Get Updates
Get notified of breaking news, exclusive insights, and must-see stories!

ಸಬೆರಾ (SABERA) 2025 ಪ್ರಶಸ್ತಿ ಪ್ರದಾನ ಸಮಾರಂಭ: ಒಂದೇ ವೇದಿಕೆಯಲ್ಲಿ ಅಭಿವೃದ್ಧಿ ಹರಿಕಾರರು

ಪ್ರಸಕ್ತ 2025ರ ಸಾಲಿನ ಎಂಟನೇ ಆವೃತ್ತಿಯ 'ಸಬೆರಾ' (SABERA) ಪ್ರಶಸ್ತಿ ಪ್ರದಾನ ಸಮಾರಂಭವು ದೆಹಲಿಯ ಇಂಡಿಯಾ ಹ್ಯಾಬಿಟ್ಯಾಟ್ ಸೆಂಟರ್‌ನಲ್ಲಿ ಯಶಸ್ವಿಯಾಗಿ ಜರುಗಿತು. ಭಾರತದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ನಾಯಕರು, ಹೊಸ ಆಲೋಚನೆಗಾರರು ಮತ್ತು ವಿವಿಧ ಸಂಸ್ಥೆಗಳ ಮುಖ್ಯಸ್ಥರು ಒಂದೇ ವೇದಿಕೆಯಲ್ಲಿ ಸೇರಿದ್ದರು. ಯುಎನ್ ಮಹಿಳಾ ಪ್ರಶಸ್ತಿ ವಿಜೇತ ಸಂಸ್ಥೆಯಾದ 'ಸಿಂಪ್ಲಿ ಸುಪರ್ಣಾ ಮೀಡಿಯಾ ನೆಟ್‌ವರ್ಕ್' ವತಿಯಿಂದ ಈ ಕಾರ್ಯಕ್ರಮ ನಡೆಸಲಾಯಿತು. ಕೇವಲ ಹಣಗಳಿಕೆ ಅಥವಾ ಲಾಭಕ್ಕಿಂತ ಹೆಚ್ಚಾಗಿ, ಸಮಾಜದ ಮೇಲೆ ಒಳ್ಳೆಯ ಪರಿಣಾಮ ಬೀರುವ ಕೆಲಸಗಳನ್ನು ಗುರುತಿಸಿ ಗೌರವಿಸುವುದೇ ಸಬೆರಾ ಪ್ರಶಸ್ತಿಯ ಪ್ರಮುಖ ಉದ್ದೇಶವಾಗಿದೆ.

ಹೆಚ್ಚು ವಿಶೇಷತೆಯಿಂದ ಕೂಡಿದ ಈ ಕಾರ್ಯಕ್ರಮವು ಅದ್ಧೂರಿಯಾಗಿ ನಡೆಯಿತು. ಮಲ್ಟಿಪ್ಲೆಕ್ಸ್ ಒಂದರಲ್ಲಿ ಸಿಬ್ಬಂದಿಯಾಗಿ ಕೆಲಸ ಮಾಡುವ ವ್ಯಕ್ತಿಯ ಪುತ್ರಿ ನೈನಾ ಕುಮಾರಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಾಮಾನ್ಯ ಅಥವಾ ಹಿಂದುಳಿದ ಹಿನ್ನೆಲೆಯಿಂದ ಬಂದವರಿಗೆ ವೇದಿಕೆ ಕಲ್ಪಿಸಲಾಯಿತು. ಅಂತವರ ಕಥೆಗಳನ್ನು ಜಗತ್ತಿಗೆ ತಿಳಿಸುವುದರಲ್ಲಿ ಸಬೆರಾ ಬದ್ಧತೆ ಪ್ರದರ್ಶಿಸಿದೆ. ಇದರ ಸಂಸ್ಥಾಪಕಿ ಸುಪರ್ಣಾ ಚಡ್ಡಾ ಅವರು, "ಸಮಾಜದ ಏಳಿಗೆಗೆ, ಅಭಿವೃದ್ಧಿಗೆ ಜವಾಬ್ದಾರಿಯುತ ಕಥೆಗಳನ್ನು ಹೇಳಿವುದು. ಎಲ್ಲರಿಗೂ ಯೋಗಕ್ಷೇಮಕ್ಕಾಗಿ ಶ್ರಮಿಸಲು ಈ ವೇದಿಕೆ ಸದಾ ಕಲ್ಪಿಸಿಕೊಡಲಾಗುತ್ತದೆ ಎಂದು ತಿಳಿಸಿದರು.

