57 ಮುಸ್ಲಿಂ ದೇಶಗಳು ಇದ್ದರೂ, ಬಾಂಗ್ಲಾದೇಶ ಪ್ರಧಾನಿ ಭಾರತದ ನೆಲವನ್ನೇ ಆಯ್ಕೆ ಮಾಡಿಕೊಂಡಿದ್ದು ಏಕೆ?
ಬಾಂಗ್ಲಾದೇಶ ಹೊತ್ತಿ ಉರಿಯುತ್ತಿದೆ, ಭಾರತದ ಪಕ್ಕದಲ್ಲೇ ಇರುವ ಬಾಂಗ್ಲಾ ಹಿಂಸಾಚಾರ & ಗಲಭೆ ಹಿನ್ನೆಲೆ ನರಳಿ ಹೋಗಿದೆ. ಇಂತಹ ಪರಿಸ್ಥಿತಿ ಎದುರಾದ ಸಮಯದಲ್ಲೇ ಬಾಂಗ್ಲಾ ಪ್ರಧಾನಿ ಓಡಿ ಬಂದಿದ್ದು ಮಾತ್ರ ಭಾರತಕ್ಕೆ. ಅಷ್ಟಕ್ಕೂ ಜಗತ್ತಿನಾದ್ಯಂತ 57 ಮುಸ್ಲಿಂ ದೇಶಗಳು ಇದ್ದರೂ, ಬಾಂಗ್ಲಾದೇಶದ ಪ್ರಧಾನಿ ಭಾರತದ ನೆಲವನ್ನೇ ಆಯ್ಕೆ ಮಾಡಿಕೊಂಡಿದ್ದು ಏಕೆ? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.
ಭಾರತ ಜಾಗತಿಕ ಮಟ್ಟದಲ್ಲಿ ಎಲ್ಲರಿಗೂ ಬೇಕಾದ ದೇಶವಾಗಿದೆ. ಅಮೆರಿಕ ಟು ಆಫ್ರಿಕಾ & ಅರಬ್ ಟು ಚೀನಾ. ಹೀಗೆ ಎಲ್ಲಾ ದೇಶಗಳೂ ಒಂದಲ್ಲ ಒಂದು ಕಾರಣಕ್ಕೆ ಭಾರತದ ಜತೆಗೆ ಉತ್ತಮ ಸಂಬಂಧ ಇಟ್ಟುಕೊಂಡಿವೆ. ಹೀಗಿದ್ದಾಗಲೇ ಬಾಂಗ್ಲಾದೇಶ ಪ್ರಧಾನಿ ಭಾರತಕ್ಕೆ ಓಡಿ ಬಂದು ಜೀವ ಉಳಿಸಿಕೊಂಡ ಸುದ್ದಿ ಮಾತ್ರ ಜಾಗತಿಕ ಮಟ್ಟದಲ್ಲಿ ದೊಡ್ಡ ಚರ್ಚೆಗೆ ವೇದಿಕೆ ಒದಗಿಸಿದೆ. ಹಾಗಾದ್ರೆ 57 ಮುಸ್ಲಿಂ ದೇಶಗಳು ಇದ್ದರೂ, ಬಾಂಗ್ಲಾ ಪ್ರಧಾನಿ ಭಾರತದ ನೆಲವನ್ನೇ ಆಯ್ಕೆ ಮಾಡಿಕೊಂಡಿದ್ದು ಏಕೆ? ಎಂಬ ಪ್ರಶ್ನೆಗೆ ಉತ್ತರ ಹುಡುಕೋಣ ಬನ್ನಿ.

ಭಾರತವೇ ಬೆಸ್ಟ್ & ಭಾರತವೇ ಸೇಫ್!
