ವಾಣಿವಿಲಾಸ ಆಸ್ಪತ್ರೆಯಲ್ಲಿ ಸಿದ್ದರಾಮಯ್ಯ 'ಪಂಚೆ' ರಹಸ್ಯ ಬಹಿರಂಗ

Posted By:
Subscribe to Oneindia Kannada
   Siddaramaiah Reveled His Dothi Secret | Oneindia Kannada

   ಬೆಂಗಳೂರು, ಸೆ 16: ಮುಖ್ಯಮಂತ್ರಿ ಸಿದ್ದರಾಮಯ್ಯ 'ಎಲ್ಲಾ ಸಂದರ್ಭ'ಗಳಲ್ಲಿ ಪಂಚೆ ಉಟ್ಟುಕೊಳ್ಳಲು ಕಾರಣ ಏನು? ಈ ವಿಷಯವನ್ನು ಖುದ್ದು ಮುಖ್ಯಮಂತ್ರಿಗಳೇ ಬಹಿರಂಗ ಪಡಿಸಿದ್ದಾರೆ.

   ನಗರದ ವಾಣಿವಿಲಾಸ ಆಸ್ಪತ್ರೆಯ ಕಾರ್ಯಕ್ರಮವೊಂದರಲ್ಲಿ ಶುಕ್ರವಾರ (ಸೆ 15) ಭಾಗವಹಿಸಿ ಮಾತನಾಡುತ್ತಿದ್ದ ಸಿದ್ದರಾಮಯ್ಯ, ಹಿಂದೆ ನಾನು ಕೂಡಾ ಪ್ಯಾಂಟೇ ಹಾಕೋತಾ ಇದ್ದದ್ದು. ಆದರೆ ಚರ್ಮರೋಗದ ತೊಂದರೆ ಕಾಣಿಸಿಕೊಂಡ ನಂತರ ವೈದ್ಯರ ಸಲಹೆಯಂತೆ ಪಂಚೆ ಉಟ್ಟುಕೊಳ್ಳಲಾರಂಭಿಸಿದೆ ಎಂದು ಸ್ವಾರಸ್ಯಕರವಾಗಿ ವಿವರಿಸಿದ್ದಾರೆ.

   1994ರಲ್ಲಿ ಚರ್ಮರೋಗ ಸಮಸ್ಯೆ ಕಾಣಿಸಿಕೊಂಡಾಗ ವೈದ್ಯರೊಬ್ಬರ ಬಳಿಗೆ ಹೋಗಿದ್ದೆ. ಆಯಪ್ಪಾ.. ಸಿಕ್ಕ ಸಿಕ್ಕ ಆಂಯಿಟ್ಮೆಂಟ್ ಎಲ್ಲಾ..ಬರೆದುಕೊಟ್ಟ. ಆಯಿಟ್ಮೆಂಟ್ ಹಚ್ಚಿಕೊಂಡಿದ್ದೇ ಬಂತು..ಸಮಸ್ಯೆಗೆ ಪರಿಹಾರ ಸಿಗ್ತಾ ಇರಲಿಲ್ಲ. ಕೊನೆಗೆ ಇನ್ನೊಬ್ಬ ವೈದ್ಯರ ಬಳಿಗೆ ಹೋದೆ.

   ಇದೆಲ್ಲಾ ಆಯಿಂಟ್ಮೆಂಟ್ ಬಿಟ್ಬಿಡಿ.. ಪ್ಯಾಂಟ್ ಬಿಟ್ಟು ಪಂಚೆ ಉಟ್ಕೊಳ್ಳಿ ಸಾರ್.. ಗಾಳೀನೂ ಓಡಾಡುತ್ತೆ, ನಿಮ್ಮ ಸಮಸ್ಯೆಗೂ ಪರಿಹಾರ ಸಿಗುತ್ತೆ ಅಂತಾ ಸಲಹೆ ನೀಡಿದರು. ಅಂದಿನಿಂದ ನೋಡಿ.. ನಾನು ಪಂಚೆ ಉಟ್ಕೊಳ್ಳಕ್ಕೆ ಆರಂಭಿಸಿದ್ದು ಎಂದು ಸಿದ್ದರಾಮಯ್ಯ ತನ್ನ ಪಂಚೆ ವಸ್ತ್ರಾಧಾರಣೆಯ ಕಥೆಯನ್ನು ಬಹಿರಂಗ ಪಡಿಸಿದರು.

