Pinky Mali: ಅಜಿತ್ ಪವಾರ್ ಅವರೊಂದಿಗೆ ಮೃತಪಟ್ಟ ವಿಮಾನ ಕ್ಯಾಬಿನ್ ಸಿಬ್ಬಂದಿ ಪಿಂಕಿ ಮಾಲಿ ಯಾರು?
ಮುಂಬೈ: ಬಾರಾಮತಿ ವಿಮಾನ ನಿಲ್ದಾಣದಲ್ಲಿಲ್ಯಾಂಡಿಂಗ್ ವೇಳೆ ಪತನಗೊಂಡ ವಿಶೇಷ ವಿಮಾನದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರೊಂದಿಗೆ ಐವರು ಮೃತಪಟ್ಟಿದ್ದಾರೆ. ಇದರಲ್ಲಿ ಉತ್ತರ ಪ್ರದೇಶ ಮೂಲಕ ಕ್ಯಾಬಿನ್ ಸಿಬ್ಬಂದಿ 29 ವರ್ಷದ ಪಿಂಕಿ ಮಾಲಿ (Pinky Mali) ಸಹ ಒಬ್ಬರು. ಇಂದಿನ ಅಪಘಾತದಲ್ಲಿ ಪಿಂಕಿ ಮಾಲಿ ಬದುಕು ದುರಂತ ಅಂತ್ಯ ಕಂಡ ಘಟನೆಯು, ಮಹಾರಾಷ್ಟ್ರದಲ್ಲಿನ ಅವರ ಕುಟುಂಬ ಮತ್ತು ಉತ್ತರ ಪ್ರದೇಶದಲ್ಲಿರುವ ಅವರ ಹಳ್ಳಿ ಜನರಿಗೆ ಬರ ಸಿಡಿಲು ಬಂಡಿದಂತಾಗಿತ್ತು. ಕುಟುಂಬಸ್ಥರು ಪಿಂಕಿ ಮಾಲಿ ಸಾವಿನಿಂದ ತೀವ್ರ ಆಘಾತಕ್ಕೊಳಗಾಗಿದ್ದಾರೆ.
ಯಾರು ಈ ಪಿಂಕಿ ಮಾಲಿ?
ಮುಂಬೈನ ವರ್ಲಿಯ ಸೆಂಚುರಿ ಕ್ವಾರ್ಟರ್‌ನಲ್ಲಿ ಕುಟುಂಬ ಸಮೇತರಾಗಿ ಪಿಂಕಿ ಮಾಲಿ ವಾಸಿಸುತ್ತಿದ್ದರು. ವಿಮಾನದಲ್ಲಿ ಕ್ಯಾಬಿನ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಮಹಾರಾಷ್ಟ್ರ ಪಂಚಾಯತಿ ಚುನಾವಣಾ ಪ್ರಚಾರ ಸಂಬಂಧ ಅಜಿತ್ ಪವಾರ್ ಅವರ ತೆರಳುತ್ತಿದ್ದ ವಿಶೇಷ ವಿಮಾನದಲ್ಲಿ ಈ ಸಿಬ್ಬಂದಿ ಪಿಂಕ್ ಮಾಲಿ ಅವರು ಇದ್ದರು. ಈ ವಿಮಾನ ಅಪಘಾತಕ್ಕೀಡಾದ ಕಾರಣ ಯಾರು ಬದುಕುಳಿಯದಿರುವುದು ವಿಷಾಧನೀಯ.

ಪೂರ್ವ ಉತ್ತರ ಪ್ರದೇಶದ ಜಿಲ್ಲಾ ಕೇಂದ್ರದಿಂದ 40 ಕಿಲೋ ಮೀಟರ್ ದೂರದಲ್ಲಿ ಭೈನ್ಸಾ ಗ್ರಾಮದಲ್ಲಿ ಪಿಂಕಿ ಅವರ ಪೂರ್ವಜರ ಮನೆ ಇದೆ. ಈ ಗ್ರಾಮದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಆಗಾಗ ಪಿಂಕಿ ಮಾಲಿ ಅವರು ಹೋಗಿ ಬರುತ್ತಿದ್ದರು. ಸ್ಥಳೀಯ ನಿವಾಸಿ ಅಶೋಕ್ ಸಿಂಗ್ ಅವರು ಪಿಂಕಿಯ ತಂದೆ ನಿಯಮಿತವಾಗಿ ಗ್ರಾಮಕ್ಕೆ ಭೇಟಿ ನೀಡುತ್ತಿದ್ದರು. ಪಿಂಕಿ ಮಾಲಿ ಅವರು ಕಡೆಯದಾಗಿ ಸುಮಾರು ಒಂದೂವರೆ ವರ್ಷದ ಹಿಂದೆ ತಮ್ಮ ಹಳ್ಳಿಗೆ ಭೇಟಿ ನೀಡಿದ್ದರು.