ಪ್ರಪಂಚದ ಯಾವುದೇ ಮೂಲೆಗೆ ಹೋದರೂ ಹಿಂಸೆ, ಹಿಂಸೆ, ಹಿಂಸೆ. ಹೀಗೆ ರಕ್ತಪಾತದಲ್ಲಿ ಮುಳುಗಿ ಹೋಗಿರುವ ಜಗತ್ತಿನಲ್ಲಿ ಭಾರತ ಶಾಂತಿಯ ಸಂದೇಶ ಸಾರುತ್ತಿದೆ. ಅದರಲ್ಲೂ ಈಗ ಮೀಸಲಾತಿ ವಿರುದ್ಧ ಕಿಚ್ಚು ಹೊತ್ತಿಕೊಂಡ ನಂತರ ಬಾಂಗ್ಲಾದೇಶ ಬಿಟ್ಟು ಓಡಿ ಬಂದಿರುವ ಮಾಜಿ ಪ್ರಧಾನಿ ಶೇಖ್ ಹಸೀನಾ, ಭಾರತದಲ್ಲಿ ಸುರಕ್ಷಿತವಾಗಿ ಇದ್ದಾರೆ. ಶೇಖ್ ಹಸೀನಾ ಹೀಗೆ ಭಾರತವನ್ನೇ ಆಯ್ಕೆ ಮಾಡಿಕೊಂಡಿದ್ದು ಯಾಕೆ ಅಂದ್ರೆ ಸುರಕ್ಷತೆಯ ದೃಷ್ಟಿಯಿಂದ.
ಬೇರೆ ಯಾವುದೇ ದೇಶಕ್ಕೆ ಹೋದರೂ ಅಲ್ಲಿ ಸಮಸ್ಯೆ ಗ್ಯಾರಂಟಿ ಎಂಬಂತಹ ಪರಿಸ್ಥಿತಿ ಇತ್ತು. ಈ ನಡುವೆ ಮುಸ್ಲಿಂ ದೇಶಗಳಲ್ಲೂ ಪರಿಸ್ಥಿತಿ ಸರಿ ಇರಲಿಲ್ಲ. ಹೀಗಾಗಿಯೇ ಶೇಖ್ ಹಸೀನಾ ಅವರು ಬಾಂಗ್ಲಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ, ತಕ್ಷಣ ಭಾರತಕ್ಕೆ ಓಡಿ ಬಂದರು ಎಂಬ ವಿಶ್ಲೇಷಣೆ ಕೇಳಿಬರುತ್ತಿದೆ.
ಸಂಪೂರ್ಣ ರಕ್ಷಣೆ ನೀಡಿರುವ ಭಾರತ
ರಷ್ಯಾ & ಉಕ್ರೇನ್, ಇಸ್ರೇಲ್ & ಪ್ಯಾಲೆಸ್ತೀನ್ ಹೀಗೆ ಜಾಗತಿಕವಾಗಿ ಹಲವು ಯುದ್ಧ ಆರಂಭ ಆಗಿವೆ. ಇದೇ ಸಮಯದಲ್ಲಿ ಬಾಂಗ್ಲಾದೇಶ ಆಂತರಿಕ ಯುದ್ಧಕ್ಕೆ ನಲುಗಿ ಹೋಗಿದೆ. ಭಾರತ ಮಾತ್ರ ತನ್ನ ನೆರೆಯ ದೇಶದ ಪ್ರಧಾನಿಯನ್ನು ರಕ್ಷಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ಭಾರತ ಜಾಗತಿಕವಾಗೂ ತನ್ನ ಶಕ್ತಿ ತೋರಿಸಿದೆ. ಅಲ್ಲದೆ ಪ್ರಜಾಪ್ರಭುತ್ವ ಉಳಿವಿಗೆ ಭಾರತ ಬದ್ಧ ಎಂಬ ಸಂದೇಶ ಭಾರತದಿಂದ ಸಾರಿದಂತೆ ಆಗಿದೆ. ಮುಂದೆ ಕೂಡ ಶೇಖ್ ಹಸೀನಾ ಅವರಿಗೆ ಇದೇ ರೀತಿ ಬೆಂಬಲ & ರಕ್ಷಣೆ ಸಿಗಲಿದ್ದು, ಭಾರತದಿಂದ ಅವರನ್ನ ನೇರವಾಗಿ ಲಂಡನ್‌ಗೆ ಕಳುಹಿಸುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ, ಶೇಖ್ ಹಸೀನಾ ಅವರು ಬ್ರಿಟನ್ ಪೌರತ್ವ ಪಡೆಯುವ ಪ್ರಯತ್ನ ಆರಂಭಿಸಿದ್ದಾರೆ.












Click it and Unblock the Notifications