Where Purpose Meets Progress SABERA 2025 Celebrates India s Changemakers Driving impact

ಮುಂದುವರಿದು ಮಾತನಾಡಿದ ಸುಪರ್ಣಾ ಚಡ್ಡಾ ಅವರು, ಸಣ್ಣ ಹಳ್ಳಿಗಳಿಂದ ಹಿಡಿದು ದೊಡ್ಡ ಕಂಪನಿಗಳ ಬೋರ್ಡ್‌ರೂಮ್‌ಗಳವರೆಗೆ, ಯಾರೆಲ್ಲಾ ಸದ್ದಿಲ್ಲದೆ ಜನರ ಜೀವನವನ್ನು ಬದಲಾಯಿಸಲು ಶ್ರಮಿಸುತ್ತಿದ್ದಾರೋ ಅವರೆಲ್ಲ ದೇಶದ ಭವಿಷ್ಯದ ನಿಜ ಶಿಲ್ಪಿಗಳು ಎಂದು ಬಣ್ಣಿಸಿದರು. ಅಂತವರ ಸಾಧನೆಗೈದವರಿಗೆ ಸನ್ಮಾನಿಸುವುದು, ಗೌರವಿಸುವುದು ನಮ್ಮ ಕರ್ತವ್ಯ ಎಂದರು.

ವೇದಿಕೆಯಲ್ಲಿ ಮಹತ್ವದ ವಿಚಾರಗಳ ಬಗ್ಗೆ ಸಂವಾದ

ಕಾರ್ಯಕ್ರಮದಲ್ಲಿ ಸುಪರ್ಣಾ ಚಡ್ಡಾ ಮತ್ತು ಪ್ರಸಿದ್ಧ ಲೇಖಕ ಗುರುಚರಣ್ ದಾಸ್ ಅವರ ನಡುವಿನ ಮಹತ್ವದ ಸಂವಾದವು ಮತ್ತೊಂದು ಪ್ರಮುಖ ಆಕರ್ಷಣೆ ಆಯಿತು. 'ನೈತಿಕತೆ, ಜೀವನದ ಅರ್ಥ ಮತ್ತು ಉತ್ತಮ ಜೀವನ' ಎಂಬುದರ ಬಗ್ಗೆ ಚರ್ಚಿಸಿದರು. ಕಾರ್ಯಕ್ರಮದಲ್ಲಿ ನೀಡಲಾದ ಪ್ರಶಸ್ತಿಗಳಿಗೆ ಒಂದು ಉತ್ತಮ ಹಿನ್ನೆಲೆ ಒದಗಿಸಿದೆ. ಗುರುಚರಣ್ ದಾಸ್ ಅವರು, "ನಮ್ಮ ಜೀವನಕ್ಕೆ ಒಂದು ಅರ್ಥ ನೀಡುವ ಕೆಲಸಗಳ ಮಾಡುವುದರಿಂದ ಸಿಗುವ ಸಂತೋಷವೇ ಅಪಾರ, ಅನನ್ಯವಾದ್ದದ್ದು. ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ನಾಲ್ಕು ಗುರಿಗಳೇ ಉತ್ತಮ ಜೀವನದ ಆಧಾರ, ಇವನ್ನು ಅರಿತರೆ ಜೀವನ ಸಮೃದ್ಧ ಎಂದು ವಿವರಿಸಿದರು.

ಪ್ರಶಸ್ತಿಗಳಿಗೆ ಆಯ್ಕೆಯಲ್ಲಿನ ತಿರ್ಪುಗಾರರ ಶ್ರಮ ಅಪಾರ

ಅರ್ಹ ವ್ಯಕ್ತಿಗಗಳು ಹಾಗೂ ಮತ್ತು ಸಂಸ್ಥೆಗಳನ್ನು ಪ್ರಶಸ್ತಿಗಾಗಿ ರಾಧಿಕಾ ಪಟೇಲ್, ರಶ್ವ ಪರಿಹಾರ್, ವಿಕಾಸ್ ಭಾಟಿಯಾ, ರಶ್ಮಿ ಸೋನಿ ಮತ್ತು ಅಭಿ ಮಹಾಪಾತ್ರ ಅವರು ಆಯ್ಕೆ ಮಾಡಿದರು. ತೀರ್ಪುಗಾರರ ಶ್ರಮವನ್ನು ಸುಪರ್ಣಾ ಚಡ್ಡಾ ಶ್ಲಾಘಿಸಿದರು. ಕಟ್ಟುನಿಟ್ಟಾದ ಮೌಲ್ಯಮಾಪನದ ಮೂಲಕ ಪಟ್ಟಿ ಸಿದ್ಧಪಡಿಸಿದ ಇವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಅಂತಿಮ ತೀರ್ಪುಗಾರರಾಗಿ (ಗ್ರ್ಯಾಂಡ್ ಜ್ಯೂರಿ) ಊರ್ವಶಿ ಪ್ರಸಾದ್, ರಾಜೀವ್ ಚಾಬಾ ಮತ್ತು ಗೀತಾ ಗೋಯೆಲ್ ಅವರ ಪಾತ್ರವು ನಿರ್ಣಾಯಕವಾಯಿತು.

ಖ್ಯಾತ ಪತ್ರಕರ್ತೆ ಭದ್ರ ಸಿನ್ಹಾ ಮತ್ತು ಕಾರ್ಪೋರೇಟ್ ಪ್ರಮುಖರಾದ ಗಾಯತ್ರಿ ಶರ್ಮಾ ಅವರು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು. ದುರ್ಗಾ ದೇವಿಯ ಒಂಬತ್ತು ಭಾವಗಳು 'ನವರಸ'ಗಳನ್ನು ಅವರು ಕಲಾತ್ಮಕವಾಗಿ ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರರಾದರು.

Where Purpose Meets Progress SABERA 2025 Celebrates India s Changemakers Driving impact

ದೇಶದ ಬದಲಾವಣೆ ಹರಿಕಾರರಿಗೆ ಪ್ರಶಸ್ತಿ, ಗೌರವ

ಸಮಾಜದಲ್ಲಿ ಬದಲಾವಣೆ ತರುವವರನ್ನು ಗುರುತಿಸಿ 2025ರ ಸಬೆರಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸುಸ್ಥಿರ ಅಭಿವೃದ್ಧಿ ಗುರಿ ಇಟ್ಟುಕೊಂಡು ಕಾರ್ಯ ನಿರ್ವಹಿಸುವ ಸಣ್ಣ ಉದ್ಯಮಗಳು, ಸಾಮಾಜಿಕ ನಾಯಕರು ಮತ್ತು ದೊಡ್ಡ ಕಂಪನಿಗಳನ್ನು ಗುರುತಿಸಲಾಗಿದೆ. ವಿಶೇಷವಾಗಿ, ಬುದ್ಧಿಮಾಂದ್ಯ ವಯಸ್ಕರಿಗಾಗಿ ದೀರ್ಘಕಾಲದ ಸೇವೆ ನೀಡುವ 'ಅಂಬಾ' (AMBA) ಸಂಸ್ಥೆ ಭಾರತಿ ಶ್ರೀನಿವಾಸನ್ ತ್ಯಾಜ್ಯ ನಿರ್ವಹಣೆಯ ಮೂಲಕ ಪರಿಸರ ಉಳಿಸುತ್ತಿರುವ 'ಕರೋ ಸಂಭವ'ದ ಪ್ರಾಂಶು ಸಿಂಗಲ್ ಮತ್ತು ಕಲೆ-ಸಂಸ್ಕೃತಿಯ ಮೂಲಕ ಕೆಲಸ ಮಾಡುತ್ತಿರುವ 'ಪ್ರಾಜೆಕ್ಟ್ ಫ್ಯೂಲ್'ನ ಆಯುಷಿ ಜೈಸ್ವಾಲ್ ಅವರಿಗೆ ಪ್ರಶಸ್ತಿ ಸಂದಿವೆ.

