• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಧ್ರಪ್ರದೇಶದಲ್ಲಿ ಕತ್ತೆ ಮಾಂಸ ಏಕೆ ತಿನ್ನುತ್ತಾರೆ? ಪ್ರತಿ ಕೆಜಿಗೆ ಬೆಲೆ ಎಷ್ಟು? ಶಿಕ್ಷೆಯ ವಿವರಗಳು

|
Google Oneindia Kannada News

ಆಂಧ್ರಪ್ರದೇಶ ಪೊಲೀಸರು ಬಾಪಟ್ಲಾ ಜಿಲ್ಲೆಯಲ್ಲಿ 400 ಕೆಜಿಗೂ ಅಧಿಕ ಕತ್ತೆ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ಹತ್ಯೆಯಾದ ಕತ್ತೆಗಳ ತಲೆ, ಕಾಲುಗಳು ಮತ್ತು ಬಾಲಗಳು ಸೇರಿದಂತೆ ದೇಹದ ಭಾಗಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ (ಪಿಸಿಎ) ಕಾಯಿದೆ, 1960 ರ ಅಡಿಯಲ್ಲಿ ಅವರು 7 ಜನರನ್ನು ಬಂಧಿಸಿದ್ದಾರೆ.

ಕತ್ತೆಗಳು ಸಾಮಾಜಿಕವಾಗಿ ಅತ್ಯಂತ ಸೂಕ್ಷ್ಮ ಪ್ರಾಣಿಗಳು. ಆದರೆ ಆಂಧ್ರಪ್ರದೇಶದಲ್ಲಿ ಅವುಗಳನ್ನು ಮಾಂಸಕ್ಕಾಗಿ ಅವುಗಳನ್ನು ಸಾಯಿಸಲಾಗುತ್ತಿದೆ ಎಂದು ಪೇಟಾ ಇಂಡಿಯಾದ ಮೀಟ್ ಅಶರ್ ಹೇಳಿದ್ದಾರೆ. ಅಕ್ರಮ ಕತ್ತೆ ಹತ್ಯೆ ತಡೆಯುವಂತೆ ಜನಸಾಮಾನ್ಯರು ಮನವಿ ಮಾಡಿದ್ದಾರೆ.

ಚೀನಾಗೆ ಕತ್ತೆ, ನಾಯಿ ಮಾರಿ ಹಣ ಗಳಿಸಲಿರುವ ಪಾಕಿಸ್ತಾನ ಚೀನಾಗೆ ಕತ್ತೆ, ನಾಯಿ ಮಾರಿ ಹಣ ಗಳಿಸಲಿರುವ ಪಾಕಿಸ್ತಾನ

ಭಾರತದಲ್ಲಿ ಕತ್ತೆ ಹತ್ಯೆ ಮತ್ತು ಮಾಂಸ ವ್ಯಾಪಾರ ಕಾನೂನು ಬಾಹಿರವಾಗಿದೆ. ಈ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ. ಕತ್ತೆಗಳ ಹತ್ಯೆಯು ಐಪಿಸಿಯ ಸೆಕ್ಷನ್ 429 ಅನ್ನು ಉಲ್ಲಂಘಿಸುತ್ತದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ, 2006 ರ ಅಡಿಯಲ್ಲಿ ಕತ್ತೆ ಮಾಂಸವನ್ನು ಸೇವಿಸುವುದು ಶಿಕ್ಷಾರ್ಹವಾಗಿದೆ.

ಪ್ರತಿ ಕೆಜಿಗೆ ಬೆಲೆ ಎಷ್ಟು?

ಪ್ರತಿ ಕೆಜಿಗೆ ಬೆಲೆ ಎಷ್ಟು?