   ವಿಕ್ಟೋರಿಯಾ/ವಾಣಿವಿಲಾಸ ಆಸ್ಪತ್ರೆಯಾ ಆವರಣದಲ್ಲಿ ನೆಪ್ರೋ ಯುರಾಲಜಿ ಸಂಸ್ಥೆಯ ನೂತನ ಕಟ್ಟಡ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಾ ಸಿಎಂ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿದಾರರಿಗೆ ಕಡಿಮೆ ದರದಲ್ಲಿ ವೈದ್ಯಕೀಯ ಸೌಲಭ್ಯ ಸಿಗುವಂತೆ ಮಾಡಲಾಗುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು. ಸಿದ್ದರಾಮಯ್ಯ ಹೊರತು ಪಡಿಸಿ ಪಂಚೆಯನ್ನೇ ಧರಿಸುವ ದಕ್ಷಿಣಭಾರತದ ಪ್ರಮುಖ ರಾಜಕಾರಣಿಗಳು, ಮುಂದೆ ಓದಿ..

   ನಾನ್ಯಾಕೆ ಪಂಚೆ ಉಟ್ಟು ಕೊಳ್ಳಲು ಶುರು ಮಾಡಿದೆ, ಸಿದ್ದು ವ್ಯಾಖ್ಯಾನ

   ನಾನ್ಯಾಕೆ ಪಂಚೆ ಉಟ್ಟು ಕೊಳ್ಳಲು ಶುರು ಮಾಡಿದೆ, ಸಿದ್ದು ವ್ಯಾಖ್ಯಾನ

   ನಾನ್ಯಾಕೆ ಪಂಚೆ ಉಟ್ಟು ಕೊಳ್ಳಲು ಶುರು ಮಾಡಿದೆ ಎನ್ನುವುದರ ಬಗ್ಗೆ ಅರಿವಿಲ್ಲದ ಸ್ವಪಕ್ಷೀಯರು, ವಿರೋಧಿಗಳು ಏನೇನೋ ಕಥೆಕಟ್ಟೋಕೆ ಶುರು ಮಾಡಿದರು. ನಾನು ಇನ್ನೊಬ್ರ ಸ್ಟೈಲ್ ಅನ್ನು ಫಾಲೋ ಮಾಡ್ತಾ ಇದ್ದೀನಿ ಅಂತಾ.. ನನ್ನ ಸಮಸ್ಯೆ ನನಗೆ ಎಂದು ಎಂದಿನ 'ಖದರ್' ನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

   ದೇವೇಗೌಡ ಮತ್ತು ರೇವಣ್ಣ

   ದೇವೇಗೌಡ ಮತ್ತು ರೇವಣ್ಣ

   ಮಣ್ಣಿನಮಗ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಪಂಚೆ ಉಟ್ಟುಕೊಳ್ಳುವ ರಾಜಕಾರಣಿಗಳ ಪೈಕಿ ಮಂಚೂಣಿಯಲ್ಲಿ ಬರುವ ಹೆಸರು. ಇವರು ಇವರ ಪುತ್ರ ಎಚ್ ಡಿ ರೇವಣ್ಣ ಕೂಡಾ ಇತ್ತೀಚಿನ ದಿನಗಳಲ್ಲಿ ಪಂಚೆ ಉಟ್ಟುಕೊಳ್ಳುವುದೇ ಜಾಸ್ತಿ.

   ವೆಂಕಯ್ಯ ನಾಯ್ಡು ಕೂಡಾ ಪಂಚೆ ಪ್ರಿಯರು

   ವೆಂಕಯ್ಯ ನಾಯ್ಡು ಕೂಡಾ ಪಂಚೆ ಪ್ರಿಯರು

   ಮಾಜಿ ಕೇಂದ್ರ ಬಿಜೆಪಿ ಸಚಿವ ಮತ್ತು ಇತ್ತೀಚೆಗಷ್ಟೇ ಉಪರಾಷ್ಟ್ರಪತಿ ಹುದ್ದೆ ಅಲಂಕರಿಸಿರುವ ವೆಂಕಯ್ಯ ನಾಯ್ಡು ಕೂಡಾ ಪಂಚೆ ಪ್ರಿಯರು. ಎಲ್ಲಾ ಸಭೆ, ಸಮಾರಂಭಗಳಲ್ಲಿ ವೆಂಕಯ್ಯ ನಾಯ್ಡು ಪಂಚೆಯಲ್ಲೇ ಕಾಣಿಸಿಕೊಳ್ಳುತ್ತಾರೆ.