ಎಲೆಮರೆ ಕಾಯಿಗಳ ಸಾಧನೆ

ಕಡಿಮೆ ಹಣಕಾಸಿನ ನೆರವು ಇದ್ದರೂ (ವಾರ್ಷಿಕ 40 ಲಕ್ಷಕ್ಕಿಂತ ಕಡಿಮೆ ವಹಿವಾಟು), ಸ್ಥಳೀಯವಾಗಿ ಅದ್ಭುತ ಕೆಲಸ ಮಾಡುತ್ತಿರುವ ಸಂಸ್ಥೆಗಳನ್ನು ಗುರುತಿಸಲಾಗಿದೆ. ಹಿಮಾಲಯ ಭಾಗದ 'ಪ್ಲಾನೆಟ್ ಸ್ಪಿತಿ', ಉತ್ತರ ಪ್ರದೇಶದ ಗ್ರಾಮೀಣ ಭಾಗದ 'ಐವಿಲೇಜ್' (ಐವಿಲೇಜ್) ಮತ್ತು ಮಹಾರಾಷ್ಟ್ರದ ಹಳ್ಳಿಗಳಲ್ಲಿ ಕಾರ್ಯ ಪ್ರವೃತ್ತರಾದ 'ಜ್ಯೋತಿ ಬಹುದೇಶೀಯ ಸೇವಾಭಾವಿ ಸಂಸ್ಥೆ'ಗೆ ಸಬೆರಾ ಗೌರವಕ್ಕೆ ಪಾತ್ರವಾಗಿವೆ.

Where Purpose Meets Progress SABERA 2025 Celebrates India s Changemakers Driving impact

ಸಮಾಜದ ಏಳಿಗೆಗೆ ಮಾತ್ರವಲ್ಲದೇ ನೈಸರ್ಗಿಕ ಸಂಪನ್ಮೂಲಗಳಾದ ನೀರು, ಪರಿಸರ, ಶಿಕ್ಷಣ, ಆರೋಗ್ಯ ಮತ್ತು ಜೀವನೋಪಾಯ ಕ್ಷೇತ್ರಗಳಲ್ಲಿ ತಮ್ಮದೇ ಆದ ಕೆಲಸಗಳಿಂದ ಗುರುತಿಸಿಕೊಂಡ ವಿವಿಧ ಸಂಸ್ಥೆಗಳನ್ಮು ಸನ್ಮಾನಿಸಲಾಯಿತು. ಅದರಲ್ಲಿ ಯುನೈಟೆಡ್ ವೆ ಬೆಂಗಳೂರು, ದಿ ಹನ್ಸ್ ಫೌಂಡೇಶನ್, ಬನ್ಸಿಧರ್ ಮತ್ತು ಇಲಾ ಪಾಂಡಾ ಫೌಂಡೇಶನ್, ಹಿಂದೂಸ್ತಾನ್ ಯೂನಿಲಿವರ್, ಇಟಾಶಾ ಸೊಸೈಟಿ, ಕ್ರಾಫ್ಟಿಜನ್ ಫೌಂಡೇಶನ್, ರೋಡಿಸ್ ಮತ್ತು ಸುಶೇನಾ ಹೆಲ್ತ್ ಫೌಂಡೇಶನ್ ಗಳು ಸೇರಿವೆ.

