Kulwinder Kaur: ನೂತನ ಸಂಸದೆ ಕಂಗನಾ ರನೌತ್ ಕೆನ್ನೆಗೆ ಹೊಡೆದ ಕುಲ್ವಿಂದರ್ ಕೌರ್ ಬಗ್ಗೆ ನಿಮಗೆಷ್ಟು ಗೊತ್ತು?
ಚಂಡೀಗಢ, ಜೂನ್. 07: ಚಂಡೀಗಢ ವಿಮಾನ ನಿಲ್ದಾಣದಲ್ಲಿ ಮಹಿಳಾ ಸಿಐಎಸ್‌ಎಫ್ ಕಾನ್‌ಸ್ಟೆಬಲ್ ಕುಲ್ವಿಂದರ್ ಕೌರ್ ಅವರು ಬಾಲಿವುಡ್ ನಟಿ ಮತ್ತು ಹಿಮಾಚಲ ಪ್ರದೇಶದ ಮಂಡಿಯಿಂದ ಆಯ್ಕೆಯಾದ ಭಾರತೀಯ ಜನತಾ ಪಕ್ಷದ ಸಂಸದೆ ಕಂಗನಾ ರನೌತ್ ಅವರಿಗೆ ಕಪಾಳಮೋಕ್ಷ ಮಾಡಿದ್ದಾರೆ.
ರೈತರ ಪ್ರತಿಭಟನೆಯ ಬಗ್ಗೆ ಕಂಗನಾ ರನೌತ್ ನೀಡಿದ್ದ ಹೇಳಿಕೆಗಳಿಂದ ಅಸಮಾಧಾನಗೊಂಡಿರುವ ಕುಲ್ವಿಂದರ್ ಕೌರ್, ನೂತನ ಸಂಸದೆ ಮೇಲೆ ಹಲ್ಲೆ ಮಾಡಿದ್ದಾರೆ. ಈಗಾಗಲೇ ಅವರನ್ನು ಅಮಾನತುಗೊಳಿಸಲಾಗಿದೆ ಮತ್ತು ಅವರ ವಿರುದ್ಧ ಎಫ್ಐಆರ್ ಕೂಡ ದಾಖಲಿಸಲಾಗಿದೆ. ವಿಮಾನ ನಿಲ್ದಾಣದ ಭದ್ರತೆಯನ್ನು ಒದಗಿಸುವ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಘಟನೆಯ ಬಗ್ಗೆ ನ್ಯಾಯಾಲಯದ ತನಿಖೆಗೆ ಆದೇಶಿಸಿದೆ. ಇದರ ಬೆನ್ನಲ್ಲೇ ಈ ಕುಲ್ವಿಂದರ್ ಕೌರ್ ಯಾರು ಎನ್ನುವ ಬಗ್ಗೆ ಜನರಲ್ಲಿ ಕುತೂಹಲ ಮೂಡಿದೆ.

CISF ಕಾನ್‌ಸ್ಟೆಬಲ್ ಕುಲ್ವಿಂದರ್ ಕೌರ್ ಯಾರು?
* ಕುಲ್ವಿಂದರ್ ಕೌರ್ ಅವರು 2009 ರಲ್ಲಿ ಸಿಐಎಸ್ಎಫ್ ಸೇರ್ಪಡೆಗೊಂಡರು ಮತ್ತು 2021 ರಿಂದ ಚಂಡೀಗಢ ವಿಮಾನ ನಿಲ್ದಾಣದಲ್ಲಿ CISF ಪಡೆಯ ವಾಯುಯಾನ ಭದ್ರತಾ ಗುಂಪಿನಲ್ಲಿದ್ದಾರೆ.
* 35 ವರ್ಷದ ಕುಲ್ವಿಂದರ್ ಕೌರ್ ಪಂಜಾಬ್‌ನ ಸುಲ್ತಾನ್‌ಪುರ ಲೋಧಿಯವರು.
* ಕಳೆದ ಎರಡು ವರ್ಷಗಳಿಂದ ಆಕೆಯನ್ನು ಚಂಡೀಗಢ ವಿಮಾನ ನಿಲ್ದಾಣದಲ್ಲಿ ನಿಯೋಜಿಸಲಾಗಿದೆ.
* ಕುಲ್ವಿಂದರ್ ಕೌರ್ ಪತಿ ಕೂಡ ಸಿಐಎಸ್‌ಎಫ್ ಸಿಬ್ಬಂದಿ.
* ಕುಲ್ವಿಂದರ್ ಕೌರ್ ಸಹೋದರ ಶೇರ್ ಸಿಂಗ್ ರೈತ ನಾಯಕ ಮತ್ತು ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ ಸಂಘಟನಾ ಕಾರ್ಯದರ್ಶಿ.
* ಕುಲ್ವಿಂದರ್ ಕೌರ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ.
* ಕುಲ್ವಿಂದರ್ ಕೌರ್ ವಿರುದ್ಧ ಈವರೆಗೆ ಯಾವುದೇ ವಿಜಿಲೆನ್ಸ್ ವಿಚಾರಣೆ ಅಥವಾ ಅಶಿಸ್ತಿನ ಶಿಕ್ಷೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕುಲ್ವಿಂದರ್ ಕೌರ್ ಪತಿ ಕೂಡ ಅದೇ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದಾರೆ.
