Get Updates
Get notified of breaking news, exclusive insights, and must-see stories!

ಯೋಗಿ ಆದಿತ್ಯ ನಾಥ್ ಉ.ಪ್ರ ಸಿಎಂ; ಮೌರ್ಯ, ಶರ್ಮಾ ಡಿಸಿಎಂ

ಭಾರೀ ಕುತೂಹಲ ಕೆರಳಿಸಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಸ್ಥಾನಕ್ಕೆ ಯೋಗಿ ಆದಿತ್ಯ ನಾಥ್ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಶನಿಾರ ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಆದಿತ್ಯ ನಾಥ್ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆರಿಸಲಾಯಿತು.

ಲಕ್ನೋ, ಮಾರ್ಚ್ 18: ಉತ್ತರಪ್ರದೇಶ ಮುಖ್ಯಮಂತ್ರಿ ಪಟ್ಟಕ್ಕಾಗಿ ನಡೆದಿರುವ ಪೈಪೋಟಿಯಲ್ಲಿ ಯೋಗಿ ಆದಿತ್ಯನಾಥ್ ಗೆಲವು ಸಾಧಿಸಿದ್ದಾರೆ. ಯೋಗಿ ಅವರನ್ನು ಉತ್ತರ ಪ್ರದೇಶದ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆರಿಸಲಾಗಿದೆ.

ಬಿಜೆಪಿಯ ಹಿರಿಯ ನಾಯಕರಾದ ಕೇಶವ್ ಪ್ರಸಾದ್ ಮೌರ್ಯ, ದಿನೇಶ್ ಶರ್ಮಾ ಅವರನ್ನು ಉಪ ಮುಖ್ಯಮಂತ್ರಿಗಳನ್ನಾಗಿ ಘೋಷಿಸಲಾಗಿದೆ.

Yogi

ಮಾರ್ಚ್ 19ರಂದು ಮಧ್ಯಾಹ್ನ ಸುಮಾರು 2:30ರ ಸುಮಾರಿಗೆ ಯೋಗಿ ಉತ್ತರ ಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಅವರ ಸಚಿವ ಸಂಪುಟವೂ ಅಂದೇ ಅಸ್ವಿತ್ವಕ್ಕೆ ಬರಲಿದೆ.

Who will be next UP CM? Catch the action Live here

ಶನಿವಾರ (ಮಾರ್ಚ್ 18) ಸಂಜೆ ಲಕ್ನೋದಲ್ಲಿ ನಡೆದ ಬಿಜೆಪಿ ಪಕ್ಷದ ಮುಖಂಡರ ಸಭೆಯಲ್ಲಿ ಸಿಎಂ ಗಾದಿ ರೇಸ್ ನಲ್ಲಿ ಮಂಚೂಣಿಯಲ್ಲಿದ್ದ ಯೋಗಿ ಆದಿತ್ಯನಾಥ, ಕೇಶವ್ ಪ್ರಸಾದ್ ಮೌರ್ಯ ಮುಂತಾದವರು ಭಾಗವಹಿಸಿದ್ದರು. ಬೆಳಗ್ಗೆ ಯೋಗಿ ಆದಿತ್ಯನಾಥ್ ಅವರು ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ನಂತರ ಲಕ್ನೋಗೆ ಬಂದಿದ್ದರು.

Who will be next UP CM? Catch the action Live here

ಪ್ರಕಾಶ್ ಪಂತ್, ಮದನ್ ಕೌಶಿಕ್, ಯಶ್ಪಾಲ್ ಆರ್ಯ, ಸುಬೋಧ್ ಉನಿಯಾಲ್, ರೇಖಾ ಆರ್ಯ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವುದು ಖಚಿತವಾಗಿದೆ. ಈ ನಡುವೆ ಕೇಂದ್ರ ಸಚಿವ ಮನೋಜ್ ಸಿನ್ಹಾ ಅವರ ಹೆಸರು ಸಿಎಂ ಸ್ಥಾನಕ್ಕೆ ಕೇಳಿ ಬಂದಿತ್ತು. ಆದರೆ, ನಾನು ಸಿಎಂ ಸ್ಥಾನದ ರೇಸಿನಲ್ಲಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ಶನಿವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಟೈಮ್ ಲೈನ್:

6.07: ಬಿಜೆಪಿ ಶಾಸಕಾಂಗ ಸಭೆಯಲ್ಲಿ ಯೋಗಿ ಆದಿತ್ಯನಾಥ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಅಧಿಕೃತ ಘೋಷಣೆ

5.55: ಬಿಜೆಪಿ ಶಾಸಕಾಂಗ ಸಭೆ ಶುರು

5.35: ಯೋಗಿ ಆದಿತ್ಯನಾಥ್, ಭೂಪೇಂದ್ರ ಯಾದವ್, ಓಂ ಮಾಥುರ್, ಕೇಶವ್ ಮೌರ್ಯ ಹಗೂ ಸುನಿಲ್ ಬನ್ಸಾಲ್ ಪ್ರತ್ಯೇಕ ಸಭೆ ನಡೆಸಿದ್ದಾರೆ.
5.30: ಯೋಗಿ ಅದಿತ್ಯನಾಥ್, ಮೌರ್ಯ ಹಾಗೂ ಅನುಪ್ರಿಯ ಪಟೇಲ್ ಅವರ ಜತೆ ಪ್ರತ್ಯೇಕ ಸಭೆ ನಡೆಸಿದ ವೆಂಕಯ್ಯ ನಾಯ್ಡು.
5.15: ಲಕ್ನೋಗೆ ಬಂದ ಕಲ್ ರಾಜ್ ಮಿಶ್ರಾ, ಸ್ವತಂತ್ರ ಸಿಂಗ್ ಅವರ ಹೆಸರು ಕೂಡಾ ಪರಿಗಣನೆ.

5.00: ಡಿಸಿಎಂ ಪಟ್ಟಕ್ಕೆ ಮಹೇಶ್ ಶರ್ಮ ಹೆಸರು ಕೂಡಾ ಸೇರ್ಪಡೆ. ಚರ್ಚೆ ಜಾರಿಯಲ್ಲಿದೆ.
4.55: ಯೋಗಿ ಆದಿತ್ಯಾನಾಥ್ ಸಿಎಂ, ಕೇಶವ್ ಪ್ರಸಾದ್ ಮೌರ್ಯ ಹಾಗೂ ಮನೋಜ್ ಸಿನ್ಹಾ ಡಿಸಿಎಂ ಆಗುವ ಸಾಧ್ಯತೆ.

4.50: ಕೇಶವ್ ಪ್ರಸಾದ್ ಮೌರ್ಯ, ಸುಬೋಧ್ ಉನಿಯಾಲ್ ಸೇರಿದಂತೆ ಅನೇಕ ಮುಖಂಡರು ಶಾಸಕಾಂಗ ಸಭೆಗೆ ಬರುತ್ತಿದ್ದಾರೆ.

4.40: ಯೋಗಿ ಆದಿತ್ಯಾನಾಥ್ ಅವರು ಉತ್ತರಪ್ರದೇಶದ ಸಿಎಂ ಎಂದು ಎನ್ ಡಿ ಟಿವಿ ಬ್ರೇಕಿಂಗ್ ನ್ಯೂಸ್ ನೀಡುತ್ತಿದೆ.

4.35: ಉತ್ತರಪ್ರದೇಶದಲ್ಲಿ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ನೇಮಿಸಲು ಹೈಕಮಾಂಡ್ ಸಿದ್ಧತೆ ನಡೆಸಿದೆ. ಕೇಶವ ಪ್ರಸಾದ್ ಮೌರ್ಯ ಹಾಗೂ ದಿನೇಶ್ ಶರ್ಮಾ ಅವರು ಡಿಸಿಎಂ ಆಗುವ ಸಾಧ್ಯತೆಯಿದೆ.

(ಒನ್ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+