ಅಭಿನಂದನ್ ತಾಯ್ನಾಡಿಗೆ: ಯಾರು ಏನು ಹೇಳಿದರು?

Recommended Video

      Surgical Strike 2: ಅಭಿನಂದನ್ ತಾಯ್ನಾಡಿಗೆ: ಯಾರು ಏನು ಹೇಳಿದರು? | Oneindia Kannada

      ಬೆಂಗಳೂರು, ಫೆಬ್ರವರಿ 01: ಪಾಕಿಸ್ತಾನದ ವಶದಲ್ಲಿದ್ದ ಭಾರತದ ವಾಯುಸೇನೆಯ ಧೀರ ವಿಂಗ್ ಕಮಾಂಡರ್ ಅಭಿನಂದನ್ ಅವರು ಭಾರತಕ್ಕೆ ವಾಪಸ್ಸಾಗಿರುವುದು ದೇಶಕ್ಕೆ ಸಂತಸ ತಂದಿದೆ.

      ಎಲ್ಲೆಡೆ ಸಂಭ್ರಮಾಚರಣೆ ಜೋರಾಗಿ ನಡೆಯುತ್ತಿದೆ. ಭಾರತದ ಜನ ಭಾವುಕ ಕ್ಷಣವನ್ನು ಅನುಭವಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನ್ ಅವರ ವಾಪಸ್ಸಾತಿಗೆ ಅಭಿನಂದನೆಗಳ ಸುರಿಮಳೆಯೇ ಸುರಿಯುತ್ತಿದೆ.

      ಪಕ್ಷಬೇಧವನ್ನು ಮರೆತು ಸರ್ವರೂ ಸಹ ಅಭಿನಂದನ್ ಅವರ ವಾಪಸ್ಸಾತಿಗೆ ಸಂತಸ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮನ್, ಅರುಣ್ ಜೇಟ್ಲಿ, ಸರ್ವರೂ ಸಹ ಅಭಿನಂದನ್ ವಾಪಸ್ಸಾತಿಗೆ ಸಂತಸ ವ್ಯಕ್ತಪಡಿಸಿದ್ದಾರೆ.

      ಭಾರತಕ್ಕೆ ಮರಳಿ ಸ್ವಾಗತ, ವಂದೇ ಮಾತರಂ: ಮೋದಿ

      ಅಭಿನಂದನ್ ಬಿಡುಗಡೆ ಬಗ್ಗೆ ಟ್ವೀಟ್ ಮಾಡಿರುವ ಮೋದಿ, ಭಾರತಕ್ಕೆ ಮರಳಿ ಸ್ವಾಗತ ಅಭಿನಂದನ್, ನೀವು ತೋರಿದ ಧೈರ್ಯಕ್ಕೆ ದೇಶ ಹೆಮ್ಮೆ ಪಡುತ್ತದೆ, ನಮ್ಮ ಸೇನೆಯು 130 ಕೋಟಿ ಭಾರತೀಯರಿಗೆ ಆದರ್ಶ, ವಂದೇ ಮಾತರಂ ಎಂದು ಟ್ವೀಟ್ ಮಾಡಿದ್ದಾರೆ.

      'ನಿಮ್ಮ ಧೈರ್ಯ, ಸಮತೋಲನ ಎಲ್ಲರಿಗೂ ಮಾದರಿ'

      ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಟ್ವೀಟ್ ಮಾಡಿ, 'ನಿಮ್ಮ ಧೈರ್ಯ, ಸಮತೋಲಿತ ವರ್ತನೆ, ಅಲ್ಲಿ ತೋರಿದ ಘನತೆ ಹೆಮ್ಮೆ ಪಡುವಂತೆ ಮಾಡಿವೆ, ನಿಮಗೆ ಮತ್ತೆ ಸ್ವಾಗತ ಮತ್ತು ಪ್ರೀತಿ' ಎಂದಿದ್ದಾರೆ.

      ನಿರ್ಮಲಾ ಸೀತಾರಾಮನ್ ಟ್ವೀಟ್

      'ವಿಂಗ್ ಕಮಾಂಡರ್ ಅಭಿನಂದನ್ ನಿಮ್ಮ ಬಗ್ಗೆ ಹೆಮ್ಮೆ ಇದೆ, ನಿಮ್ಮ ಶೌರ್ಯ ಮತ್ತು ದಿಟ್ಟತನವನ್ನು ಇಡೀಯ ದೇಶ ಕೊಂಡಾಡುತ್ತಿದೆ. ನಿಮ್ಮ ಶಾಂತಚಿತ್ತತೆ ನಿಮ್ಮ ಮುಖದಲ್ಲಿ ಕಾಣುತ್ತಿತ್ತು, ನೀವು ಭಾರತದ ಯುವಕರಿಗೆ ಸ್ಪೂರ್ಥಿ, ವಂದೇ ಮಾತರಂ' ಎಂದು ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮನ್ ಟ್ವೀಟ್ ಮಾಡಿದ್ದಾರೆ.

      ಭಾರತವೇ ಸಂಭ್ರಮಿಸುತ್ತಿದೆ: ಜೇಟ್ಲಿ

      ಹಣಕಾಸು ಸಚಿವ ಅರುಣ್ ಜೇಟ್ಲಿ ಟ್ವೀಟ್ ಮಾಡಿ, ನೀವು ವಾಪಸ್ ಬಂದಿರುವುದನ್ನು ಇಡೀಯ ಭಾರತವೇ ಸಂಭ್ರಮಿಸುತ್ತಿದೆ. ನಿಮ್ಮ ಶೌರ್ಯ, ಸಮಚಿತ್ತತೆಗೆ ನಾನು ವಂದಿಸುತ್ತೇನೆ' ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಟ್ವೀಟ್ ಮಾಡಿದ್ದಾರೆ.

      'ನೀವು ಮತ್ತೆ ಶೌರ್ಯ, ಉತ್ಸಾಹದಿಂದ ಕೆಲಸ ಮಾಡುವಂತಾಗಲಿ'

      ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಟ್ವೀಟ್ ಮಾಡಿ, ಪ್ರೀತಿಯ ಅಭಿನಂದನ್ ಅವರೇ, ನಿಮ್ಮ ಶೌರ್ಯವನ್ನು ಇಡೀಯ ದೇಶ ಮೆಚ್ಚಿಕೊಂಡಿದೆ. ನೀವು ಮತ್ತೆ ಅದೇ ಶೌರ್ಯ, ಸಾಹಸ, ಉತ್ಸಾಹದಿಂದ ಭಾರತೀಯ ವಾಯುಸೇನೆಯ ಜೊತೆಗೆ ಕೆಲಸ ಮಾಡುವಂತಾಗಲಿ' ಎಂದು ಟ್ವೀಟ್ ಮಾಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+