ಮಗಳು ಪಿಂಕಿ ಜತೆಗಿನ ಕೊನೆ ಸಂಭಾಷಣೆ ನೆನೆದ ತಂದೆ ಕಣ್ಣೀರು
ಪಿಂಕ್ ಮಾಲಿಯ ಅಜ್ಜ ಬಾಬು ರಾಮ್ ಕಳೆದ ವರ್ಷವೇ ನಿಧನರಾಗಿದ್ದರು. ಈ ವರ್ಷ ಪಿಂಕಿ ಮಾಲಿ ನಿಧನರಾಗಿದ್ದು, ಕುಟುಂಬಸ್ಥರನ್ನು ತುಂಬಾ ಘಾಸಿ ಮಾಡಿದೆ. ಪಿಂಕಿ ಮಾಲಿ ಅವರ ಮದುವೆ ಆಗಿದ್ದು, ಕುಟುಂಬಸ್ಥರೆಲ್ಲರು ಸದ್ಯ ಮುಂಬೈನಲ್ಲಿ ವಾಸಿಸುತ್ತಿದ್ದಾರೆ. ಶಿವಸೇನಾ ನಾಯಕರಾದ ತಂದೆ ಶಿವ ಕುಮಾರ್ ಮಾಲಿ ಅವರು ಮಗಳು ಪಿಂಕಿ ಜೊತೆಗಿನ ಕೊನೆ ಸಂಭಾಷಣೆ ನೆನಪಿಸಿಕೊಂಡು ಕಣ್ಣೀರಿಟ್ಟಿದ್ದಾರೆ. ಅಜಿತ್ ಪವಾರ್ ಅವರೊಂದಿಗೆ ವಿಮಾನದಲ್ಲಿ ತೆರಳಿದ ಬಳಿಕ ಅವರೊಂದಿಗೆ ಮಾತನಾಡಿಸುವುದಾಗಿ ತಂದೆಗೆ ಪಿಂಕಿ ಹೇಳಿದ್ದನ್ನು ನೆನೆದು ಅವರು ಭಾವುಕರಾದರು. ಮಗಳೊಂದಿಗಿನ ಅದೇ ಕೊನೆಯ ಸಂಭಾಷಣೆಯಾಗಿದೆ.
ಪಿಂಕಿಯ ಸಹೋದರ ಕರಣ್ ಅವರು ಇಂದು ಬೆಳಗ್ಗೆ ಆಕೆಯೊಂದಿಗೆ ಮಾತನಾಡಿದ್ದರು. ತಾನು ಬಾರಾಮತಿಯಿಂದ ನಾಂದೇಡ್‌ಗೆ ಪ್ರಯಾಣಿಸುವುದಾಗಿ ಪಿಂಕಿ ತಿಳಿಸಿದ್ದರು. ಪಿಂಕಿಗೆ ಪ್ರೀತಿ ಎಂಬ ಸಹೋದರಿ ಇದ್ದಾರೆ. ಈ ಮೂವರು ಒಡಹುಟ್ಟಿದವರು ಮಹಾರಾಷ್ಟ್ರದಲ್ಲಿ ತಮ್ಮ ಶಿಕ್ಷಣ ಪೂರ್ಣಗೊಳಿಸಿ ವಿವಿಧ ವೃತ್ತಿಗಳಲ್ಲಿ ತೊಡಗಿದ್ದಾರೆ. ವಿಮಾನ ಪತನ ಮುನ್ನ ಪಿಂಕಿಯೊಂದಿಗೆ ನಡೆದ ಸಂಭಾಷಣೆಯೇ ಕೊನೆಯದ್ದಾಗಿದೆ.
ಎರಡನೇ ಬಾರಿಯ ಲ್ಯಾಂಡಿಂಗ್ ಯತ್ನ ವೇಳೆ ಅಪಘಾತ
ಇಂದು ಬೆಳಗ್ಗೆ 8.45 ರ ಸುಮಾರಿಗೆ ಅಜಿತ್ ಪವಾರ್ ಅವರು ಇದ್ದ ವಿಶೇಷ ವಿಮಾನ ಅಪಘಾತಕ್ಕೀಡಾಯಿತು. ಪೈಲಟ್ ಇಳಿಯುವಾಗ ಸರಿಯಾಗಿ ಲ್ಯಾಂಡಿಂಗ್ ಜಾಗ ಕಾಣಿಸಿಲ್ಲ. ಆಗ ಮತ್ತೊಮ್ಮೆ ಲ್ಯಾಂಡಿಂಗ್‌ಗೆ ಪ್ರಯತ್ನಿಸಿದರು. ಈ ವೇಳೆ ವಿಮಾನವು ರನ್‌ವೇ ಯಲ್ಲಿ ಅಪಘಾತಕ್ಕೀಡಾಗಿ ಬೆಂಕಿಗೆ ಆಹುತಿಯಾಯಿತು. ಅಜಿತ್ ಪವಾರ್, ಭದ್ರತಾ ಸಿಬ್ಬಂದಿ, ಇಬ್ಬರು ಪೈಲಟ್‌ಗಳು ಮತ್ತು ಕ್ಯಾಬಿನ್ ಸಿಬ್ಬಂದಿ ಸದಸ್ಯೆ ಪಿಂಕಿ ಮಾಲಿ ಸ್ಥಳದಲ್ಲೇ ಮೃತಪಟ್ಟರು.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications