆಗೊಳಪಡಿಸಲಾಗಿದೆ. ದೇಶದಲ್ಲಿ ಈವರೆಗೂ 34,31,83,748 ಜನರಿಗೆ ಕೊವಿಡ್-19 ಸೋಂಕಿನ ತಪಾಸಣೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಮಾಹಿತಿ ನೀಡಿದೆ.

ಭಾರತದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳು

ಭಾರತದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳು

ದೇಶದಲ್ಲಿ 24 ಗಂಟೆಗಳಲ್ಲಿ 1,65,553 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 2,76,309 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಂದೇ ದಿನ ಕೊರೊನಾವೈರಸ್ ಮಹಾಮಾರಿಗೆ 3,460 ಮಂದಿ ಪ್ರಾಣ ಬಿಟ್ಟಿದ್ದಾರೆ. ಭಾರತದಲ್ಲಿ ಒಟ್ಟು 2,78,94,800 ಕೊರೊನಾ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಇದುವರೆಗೂ 2,54,54,320 ಸೋಂಕಿತರು ಗುಣಮುಖರಾಗಿದ್ದು, ಮಹಾಮಾರಿಯಿಂದ ಒಟ್ಟು 3,25,972 ಜನರು ಪ್ರಾಣ ಬಿಟ್ಟಿದ್ದಾರೆ. ಇದರ ಹೊರತಾಗಿ 21,14,508 ಕೊರೊನಾವೈರಸ್ ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+