ವರದಿಗಳ ಪ್ರಕಾರ, ಆಂಧ್ರಪ್ರದೇಶದ ಕೃಷ್ಣಾ, ಪಶ್ಚಿಮ ಗೋದಾವರಿ ಮತ್ತು ಗುಂಟೂರು ಜಿಲ್ಲೆಗಳಲ್ಲಿ ಪ್ರಕಾಶಂ ಹಬ್ಬದ ಪ್ರಯುಕ್ತ ಕತ್ತೆಗಳನ್ನು ತಿನ್ನಲಾಗುತ್ತದೆ. ಕತ್ತೆ ಮಾಂಸವನ್ನು ತಿನ್ನುವುದರಿಂದ ಬೆನ್ನು ನೋವು ಮತ್ತು ಅಸ್ತಮಾ ವಾಸಿಯಾಗುತ್ತದೆ ಎಂದು ನಂಬಲಾಗುತ್ತದೆ. ಕತ್ತೆ ಮಾಂಸವು ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಹಲವರು ನಂಬುತ್ತಾರೆ. ಕತ್ತೆ ಮಾಂಸ ಕೆಜಿಗೆ 600 ರೂಪಾಯಿಯಂತೆ ಮಾರಾಟ ಮಾಡಲಾಗುತ್ತದೆ.

ಕತ್ತೆ ಮಾಂಸ ಸೇವಿಸಿದರೆ ಬೆನ್ನು ನೋವು, ಅಸ್ತಮಾ ನಿವಾರಣೆಯಾಗುತ್ತದೆ, ಜೊತೆಗೆ ಲೈಂಗಿಕ ನಿರಾಸಕ್ತಿ ಸಮಸ್ಯೆ ನಿವಾರಣೆಗೂ ಕತ್ತೆ ಮಾಂಸ ಪರಿಣಾಮಕಾರಿ ಮದ್ದು ಎಂದು ಸ್ಥಳೀಯರು ನಂಬಿದ್ದು, ಈ ಕಾರಣಕ್ಕೆ ಕತ್ತೆ ಮಾಂಸಕ್ಕೆ ಭಾರೀ ಬೇಡಿಕೆ ಬಂದಿದೆಯಂತೆ. ಇದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಗಳು ಇಲ್ಲವಾದರೂ ಕತ್ತೆ ಮಾಂಸವನ್ನು ಕದ್ದುಮುಚ್ಚಿ ಮಾರಾಟ ಮಾಡುವುದು, ಕೊಳ್ಳುವುದು ನಡೆಯುತ್ತಲೇ ಇದೆಯಂತೆ.

ಆಂಧ್ರದಲ್ಲಿ ಕಡಿಮೆಯಾದ ಕತ್ತೆಗಳ ಸಂಖ್ಯೆ

ಆಂಧ್ರದಲ್ಲಿ ಕಡಿಮೆಯಾದ ಕತ್ತೆಗಳ ಸಂಖ್ಯೆ

ವರದಿ ಪ್ರಕಾರ ಆಂಧ್ರದ ಪ್ರಕಾಶಂ, ಕೃಷ್ಣ, ಪಶ್ಚಿಮ ಗೋದಾವರಿ, ಗುಂಟೂರು ಜಿಲ್ಲೆಗಳಲ್ಲಿ ಕತ್ತೆ ಮಾಂಸ ಮಾರಾಟ ಹಾಗೂ ಸೇವನೆ ಹೆಚ್ಚಾಗಿದೆಯಂತೆ. ಕತ್ತೆ ಮಾಂಸ ಸೇವನೆ ಹೆಚ್ಚಾಗುತ್ತಿದ್ದಂತೆ ರಾಜ್ಯದಲ್ಲಿ ಕತ್ತೆಗಳ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗಿದೆ. ಕತ್ತೆಗಳ ಅಕ್ರಮ ವಧೆಯನ್ನು ಇಲ್ಲಿನ ಪ್ರಾಣಿ ದಯಾ ಸಂಘ ಕಾರ್ಯಕರ್ತರು ವಿರೋಧಿಸಿದ್ದು, ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ದಂಧೆ ಇನ್ನಷ್ಟು ಹೆಚ್ಚಾಗುವ ಮುನ್ನ ಮಟ್ಟ ಹಾಕಬೇಕು ಎಂದು ಸರ್ಕಾರಕ್ಕೆ ಕೇಳಿಕೊಂಡಿದ್ದಾರೆ.

