ಕಾಂಗ್ರೆಸ್ಸಿನ ಜಿ-23 ತಂಡದಲ್ಲಿ ಇರುವ ನಾಯಕರು ಯಾರು?
ನವದೆಹಲಿ, ಮಾರ್ಚ್ 11: ಭಾರತದಲ್ಲಿ ಒಂದು ಕಾಲದಲ್ಲಿ ಮಿಂಚಿದ ಕಾಂಗ್ರೆಸ್ ಪಕ್ಷ ಇತ್ತೀಚಿನ ಚುನಾವಣೆಗಳಲ್ಲಿ ಮರೆಯಾಗಿ ಹೋಗುತ್ತಿದೆ. ಪಂಚ ರಾಜ್ಯಗಳ ಚುನಾವಣೆಯ ಫಲಿತಾಂಶವು ಈ ಮಾತಿಗೆ ಮತ್ತಷ್ಟು ಪುಷ್ಟಿ ನೀಡುತ್ತಿದೆ. ಕಾಂಗ್ರೆಸ್ ಹೀನಾಯ ಸೋಲಿನ ಬೆನ್ನಲ್ಲೇ ಮತ್ತೊಮ್ಮೆ ಜಿ-23 ನಾಯಕರು ಆಕ್ಟಿವ್ ಆಗಿದ್ದಾರೆ.
ಐದು ರಾಜ್ಯಗಳಲ್ಲಿ ನಾಲ್ಕು ಕಡೆಗಳಲ್ಲಿ ಭಾರತೀಯ ಜನತಾ ಪಕ್ಷ ಗೆಲುವು ಸಾಧಿಸಿದೆ. ಕಾಂಗ್ರೆಸ್ ಮುಷ್ಠಿಯಲ್ಲಿದ್ದ ಪಂಜಾಬ್ ಕೂಡ ಆಪ್ ಪಾಲಾಗಿದೆ. ರಾಷ್ಟ್ರೀಯ ಪಕ್ಷ ಎನಿಸಿರುವ ಕಾಂಗ್ರೆಸ್ ಈಗಲಾದರೂ ಎಚ್ಚೆತ್ತುಕೊಳ್ಳಬೇಕಿದೆ. ತಕ್ಷಣವೇ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಕರೆಯಬೇಕು, ಎಐಸಿಸಿ ಅಧ್ಯಕ್ಷರ ಗಾದಿಗೆ ಶೀಘ್ರ ಚುನಾವಣೆ ನಡೆಸಿ ಹೊಸ ಅಧ್ಯಕ್ಷರನ್ನು ನಡೆಸಬೇಕು ಎಂದು ಜಿ-23 ನಾಯಕರು ದಂಡು ಒತ್ತಾಯಿಸುತ್ತಿದೆ.
ಕಾಂಗ್ರೆಸ್ ಪ್ರತಿಬಾರಿ ಎಡವಿದಾಗ ಇದೊಂದು ಜಿ-23 ಎಂಬ ನಾಯಕರ ತಂಡ ಎದ್ದು ನಿಲ್ಲುತ್ತದೆ. ಕಾಂಗ್ರೆಸ್ಸಿನಲ್ಲಿಯೇ ಹುಟ್ಟಿಕೊಂಡ ಈ ಜಿ-23 ತಂಡದಲ್ಲಿ ಇರುವ ನಾಯಕರು ಯಾರು ಯಾರು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಕಾಂಗ್ರೆಸ್ಸಿನ ಜಿ-23 ತಂಡದಲ್ಲಿರುವ ನಾಯಕರು ಯಾರು?:
1. ಭೂಪಿಂದರ್ ಸಿಂಗ್ ಹೂಡಾ, ಪ್ರಸ್ತುತ ಹರಿಯಾಣ ವಿಧಾನಸಭೆಯ ವಿರೋಧ ಪಕ್ಷದ ನಾಯಕ. ಇವರು 2005 ರಿಂದ 2014 ರವರೆಗೆ ಎರಡು ಬಾರಿ ಹರಿಯಾಣದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.
2. ರಾಜಿಂದರ್ ಕೌರ್ ಭಟ್ಟಾಲ್, ಇವರು 1996ರಲ್ಲಿ ಪಂಜಾಬ್‌ನ ಮುಖ್ಯಮಂತ್ರಿಯಾಗಿದ್ದರು. ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದ ಮೊದಲ ಮತ್ತು ಇದುವರೆಗೆ ಏಕೈಕ ಮಹಿಳೆಯಾಗಿದ್ದು, ಜನವರಿ 2004ರಲ್ಲಿ, ಅವರು ಪಂಜಾಬ್‌ನ ಉಪಮುಖ್ಯಮಂತ್ರಿ ಸ್ಥಾನವನ್ನು ಸ್ವೀಕರಿಸಿದ್ದರು.
