ಸಾಲ ಮರುಪಾವತಿಗೆ ವಿಜಯ್ ಮಲ್ಯ ಬಗ್ಗಿದ್ದು ಹೇಗೆ?

ನವದೆಹಲಿ, ಮಾರ್ಚ್, 30: ಮದ್ಯದ ದೊರೆ ವಿಜಯ್ ಮಲ್ಯಗೆ ಸಾಲ ವಾಪಸ್ ನೀಡದೇ ಬೇರೆ ದಾರಿ ಇಲ್ಲ. ಅವರ ಮುಂದಿನ ಅವಕಾಶಗಳು ಒಂದೊಂದಾಗಿ ಕಡಿಮೆಯಾಗುತ್ತಾ ಬಂದಿದ್ದು ಅಂತಿಮವಾಗಿ ಸಾಲ ವಾಪಸ್ ನೀಡುತ್ತೇನೆ ಎಂಬ ಹೇಳಿಕೆಯನ್ನು ನೀಡಿಸಿದೆ. ಮಾಧ್ಯಮಗಳಲ್ಲಿ ಮಲ್ಯ ವಿರುದ್ಧ ಮಾತುಗಳು ಕೇಳಿ ಬರುತ್ತಿದ್ದಾಗ ಟ್ವೀಟ್ ಮಾಡುವ ಮೂಲಕವೇ ಉತ್ತರ ನೀಡುತ್ತಿದ್ದ ಮಲ್ಯ ನಾನೆಲ್ಲೂ ನಾಪತ್ತೆಯಾಗಿಲ್ಲ ಎಂದು ಪದೆ ಪದೆ ಹೇಳಿದ್ದರು.

9 ಸಾವಿರ ಕೋಟಿ ಸಾಲ ಮಾಡಿಕೊಂಡಿದ್ದರಲ್ಲಿ ಬರುವ ಸೆಪ್ಟೆಂಬರ್ ವೊಳಗೆ 4 ಸಾವಿರ ಕೋಟಿ ಮರುಪಾವತಿ ಮಾಡುತ್ತೇನೆ ಎಂದು ಹೇಳಿದ್ದಕ್ಕೆ ಕಾರಣವೇನು ಎಂಬುದನ್ನು ವಿಶ್ಲೇಷಣೆ ಮಾಡಬೇಕಾಗುತ್ತದೆ.[ಚಾನಲ್ ಸಂಪಾದಕನಿಗೆ ಜೈಲೂಟ ಗ್ಯಾರಂಟಿ - ಮಲ್ಯ]

ಜಾರಿ ನಿರ್ದೇಶನಾಲಯದ ನೋಟಿಸ್, ಹೈದರಾಬಾದ್ ಕೋರ್ಟ್ ನ ವಾರಂಟ್ ಅಂತಿಮವಾಗಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಎಚ್ಚರಿಕೆ ನೀಡಿದ ಮೇಲೆ ವಿಜಯ್ ಮಲ್ಯ ಇದೀಗ ಸಾಲ ಮರುಪಾವತಿ ಮಾಡುತ್ತೇನೆ ಎಂದು ವಕೀಲರ ಮೂಲಕ ತಿಳಿಸಿದ್ದಾರೆ.

17 ಬ್ಯಾಂಕ್ ಗಳ ಒಕ್ಕೂಟ

17 ಬ್ಯಾಂಕ್ ಗಳ ಒಕ್ಕೂಟ

ಎಸ್ ಬಿಸ್ ಬಿಐ, ಐಡಿಬಿಐ ಸೇರಿದಂತೆ 17 ಬ್ಯಾಂಕ್ ಗಳ ಒಕ್ಕೂಟ ಸಾಲ ಮರುಪಾವತಿ ಸಂಬಂಧ ಸುಪ್ರೀಂ ಕೋರ್ಟ್ ನ ಮೆಟ್ಟಿಲು ಎರಿತ್ತು. ಅರ್ಜಿಯ ವಿಚಾರಣೆ ಬುಧವಾರ ಸುಪ್ರೀಂನಲ್ಲಿ ಬರುವುದಿತ್ತು.