ರಾಜ್ಯದ ಇತರೆ ಕಡೆಗಳಲ್ಲೂ ಕತ್ತೆ ಮಾರಾಟ

ರಾಜ್ಯದ ಇತರೆ ಕಡೆಗಳಲ್ಲೂ ಕತ್ತೆ ಮಾರಾಟ

ಕರ್ನಾಟಕ, ತಮಿಳುನಾಡು ಹಾಗೂ ಮಹಾರಾಷ್ಟ್ರದಿಂದ ಆಂಧ್ರಕ್ಕೆ ಕತ್ತೆಗಳನ್ನು ತರಿಸಿಕೊಂಡು ಇಲ್ಲಿ ಮಾಂಸ ಮಾರಾಟ ಮಾಡಲಾಗುತ್ತಿದೆ ಎಂದು ಪ್ರಾಣಿ ದಯಾ ಸಂಘದ ಕಾರ್ಯಕರ್ತರು ದೂರಿದ್ದಾರೆ. ಪ್ರಕಾಶಂ ಜಿಲ್ಲೆಯಲ್ಲಿ ಮೊದಲು ಕತ್ತೆ ಮಾಂಸ ದಂಧೆ ಆರಂಭಗೊಂಡು, ನಂತರ ಕೃಷ್ಣ, ಪಶ್ಚಿಮ ಗೋದಾವರಿ, ಗುಂಟೂರಿಗೆ ಹರಡಿದೆ. ಹೀಗೇ ಬಿಟ್ಟರೆ ರಾಜ್ಯದ ಇತರೆ ಕಡೆಗಳಲ್ಲೂ ಮುಂದುವರೆಯುತ್ತದೆ ಎಂದು ಆರೋಪಿಸಿದ್ದಾರೆ.

ಕತ್ತೆ ಹಾಲು ಪ್ರತಿ ಲೀಟರ್ಗೆ 10 ಸಾವಿರ

ಕತ್ತೆ ಹಾಲು ಪ್ರತಿ ಲೀಟರ್ಗೆ 10 ಸಾವಿರ

ಮಾಧ್ಯಮಗಳ ವರದಿ ಪ್ರಕಾರ ಮಹಾರಾಷ್ಟ್ರದ ಹಿಂಗೋಲಿಯಲ್ಲಿ ಕತ್ತೆ ಹಾಲು ಹೆಚ್ಚು ಮಾರಾಟವಾಗುತ್ತಿದೆ. ಆರಂಭದಲ್ಲಿ ಇದರ ಬೆಲೆ ಕಡಿಮೆಯಿತ್ತು. ಆದರೆ ಹಾಲು ಮಾರಾಟಗಾರರು ಇದನ್ನು ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ಹೇಳಿಕೊಂಡಿದ್ದಾರೆ. ಇದರೊಂದಿಗೆ, ಕೊರೊನವೈರಸ್ ವಿರುದ್ಧದ ಹೋರಾಟದಲ್ಲಿ ಇದು ತುಂಬಾ ಪರಿಣಾಮಕಾರಿಯಾಗಿದೆ ಎಂದು ಮಾರಾಟಗಾರರು ಹೇಳಿಕೊಂಡಿದ್ದಾರೆ. ಇದಾದ ನಂತರ ಹೆಚ್ಚಿನ ಸಂಖ್ಯೆಯಲ್ಲಿ ಜನರು ಹಾಲು ಖರೀದಿಸಲು ಮುಗಿ ಬೀಳುತ್ತಿದ್ದಾರೆ. ಇದಲ್ಲದೇ ಪ್ರತಿ ಲೀಟರ್‌ಗೆ ಜನರಿಂದ 10 ಸಾವಿರ ರೂಪಾಯಿವರೆಗೆ ಹೆಚ್ಚು ಹಣ ವಸೂಲಿ ಮಾಡಲಾಗುತ್ತಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ.

English summary
Andhra Pradesh police seized more than 400 kg of donkey meat in Bapatla district and arrested 7 people
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X