3. ಎಂ ವೀರಪ್ಪ ಮೊಯ್ಲಿ, 1992ರಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಮೊಯ್ಲಿ ವೃತ್ತಿಯಲ್ಲಿ ವಕೀಲರಾಗಿದ್ದು, ಕರ್ನಾಟಕ ಹೈಕೋರ್ಟ್ ಮತ್ತು ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ಅಭ್ಯಾಸ ಮಾಡಿದ್ದಾರೆ. ಇವರು ಎರಡು ಬಾರಿ ಕಾನೂನು ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.
4. ಪೃಥ್ವಿರಾಜ್ ಚವಾಣ್, 2010ರಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಒತ್ತಾಯದ ಮೇರೆಗೆ ಇವರು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದು, ಯಾವುದೇ ನಂಟಿಲ್ಲದ ಅಶೋಕ್ ಚವಾಣ್ ಇವರ ಉತ್ತರಾಧಿಕಾರಿಯಾದರು. 2014 ರಲ್ಲಿ ಆಡಳಿತಾರೂಢ ಎನ್‌ಸಿಪಿ-ಕಾಂಗ್ರೆಸ್ ಮೈತ್ರಿಕೂಟ ವಿಭಜನೆಯಾದ ನಂತರ ಇವರು ಮಹಾರಾಷ್ಟ್ರದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
5. ಗುಲಾಂ ನಬಿ ಆಜಾದ್, ನವೆಂಬರ್ 2005 ರಿಂದ ಜುಲೈ 2008 ರವರೆಗೆ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.
6. ಕಪಿಲ್ ಸಿಬಲ್, ಮೂರು ಬಾರಿ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಮತ್ತು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಈ ಹಿಂದೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ವಿವಿಧ ಸಚಿವಾಲಯಗಳ ಚುಕ್ಕಾಣಿ ಹಿಡಿದಿದ್ದರು.
7. ಮನೀಶ್ ತಿವಾರಿ, ಮಾಹಿತಿ ಮತ್ತು ಪ್ರಸಾರ ಖಾತೆಯ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದರು. ತಿವಾರಿ ಕೂಡ ವೃತ್ತಿಯಲ್ಲಿ ವಕೀಲರಾಗಿದ್ದು, ಪ್ರಸ್ತುತ ಭಾರತದ ಸುಪ್ರೀಂ ಕೋರ್ಟ್ ಮತ್ತು ದೆಹಲಿ ಹೈಕೋರ್ಟ್ ಮತ್ತು ಪಂಜಾಬ್ ಹಾಗೂ ಹರಿಯಾಣದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.
8. ಸಂಸತ್ ಸದಸ್ಯರಾದ ವಿವೇಕ್ ಟಂಖಾ, ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ಹಿರಿಯ ವಕೀಲರಾಗಿದ್ದಾರೆ. ಮಧ್ಯಪ್ರದೇಶದ ಕಿರಿಯ ಅಡ್ವೊಕೇಟ್ ಜನರಲ್‌ಗಳಲ್ಲಿ ಒಬ್ಬರಾಗಿದ್ದು, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ನಡುವಿನ ವಿವಾದಗಳನ್ನು ಪರಿಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಪಟ್ಟಿಯಲ್ಲಿ ಮಾಜಿ ಕೇಂದ್ರ ಸಚಿವರು, ಸಿಡಬ್ಲ್ಯೂಸಿ ಸದಸ್ಯರು
9. ಮುಕುಲ್ ವಾಸನಿಕ್
10. ಜಿತಿನ್ ಪ್ರಸಾದ್
11. ಆನಂದ್ ಶರ್ಮಾ
12. ಪಿ ಜೆ ಕುರಿಯನ್
13. ಅಜಯ್ ಸಿಂಗ್
14. ರೇಣುಕಾ ಚೌಧರಿ
15. ಮಿಲಿಂದ್ ದಿಯೋರಾ
16. ಶಶಿ ತರೂರ್
17. ಸಂದೀಪ್ ದೀಕ್ಷಿತ್
18. ರಾಜ್ ಬಬ್ಬರ್
19. ಅರವಿಂದ್ ಸಿಂಗ್ ಲವ್ಲಿ
20. ಕೌರ್ ಸಿಂಗ್ ಠಾಕೂರ್
21. ಕುಲದೀಪ್ ಶರ್ಮಾ
22. ಯೋಗಾನಂದ್ ಶಾಸ್ತ್ರಿ












Click it and Unblock the Notifications