ಬಯಲಿಗೆ ಬಂತು ರಾಮ್ ರಹೀಂ ಬಾಬಾನ ಮತ್ತೊಂದು ರಾಸಲೀಲೆ?

By: ಒನ್ ಇಂಡಿಯಾ ನ್ಯೂಸ್ ಡೆಸ್ಕ್
Subscribe to Oneindia Kannada

ಚಂಡೀಗಢ, ಆಗಸ್ಟ್ 28: ಅತ್ಯಾಚಾರ ಪ್ರಕರಣದಲ್ಲಿ ಬಂಧಿತವಾಗಿರುವ ಹರ್ಯಾಣದ ಡೇರಾ ಸಚ್ಚಾ ಸೌದಾ ಪಂಗಡದ ಗುರು ಬಾಬಾ ರಾಮ್ ರಹೀಂ ಅವರ ಅಸಭ್ಯ ಪ್ರಕರಣಗಳು ಇದೀಗ ಪುಂಖಾನುಪುಂಖವಾಗಿ ಹೊರಬೀಳುತ್ತಲೇ ಇವೆ. ಇದೀಗ ಹೊರಬಿದ್ದಿರುವ ಹೊಸ ವಿಚಾರವೆಂದರೆ, ಅವರ ದತ್ತು ಪುತ್ರಿಯೊಂದಿಗೆ ಅವರು ಲೈಂಗಿಕ ಸಂಬಂದ ಹೊಂದಿದ್ದರೆಂಬ ಆರೋಪ ಹಾಗೂ ಆ ವಿಷಯ ನ್ಯಾಯಾಲಯದ ಮೆಟ್ಟಿಲನ್ನೂ ಏರಿತ್ತು ಎಂಬುದು.

   Ram Rahim Sentencing 10 Years Punishment | Oneindia kannada

   ರಾಮ್ ರಹೀಮ್ ಶಿಕ್ಷೆ ಪ್ರಕಟ, ಕಂಡಲ್ಲಿ ಗುಂಡು ಆದೇಶ

   ತಾವು ಮಗಳೆಂದು ದತ್ತು ಪಡೆದಿದ್ದ ಹನಿಪ್ರೀತ್ ಸಿಂಗ್ ಎಂಬ ಯುವತಿಯೊಂದಿಗೇ ರಾಮ್ ರಹೀಂ ಬಾಬಾ ಅಸಭ್ಯವಾಗಿ ವರ್ತಿಸುತ್ತಿದ್ದರು, ಹನಿಪ್ರೀತ್ ಸಿಂಗ್ ಅವರನ್ನು ಲೈಂಗಿಕವಾಗಿ ಬಳಸಿಕೊಳ್ಳುವಂತೆ ಪ್ರಯತ್ನಿಸಿದ್ದರೆಂದು ಹನಿಪ್ರೀತ್ ಸಿಂಗ್ ಪತೆಯೇ ಹಿಂದೆ ದೂರು ನೀಡಿದ್ದರೆಂದು ಐಬಿಟಿ ಜಾಲತಾಣ ವರದಿ ಮಾಡಿದೆ.

   Who is Honeypreet Insan? Here is what we know about Dera chief's adopted daughter

   ಹನಿಪ್ರೀತ್ ಸಿಂಗ್ ಅವರು ಕೆಲ ವರ್ಷಗಳ ಹಿಂದೆ ವಿಶ್ವಾಸ್ ಗುಪ್ತಾ ಎಂಬ ಉದ್ಯಮಿಯನ್ನು ಮದುವೆಯಾಗಿದ್ದರು. ಆದರೆ, 2009ರಲ್ಲಿ ತಮಗೆ ವರದಕ್ಷಿಣೆ ಕಿರುಕುಳ ನೀಡಲಾಗುತ್ತಿದೆ ಎಂದು ಆಕೆ ರಾಮ್ ರಹೀಂ ಬಾಬಾ ಅವರಲ್ಲಿ ದುಃಖ ತೋಡಿಕೊಂಡಿದ್ದರು.

   ಹೈದರಾಬಾದ್‌ನಲ್ಲಿ 55 ಎಕರೆ ಭೂಮಿ ಹೊಂದಿದ್ದಾರೆ ರಾಮ್ ರಹೀಮ್

   ಆಗ, ಆಕೆಯನ್ನು ರಾಮ್ ರಹೀಂ ಮಗಳೆಂದೂ, ವಿಶ್ವಾಸ್ ಅವರನ್ನು ಅಳಿಯನೆಂದೂ ದತ್ತು ಪಡೆದಿದ್ದರು. ಕೆಲ ದಿನಗಳ ನಂತರ ಎಲ್ಲವೂ ಸರಿಯಾಗೇ ಇತ್ತು. ಆದರೆ, ಆನಂತರ ವಿಶ್ವಾಸ್ ಹಾಗೂ ಬಾಬಾ ರಾಮ್ ರಹೀಂ ನಡುವೆ ವಿರಸ ಏರ್ಪಟ್ಟಿತು. ಇದಕ್ಕೆ ಇಬ್ಬರ ನಡುವಿನ ವ್ಯವಹಾರಿಕ ಒಪ್ಪಂದಗಳೇ ಕಾರಣ ಎನ್ನಲಾಗಿದೆ.

   ಗುರ್ಮೀತ್ ರಾಮ್ ರಹೀಮ್ ಸಿಂಗ್ ಈಗ ಖೈದಿ ನಂಬರ್ 1997

   2011ರಲ್ಲಿ ಬಾಬಾ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿದ್ದ ವಿಶ್ವಾಸ್, ತಮ್ಮ ಪತ್ನಿ ಹನಿಪ್ರೀತ್ ಸಿಂಗ್ ಅವರನ್ನು ಬಾಬಾ ರಹೀಂ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾನೆಂದು ಆರೋಪಿಸಿದ್ದರು. ಆದರೆ, ಈ ಕೇಸ್ ವಿಚಾರಣೆ ಹಂತದಲ್ಲಿದ್ದಾಗಲೇ ಇದನ್ನು ನ್ಯಾಯಾಲಯದ ಹೊರಗೆ ಸಂಧಾನದ ಮೂಲಕ ಇತ್ಯರ್ಥಗೊಳಿಸಲಾಯಿತು. ವಿಶ್ವಾಸ್ ಅವರು ಈ ಕೇಸನ್ನು ಹಿಂಪಡೆದರು.

   ರಾಮ್ ರಹೀಮ್ ಸಿಂಗ್ ಬೆಂಗಳೂರಿನ ಆಶ್ರಮಕ್ಕೆ ಬೀಗ

   ಹೀಗೆ, ಆಶ್ರಮದಲ್ಲಿರುವ ಅನೇಕ ಮಹಿಳೆಯರ ಮೇಲೆ ಬಾಬಾ ರಾಮ್ ರಹೀಂ ಕೆಟ್ಟ ದೃಷ್ಟಿ ಬೀರುತ್ತಿದ್ದ ಎಂದು ಹೆಸರನ್ನೇಳಲು ಇಚ್ಛಿಸದ ಆಶ್ರಮದ ಸಿಬ್ಬಂದಿಯೊಬ್ಬರು ತನಗೆ ತಿಳಿಸಿರುವುದಾಗಿ ಐಬಿಟಿ ಜಾಲತಾಣ ವರದಿ ಮಾಡಿದೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Speculations are rife that Honeypreet Insan might take a more important position in the controversial sect since the future of her 'dad' Baba Ram Rahim hangs in balance.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