DO YOU SUPPORT HER??#हम_CISF_बहन_के_साथ_हैं
— ᴍʀ. ʀᴀꜱʜɪᴅ (@harun_ul_roshid) June 6, 2024
Agree 👍
Kulvinder Kaur who slapped BJP MP & Actress #KanganaRanaut
The Real Jhansi ki Rani 🔥🔥🔥#kulwinderKaur #kulwinder #chandigarhairport #FarmersProtest #cisf pic.twitter.com/TBqRnSsT9q
ಚಂಡೀಗಢ ವಿಮಾನ ನಿಲ್ದಾಣದಲ್ಲಿ ನಡೆದದ್ದು ಏನು?
ಘಟನೆ ಬಳಿಕ ವಿಡಿಯೋ ಮಾಡಿದ್ದ ನಟಿ ಕಂಗನಾ ರನೌತ್, "ನನಗೆ ಮಾಧ್ಯಮಗಳು ಮತ್ತು ನನ್ನ ಹಿತೈಷಿಗಳಿಂದ ಸಾಕಷ್ಟು ಫೋನ್ ಕರೆಗಳು ಬರುತ್ತಿವೆ. ಮೊದಲನೆಯದಾಗಿ, ನಾನು ಸುರಕ್ಷಿತವಾಗಿದ್ದೇನೆ, ನಾನು ಸಂಪೂರ್ಣವಾಗಿ ಚೆನ್ನಾಗಿದ್ದೇನೆ. ಚಂಡೀಗಢ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ಈ ಘಟನೆ ನಡೆದಿದೆ. ಸೆಕ್ಯುರಿಟಿ ಚೆಕ್ ಮುಗಿಸಿ ನಾನು ಹೊರಗೆ ಬಂದ ಕ್ಷಣದಲ್ಲಿ ಮತ್ತೊಂದು ಕ್ಯಾಬಿನ್‌ನಲ್ಲಿದ್ದ ಭದ್ರತಾ ಸಿಬ್ಬಂದಿ ನನ್ನ ಕಡೆ ಬಂದು ನನ್ನ ಕೆನ್ನೆಗೆ ಹೊಡೆದು ನಿಂದಿಸಲು ಪ್ರಾರಂಭಿಸಿದರು" ಎಂದಿದ್ದಾರೆ.
"ನಾನು ಅವರನ್ನು (ಸಿಐಎಸ್ಎಫ್ ಜವಾನ್) ಏಕೆ ಹೀಗೆ ಮಾಡಿದೆ ಎಂದು ಕೇಳಿದಾಗ, ಅವರು ರೈತರ ಪ್ರತಿಭಟನೆಯನ್ನು ಬೆಂಬಲಿಸುವುದಾಗಿ ಹೇಳಿದರು. ನಾನು ಸುರಕ್ಷಿತವಾಗಿದ್ದೇನೆ. ಆದರೆ, ನನ್ನ ಕಳವಳ ಏನೆಂದರೆ ಪಂಜಾಬ್‌ನಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆ ಮತ್ತು ಉಗ್ರವಾದವನ್ನು ನಾವು ಅದನ್ನು ಹೇಗೆ ನಿಭಾಯಿಸುತ್ತೇವೆ..? ಎಂಬುದು" ಎಂದು ಹೇಳಿದ್ದಾರೆ.
ಕಾನ್ ಸ್ಟೇಬಲ್ ಕುಲ್ವಿಂದರ್ ಕೌರ್ ಹೇಳಿದ್ದೇನು?
ಕೆಲವೇ ನಿಮಿಷಗಳಲ್ಲಿ, ಕುಲ್ವಿಂದರ್ ಕೌರ್ ಉದ್ರೇಕಗೊಂಡ ಜನರೊಂದಿಗೆ ಮಾತನಾಡುತ್ತಿರುವ ಮತ್ತೊಂದು ವೀಡಿಯೊ ವೈರಲ್ ಆಯಿತು. ಅದರಲ್ಲಿ "ಇವರು ಪ್ರತಿಭಟನೆ ಮಾಡುತ್ತಿರುವ ಮಹಿಳಾ ರೈತರು ತಲಾ 100 ರೂ.ಗಾಗಿ ರೈತರ ಪ್ರತಿಭಟನೆಗೆ ಕುಳಿತಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಅಲ್ಲಿ ಇದ್ದ ರೈತ ಮಹಿಳೆಯರಲ್ಲಿನನ್ನ ತಾಯಿ ಕೂಡ ಕುಳಿತಿದ್ದರು. ನನ್ನ ತಾಯಿಗೆ ಆದ ಅವಮಾನವನ್ನು ಸಹಿಸಲಾಗಲಿಲ್ಲ" ಎಂದು ಹೇಳಿದ್ದಾರೆ.












Click it and Unblock the Notifications