Finger In Ice-Cream: ಐಸ್‌ಕ್ರೀಮ್‌ನಲ್ಲಿ ಸಿಕ್ಕ ಕೈ ಬೆರಳು ಯಾರದ್ದು ಎಂಬ ಪ್ರಶ್ನೆ ಸಿಕ್ತು ಉತ್ತರ...
ಮುಂಬೈ ಜೂನ್ 20: ಮುಂಬೈನ ವೈದ್ಯರೊಬ್ಬರು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಐಸ್‌ಕ್ರೀಂನಲ್ಲಿ ಕಂಡು ಬಂದ ಮಾನವನ ಕೈ ಬೆರಳು ಯಾರದ್ದು ಎಂದು ಪೊಲೀಸರು ಪತ್ತೆ ಮಾಡಿದ್ದಾರೆ.
ಕೆಲವು ದಿನಗಳ ಹಿಂದೆ ಮಲಾಡ್‌ನ ವೈದ್ಯರಿಗೆ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಐಸ್‌ಕ್ರೀಮ್‌ನಲ್ಲಿ ಮಾನವ ಬೆರಳು ಕಂಡುಬಂದಿತ್ತು. ಈ ಪ್ರಕರಣದ ನಂತರ, ಸಾಮಾಜಿಕ ಮಾಧ್ಯಮಗಳಲ್ಲಿ ಆಹಾರ ಪದಾರ್ಥಗಳು ಮತ್ತು ಅವುಗಳ ಶುದ್ಧತೆಯ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಈ ಸಮಯದಲ್ಲಿ ಮುಂಬೈ ಪೊಲೀಸರು ವೈದ್ಯರಿಗೆ ಸಿಕ್ಕ ಕೈಬೆರಳು ಯಾರದ್ದು ಎನ್ನುವ ಬಗ್ಗೆ ತನಿಖೆ ನಡೆಸುತ್ತಿರುವಾಗ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ.

ಈ ಘಟನೆ ಬೆಳಕಿಗೆ ಬಂದಾಗಿನಿಂದ ಇದು ಯಾರ ಕೈಬೆರಳು ಎಂಬ ಪ್ರಶ್ನೆ ಜನರಲ್ಲಿ ಮೂಡಿತ್ತು. ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಪೊಲೀಸರಿಗೂ ಸವಾಲಾಗಿತ್ತು. ಹೀಗಾಗಿ ಇದೀಗ ಈ ಪ್ರಕರಣದಲ್ಲಿ ಎದ್ದಿರುವ ದೊಡ್ಡ ಪ್ರಶ್ನೆಗೆ ಉತ್ತರವನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ.
ತನಿಖೆಯಲ್ಲಿ ಪೊಲೀಸರಿಗೆ ದೊಡ್ಡ ಸುಳಿವು ಸಿಕ್ಕಿದ್ದು, ಈ ಬೆರಳು ಐಸ್ ಕ್ರೀಮ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಉದ್ಯೋಗಿಯದ್ದಾಗಿರಬಹುದು ಎಂದು ಶಂಕಿಸಲಾಗಿದೆ. ಹೌದು.. ಆ ಬೆರಳು ಐಸ್ ಕ್ರೀಮ್ ಫ್ಯಾಕ್ಟರಿಯ ಗಾಯಗೊಂಡ ನೌಕರನದ್ದು ಎಂದು ಹೇಳಲಾಗುತ್ತಿದೆ.
ಯುಮ್ಮೋ ಐಸ್ ಕ್ರೀಂನ ಪುಣೆ ಕಾರ್ಖಾನೆಯ ಉದ್ಯೋಗಿ ಅಪಘಾತದಲ್ಲಿ ಬೆರಳಿಗೆ ಗಾಯ ಮಾಡಿಕೊಂಡಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಅಪಘಾತ ನಡೆದ ದಿನವೇ ಐಸ್ ಕ್ರೀಂನಲ್ಲಿ ಬೆರಳಿನ ತುಣುಕು ಪತ್ತೆಯಾಗಿರುವುದು ತನಿಖೆಯಿಂದ ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪೊಲೀಸರು ಡಿಎನ್‌ಎ ಪರೀಕ್ಷೆಗೆ ಮಾದರಿಗಳನ್ನು ಕಳುಹಿಸಿದ್ದು, ವರದಿ ಬಂದ ಬಳಿಕವಷ್ಟೇ ಬೆರಳು ನೌಕರನದ್ದೇ ಅಥವಾ ಅಲ್ಲವೇ ಎಂಬುದನ್ನು ದೃಢಪಡಿಸಲಾಗುವುದು.

ಐಸ್ ಕ್ರೀಮ್ನಲ್ಲಿ ಬೆರಳು ಹೇಗೆ ಸಿಕ್ಕಿತು?
ಮುಂಬೈನ 26 ವರ್ಷದ ವೈದ್ಯ ಓರ್ಲೆಮ್ ಬ್ರಾಂಡನ್ ಸೆರರಾವ್ ತನ್ನ ಸಹೋದರಿ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಐಸ್‌ಕ್ರೀಂನಲ್ಲಿ ಬೆರಳನ್ನು ಕಂಡುಕೊಂಡಿದ್ದಾರೆ. ಅರ್ಧ ಐಸ್‌ಕ್ರೀಮ್ ತಿಂದ ಬಳಿಕ ಅವರ ಬಾಯಯಲ್ಲಿ ಗಟ್ಟಿಯಾದ ತುಂಡೊಂದು ಸಿಕ್ಕಿದೆ.
ಅಡಿಕೆ ಅಥವಾ ಚಾಕಲೇಟ್ ಇರಬಹುದೆಂದು ಅವರು ಭಾವಿಸಿದ್ದರು. ಅದು ಏನೆಂದು ಪರೀಕ್ಷಿಸಲು ಉಗುಳಿದ್ದಾರೆ. ಆಗ ಅದು ಮಾನವನ ಕೈ ಬೆರಳು ಎಂದು ತಿಳಿದು ಬಂದಿದೆ ಎಂದು ಡಾ.ಸೆರರಾವ್ ಹೇಳಿದರು.
ನಾನು ಒಬ್ಬ ವೈದ್ಯೆ. ಹಾಗಾಗಿ ದೇಹದ ಅಂಗಾಂಗಗಳು ಹೇಗೆ ಕಾಣುತ್ತವೆ ಎಂಬುದು ನನಗೆ ಗೊತ್ತಿದೆ ಎಂದು ಡಾ.ಸೆರಾರಾವ್ ಹೇಳಿದರು. ನಾನು ಅದನ್ನು ಎಚ್ಚರಿಕೆಯಿಂದ ಪರಿಶೀಲಿಸಿದಾಗ ನನಗೆ ಬೆರಳಿನ ಉಗುರುಗಳು ಮತ್ತು ಬೆರಳಚ್ಚುಗಳನ್ನು ನೋಡಿದೆ.

ಅದು ಹೆಬ್ಬೆರಳು ತೋರುತ್ತಿತ್ತು. ನನಗೆ ಶಾಕ್ ಆಯಿತು. ನನಗೆ ಈಗಲೂ ಯಾವುದೇ ಆಹಾರ ನೋಡಿದರೂ ಆ ಬೆರಳು ನೆನಪಾಗುತ್ತದೆ. ಅದರಿಂದ ಹೊರಬರಲು ಆಗುತ್ತಿಲ್ಲ ಎಂದು ವೈದ್ಯರು ಹೇಳಿಕೊಂಡಿದ್ದಾರೆ.












Click it and Unblock the Notifications