Postpone JEE Main 2022 ಟ್ರೆಂಡಿಂಗ್ ಆಗಲು ಕಾರಣವೇನು?
ನವದೆಹಲಿ, ಏಪ್ರಿಲ್ 6: ಜೆಇಇ ಮುಖ್ಯ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಿರಿ ಎನ್ನುವ ವಿಷಯವು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೆಂಡಿಂಗ್ ಆಗುತ್ತಿದೆ. ಏಕೆಂದರೆ 2022ರ ಜೆಇಇ ಮುಖ್ಯ ಪರೀಕ್ಷೆಗಳು ಇದೇ ತಿಂಗಳಿನಲ್ಲಿ ನಡೆಯಲಿರುವ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಯ ವೇಳಾಪಟ್ಟಿಯೊಂದಿಗೆ ಘರ್ಷಣೆ ಆಗುತ್ತದೆ. ಈ ಹಿನ್ನೆಲೆ ಸಿಬಿಎಸ್ಇ 12ನೇ ತರಗತಿ ಎರಡನೇ ಅವಧಿಯ ಪರೀಕ್ಷೆಗಳಿಗೆ ಸಮಸ್ಯೆ ಆಗಲಿದೆ.
ಏಪ್ರಿಲ್ 26 ರಿಂದ ಜೂನ್ 15 ರವರೆಗೆ CBSE ಪರೀಕ್ಷೆಗಳು ನಡೆಯಲಿದೆ. ಇದರ ಮಧ್ಯೆ ರಾಷ್ಟ್ರೀಯ ಪರೀಕ್ಷಾ ಮಂಡಳಿಯು 2022ನೇ ಸಾಲಿನ JEE ಮುಖ್ಯ ಪರೀಕ್ಷೆಯನ್ನು ಏಪ್ರಿಲ್ 21 ರಿಂದ ಮೇ 4 ರವರೆಗೆ ನಡೆಸಲು ನಿರ್ಧರಿಸಿದೆ.
ಎಂಜಿನಿಯರಿಂಗ್ ಮತ್ತು ಜೆಇಇ ಮುಖ್ಯ ಪರೀಕ್ಷೆಯ ದಿನಾಂಕಗಳ ನಡುವೆ ಘರ್ಷಣೆ ಆಗಲಿರುವ ಹಿನ್ನೆಲೆ ಆಕಾಂಕ್ಷಿಗಳು ಜೆಇಇ ಪರೀಕ್ಷೆಗಳನ್ನು ಮುಂದೂಡುವಂತೆ ಒತ್ತಾಯಿಸುತ್ತಿದ್ದಾರೆ. ಈ ಸಂಬಂಧ ಶಿಕ್ಷಣ ಸಚಿವಾಲಯ ಮತ್ತು ರಾಷ್ಟ್ರೀಯ ಪರೀಕ್ಷೆ ಮಂಡಳಿಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಸಾಮಾಜಿಕ ಜಾಲತಾಣದಲ್ಲಿ PostponeJEEMain2022 ಎಂಬುದು ಸಖತ್ ಟ್ರೆಂಡಿಂಗ್ ಆಗುತ್ತಿದೆ.

ಜೆಇಇ ಮುಖ್ಯ ಪರೀಕ್ಷೆ ಮುಂದೂಡುವಿಕೆಗೆ ಟ್ವೀಟ್:
"ದಯವಿಟ್ಟು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಪರೀಕ್ಷೆಗಳನ್ನು ಸ್ವಲ್ಪ ಮುಂದೂಡುವುದರಿಂದ ಹೆಚ್ಚಿನ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುವುದಿಲ್ಲ. ಆದರೆ ಇದೀಗ ವಿದ್ಯಾರ್ಥಿಗಳು ತಲೆ ಕೆಡಿಸಿಕೊಳ್ಳುವಂತಾಗಿದೆ," ಎಂದು ಟ್ವೀಟ್ ಮಾಡಲಾಗುತ್ತಿದೆ.
ಭಾರತೀಯ ಅಧಿಕಾರಿಗಳು ನಮಗೆ ಸಾಧ್ಯವಿರುವ ಅತ್ಯಂತ ಕಷ್ಟಕರ ಸಂದರ್ಭಗಳಲ್ಲಿ #JEEMains ನಂತಹ ಪ್ರವೇಶ ಪರೀಕ್ಷೆಗಳನ್ನು ನೀಡುತ್ತಿದ್ದಾರೆ. ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಏಕೆ ಹೋಗುತ್ತಿದ್ದಾರೆ ಎಂದು ಕೇಳುತ್ತಾರೆ. ನಮ್ಮ ಬೇಡಿಕೆಗಳು ಪ್ರಾಯೋಗಿಕವಾಗಿದ್ದು, ಅದಕ್ಕೆ ಜೆಇಇ ಮುಖ್ಯ ಪರೀಕ್ಷೆಗಳನ್ನು ಮುಂದೂಡುವುದೊಂದೇ ಏಕೈಕ ಮಾರ್ಗವಾಗಿದೆ ಎಂದರು.












Click it and Unblock the Notifications