ಅರುಣ್ ಜೇಟ್ಲಿ ಎಚ್ಚರಿಕೆ

ಅರುಣ್ ಜೇಟ್ಲಿ ಎಚ್ಚರಿಕೆ

ವಿಪಕ್ಷಗಳ ಆರೋಪ ಮತ್ತಿತರ ಕ್ರಮಗಳಿಂದ ಮಲ್ಯ ಸಾಲ ಪ್ರಕರಣ ಕೇಂದ್ರ ಸರ್ಕಾರದ ಮೇಲೆಯೂ ಒತ್ತರ ತಂದಿತ್ತು. ಮರ್ಯಾದೆಯಿಂದ ಸಾಲ ಮರುಪಾವತಿ ಮಾಡಿ, ಇಲ್ಲವಾದರೆ ಕಠಿಣ ಕ್ರಮ ಎದುರಿಸಿ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಮಲ್ಯಗೆ ಎಚ್ಚರಿಕೆ ನೀಡಿದ್ದರು.

 ವಿಜಯ್ ಮಲ್ಯ ರಾಜೀನಾಮೆ ಪರ್ವ

ವಿಜಯ್ ಮಲ್ಯ ರಾಜೀನಾಮೆ ಪರ್ವ

ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ನಿರ್ದೇಶಕ ಹುದ್ದೆಗೆ ಮೊದಲು ರಾಜೀನಾಮೆ ನೀಡಿದ ಮಲ್ಯ ನಂತರ ಪ್ರಮುಖ ಔಷಧ ಸಂಸ್ಥೆ ಸನೋಫಿ ಇಂಡಿಯಾದ ಅಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ಸಲ್ಲಿಕೆ ಮಾಡಿದ್ದರು.

 ಸಾಲ ತೀರಿಕೆ ಸುಲಭವಲ್ಲ

ಸಾಲ ತೀರಿಕೆ ಸುಲಭವಲ್ಲ

ಮಲ್ಯ ಸದ್ಯಕ್ಕೆ ಯಾವ ಸಾಲವನ್ನು ತೀರಿಸುವ ಸ್ಥಿತಿಯನ್ನು ಇಟ್ಟುಕೊಂಡಿಲ್ಲ. ಅವರ ಮುಂಬೈ ಮನೆಯನ್ನು ಹರಾಜು ಹಾಕಲು ಬ್ಯಾಂಕ್ ಗಳು ಮುಂದಾದರೆ ಅದನ್ನು ಯಾರೂ ಖರೀದಿ ಮಾಡಿಲ್ಲ. ಇದೀಗ ಮೇ 12ಕ್ಕೆ ಮಲ್ಯರ ಐಷರಾಮಿ ವಿಮಾನ ಹರಾಜು ಮಾಡಲು ವೇದಿಕೆ ಸಿದ್ಧವಾಗಿದೆ.

 ಮುಂದೆನಾಗುತ್ತದೆ?

ಮುಂದೆನಾಗುತ್ತದೆ?

ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿ ಸಾಲ ಮರುಪಾವತಿ ಮಾಡುತ್ತೇನೆ ಎಂದು ಹೇಳುವ ಮೂಲಕ ಮಲ್ಯ ರತಾವು ಸದ್ಯ ಭಾರತಕ್ಕೆ ಆಗಮಿಸುವುದಿಲ್ಲ ಎಂಬ ಸೂಚನೆಯನ್ನು ನೀಡಿದ್ದಾರೆ. ಜಾರಿ ನಿರ್ದೇಶನಾಲಯ ನೋಟಿಸ್ ನೀಡಿದ್ದರೂ ಸಹ ಮಲ್ಯ ಖುದ್ದು ಹಾಜರಿ ಅನುಮಾನ. ವಿದೇಶದಲ್ಲೇ ಕುಳಿತು ಇಲ್ಲಿನ ಕಾನೂನು ಕ್ರಮಗಳನ್ನು ಮಲ್ಯ ನೋಡಿಕೊಳ್ಳುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+