ಗ್ರಾಮೀಣಾಭಿವೃದ್ಧಿ ಮತ್ತು ಲಿಂಗ ಸಮಾನತೆಗಾಗಿ ಶ್ರಮಿಸಿದ ರೋಶ್ನಿ ಫೌಂಡೇಶನ್, ಎಸ್‌ಬಿಐ ಫೌಂಡೇಶನ್‌ನ ವಿವಿಧ ಯೋಜನೆಗಳು (ಸಮ್ಮಾನ್, ಸಶಕ್ತಿ, ಗ್ರಾಮ), ಐವಿಲೇಜ್, ಜಲಚಕ್ರ ಇನ್ನೋವೇಶನ್ಸ್, ಪ್ರಿಸ್ಮ್ ಜಾನ್ಸನ್, ಹ್ಯೂಮನ್ ವೆಂಚರ್ಸ್ ಮತ್ತು ಹಕ್ದರ್ಶಕ್ ಸಂಸ್ಥೆಗಳ ಕಾರ್ಯಗಳನ್ನು ಈ ಕಾರ್ಯಕ್ರಮಗಳ ಮೂಲಕ ಸಮಾಜಕ್ಕೆ ಎತ್ತಿ ತೋರಿಸಲಾಗಿದೆ.

Where Purpose Meets Progress SABERA 2025 Celebrates India s Changemakers Driving impact

ಬುಡಕಟ್ಟು ಜನರಿಗೆ, ಸಣ್ಣ ರೈತರ ಹಿತ ಕಾಯ್ದ ಮತ್ತು ಅವರಿಗೆ ಗೌರವಯುತ ಜೀವನೋಪಾಯ ಕಲ್ಪಿಸಲು ಶ್ರಮಿಸಿದ ಆಶಿಶ್ ಮೊಂಡಲ್ (ಆಕ್ಷನ್ ಫಾರ್ ಸೋಶಿಯಲ್ ಅಡ್ವಾನ್ಸ್‌ಮೆಂಟ್ ಸಂಸ್ಥೆ) ಅವರಿಗೆ 'ಜೀವಮಾನ ಸಾಧನೆ' ಪ್ರಶಸ್ತಿ ನೀಡಿ ಇದೇ ವೇಳೆ ಸನ್ಮಾನಿಸಲಾಯಿತು. ಪರಿಸರ ಮತ್ತು ಸಾಮಾಜಿಕ ಜವಾಬ್ದಾರಿಗಳ (ESG) ಸಮರ್ಥ ಪಾಲನೆಗಾಗಿ ಹೀರೋ ಮೋಟೋಕಾರ್ಪ್ ಕಂಪನಿಗೆ ಪ್ರತಿಷ್ಠಿತ 'ಜವಾಬ್ದಾರಿಯುತ ವ್ಯಾಪಾರ ಟ್ರೋಫಿ' ನೀಡಲಾಯಿತು.

ಪಾಲುದಾರಿಕೆಯ ಹಿಂದೆ ಶಕ್ತಿಯುತ ಉದ್ದೇಶ

SABERATM 2025 ಕಾರ್ಯಕ್ರಮ ಸಂಸ್ಥೆಗಳ ಪಾಲುದಾರಿಕೆಯಲ್ಲಿ ನೇರವೇರಿತು. ಅದರಲ್ಲಿ ಅಮರ್ ಉಜಲಾ (ಡಿಜಿಟಲ್ ಮೀಡಿಯಾ ಪಾಲುದಾರ - ಹಿಂದಿ), ಒನ್‌ಇಂಡಿಯಾ (ಡಿಜಿಟಲ್ ಮೀಡಿಯಾ ಪಾಲುದಾರ - ಇಂಗ್ಲಿಷ್), ಸ್ಮೈಲ್ ಟ್ರೈನ್ (ಜ್ಞಾನ ಪಾಲುದಾರ), ಸಿರೋನಾ ಹೈಜೀನ್ (ಉಡುಗೊರೆ ಪಾಲುದಾರ) ಮತ್ತು ಹವಿಶ್ ಎಂ (ಸಮಾಲೋಚನಾ ಪಾಲುದಾರ) ಸೇರಿದಂತೆ ಹಲವು ಪಾಲುದಾರರು ಇದ್ದಾರೆ. ಅವರೆಲ್ಲ ದೇಶದ ಅಭಿವೃದ್ಧಿಗಾಗಿ ಸಬೆರಾವನ್ನು ಬೆಂಬಲಿಸುತ್ತಲೇ ಬಂದಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+