ಕೇದಾರನಾಥದ ಗರ್ಭಗುಡಿ ಪ್ರವೇಶಿಸಲು ಯಾತ್ರಾರ್ಥಿಗಳಿಗೆ ತಾತ್ಕಾಲಿಕ ನಿಷೇಧ
ನವದೆಹಲಿ, ಸೆಪ್ಟೆಂಬರ್ 20: ಮಳೆಗಾಲದಲ್ಲಿ ಪಾದಯಾತ್ರೆಯಲ್ಲಿ ಸುಮಾರು ಎರಡು ತಿಂಗಳು ತಡವಾದ ಹಿನ್ನೆಲೆ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿ ತೀವ್ರ ಏರಿಕೆ ಕಂಡು ಬಂದಿದೆ. ಈ ಹಿನ್ನೆಲೆ ಯಾತ್ರಿಕರ ನೂಕುನುಗ್ಗಲು ಹೆಚ್ಚಾಗಿದ್ದು, ಕೇದಾರನಾಥದ ಗರ್ಭಗುಡಿಗೆ ಯಾತ್ರಾರ್ಥಿಗಳ ಪ್ರವೇಶವನ್ನು ಸದ್ಯಕ್ಕೆ ನಿಷೇಧಿಸಲಾಗಿದೆ.
''ದೇಗುಲದ ಗರ್ಭಗುಡಿಯೊಳಗೆ ಸೀಮಿತ ಸ್ಥಳಾವಕಾಶವಿದ್ದು, ನೂಕುನುಗ್ಗಲು ಹೆಚ್ಚಿರುವ ಕಾರಣ ಸದ್ಯಕ್ಕೆ ಭಕ್ತಾದಿಗಳ ಪ್ರವೇಶಕ್ಕೆ ನಿಷೇಧ ಹೇರಿದ್ದೇವೆ. ನಿಷೇಧಾಜ್ಞೆ ಜಾರಿಯಲ್ಲಿರುವವರೆಗೆ ಭಕ್ತರು ಆಚೆ ಬರುವಂತಿಲ್ಲ. ದರ್ಶನಕ್ಕಾಗಿ ಸಭಾ ಮಂಟಪವಿದೆ," ಎಂದು ಬಿಕೆಟಿಸಿ ಅಧ್ಯಕ್ಷ ಅಜೇಂದ್ರ ಅಜಯ್ ಪಿಟಿಐಗೆ ತಿಳಿಸಿದ್ದಾರೆ.
ಭಾರೀ ಜನಸಂದಣಿಯಿಂದಾಗಿ ಗರ್ಭಗುಡಿಯ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಶ್ರೀ ಬದರಿನಾಥ್-ಕೇದಾರನಾಥ ದೇವಾಲಯ ಸಮಿತಿ ಅಧ್ಯಕ್ಷ ಅಜೇಂದ್ರ ಅಜಯ್ ಎಎನ್‌ಐಗೆ ತಿಳಿಸಿದ್ದಾರೆ.

ಕೇದಾರನಾಥ ಧಾಮಕ್ಕೆ 11 ಲಕ್ಷ ಭಕ್ತರು:
ಅಕ್ಟೋಬರ್ 15 ರವರೆಗೆ ಜನಸಂದಣಿ ಇರಬಹುದೆಂದು ನಿರೀಕ್ಷಿಸಲಾಗಿದೆ. ನಂತರ ಅದನ್ನು ಮರುಪರಿಶೀಲಿಸಲಾಗುವುದು ಎಂದು ಬದರಿನಾಥ್-ಕೇದಾರನಾಥ ದೇವಾಲಯ ಸಮಿತಿ ಅಧ್ಯಕ್ಷ ಅಜೇಂದ್ರ ಅಜಯ್ ಹೇಳಿದರು. ವರದಿಗಳ ಪ್ರಕಾರ, ಹನ್ನೊಂದು ಲಕ್ಷ ಯಾತ್ರಿಕರು ಕೇದಾರನಾಥ ಧಾಮವನ್ನು ತಲುಪಿದ್ದಾರೆ.
ಉತ್ತರಾಖಂಡದ ಏಳು ಜಿಲ್ಲೆಗಳಲ್ಲಿ ಮಳೆ:
ಉತ್ತರಾಖಂಡದ ಏಳು ಜಿಲ್ಲೆಗಳಲ್ಲಿ ಸೋಮವಾರ ರಾತ್ರಿಯಿಂದ ಅಧಿಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪ್ರತ್ಯೇಕ ಸ್ಥಳಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರ ಅಲರ್ಟ್ ಮೋಡ್ ನಲ್ಲಿದೆ. ಎಲ್ಲಾ ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆ ವಹಿಸುವಂತೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸೂಚನೆ ನೀಡಿದ್ದಾರೆ. ಇದರೊಂದಿಗೆ ಜಿಲ್ಲೆಗಳಲ್ಲಿ ಸ್ಥಾಪಿಸಲಾಗಿರುವ ಕಂಟ್ರೋಲ್ ರೂಂಗಳು ಕೂಡ ಸಕ್ರಿಯವಾಗಿರುವಂತೆ ತಿಳಿಸಲಾಗಿದೆ.












Click it and Unblock the Notifications