   ಪಂಚೆಯಲ್ಲೇ ಬಜೆಟ್ ಮಂಡಣೆ ಮಾಡುವ ಚಿದಂಬರಂ

   ಪಂಚೆಯಲ್ಲೇ ಬಜೆಟ್ ಮಂಡಣೆ ಮಾಡುವ ಚಿದಂಬರಂ

   ಮಾಜಿ ಕೇಂದ್ರ ಹಣಕಾಸು ಸಚಿವ ಪಿ ಚಿದಂಬರಂ ಕೂಡಾ ಪಂಚೆಯನ್ನೇ ಧರಿಸುವುದು. ಇಡೀ ದೇಶವೇ ಕುತೂಹಲದಿಂದ ವೀಕ್ಷಿಸುವ ಬಜೆಟ್ ವೇಳೆಯೂ ಚಿದಂಬರಂ ಪಂಚೆಯಲ್ಲೇ ಬಜೆಟ್ ಮಂಡಣೆ ಮಾಡುತ್ತಾರೆ.

   ಎಂ ಕರುಣಾನಿಧಿ ಕುಟುಂಬ

   ಎಂ ಕರುಣಾನಿಧಿ ಕುಟುಂಬ

   ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಮತ್ತು ಡಿಎಂಕೆ ವರಿಷ್ಠ ಎಂ ಕರುಣಾನಿಧಿ ಮತ್ತು ಅವರ ಪುತ್ರರಾದ ಅಳಗಿರಿ ಮತ್ತು ಸ್ಟ್ಯಾಲಿನ್ ಕೂಡಾ ಬಹುತೇಕ ಪಂಚೆಯನ್ನೇ ಧರಿಸುತ್ತಾರೆ.

   ಹಿರಿಯ ಕಾಂಗ್ರೆಸ್ ಮುಖಂಡ ಎ ಕೆ ಆಂಟನಿ

   ಹಿರಿಯ ಕಾಂಗ್ರೆಸ್ ಮುಖಂಡ ಎ ಕೆ ಆಂಟನಿ

   ಮಾಜಿ ರಕ್ಷಣಾ ಸಚಿವ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಎ ಕೆ ಆಂಟನಿ ಪಂಚೆ ಧರಿಸುವ ರಾಜಕಾರಣಿಗಳ ಸಾಲಿನಲ್ಲಿ ಬರುವ ಪ್ರಮುಖರು.

   ತಮಿಳುನಾಡು ಮತ್ತು ಕೇರಳದಲ್ಲಿ ಪಂಚೆ ಸಂಸ್ಕೃತಿ ಜಾಸ್ತಿ

   ತಮಿಳುನಾಡು ಮತ್ತು ಕೇರಳದಲ್ಲಿ ಪಂಚೆ ಸಂಸ್ಕೃತಿ ಜಾಸ್ತಿ

   ತಮಿಳುನಾಡು ಮತ್ತು ಕೇರಳದಲ್ಲಿ ಪಂಚೆ ಸಂಸ್ಕೃತಿ ಜಾಸ್ತಿ. ಕೇರಳದ ಹಾಲಿ ಸಿಎಂ ಪಿಣರಾಯಿ ವಿಜಯನ್ ಮತ್ತು ಮಾಜಿ ಮುಖ್ಯಮಂತ್ರಿ ಅಚ್ಯುತಾನಂದನ್ ಕೂಡಾ ಪಂಚೆ ಧರಿಸುವ ದಕ್ಷಿಣಭಾರತದ ರಾಜಕಾರಣಿಗಳಲ್ಲಿ ಪ್ರಮುಖರು.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Why I started wearing Panche, Karnataka CM Siddaramaiah explanation and some of the leaders of South India who always prefer to wear Panche.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