Chandrayaan 3: ಭಾರತದ ಹೆಮ್ಮೆಯ ಚಂದ್ರಯಾನ ನೌಕೆ ಈಗ ಎಲ್ಲಿ?
ಬೆಂಗಳೂರು, ಜುಲೈ 20: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮೈಲುಗಲ್ಲು ಸಾಧಿಸಲು ಮುಂದಾಗಿರುವ ಚಂದ್ರಯಾನ-3 ಯೋಜನೆಗೆ ಗುರುವಾರ ಮತ್ತೊಂದು ಹಂತ ಯಶಸ್ಸು ಲಭಿಸಲಿದೆ. ಮೂರನೇ ಕಕ್ಷೆಯನ್ನು ಸಮರ್ಪಕವಾಗಿ ದಾಟಿಸಿದ್ದ ಇಸ್ರೋ ಇಂದು ಮತ್ತೊಂದು ಹಂತಕ್ಕೆ ಚಂದ್ರಯಾನ-3 ಏರಿಸಲು ಸಜ್ಜಾಗಿದೆ.
ಭೂಮಿಯಿಂದ ನಭಕ್ಕೆ ಜಿಗಿದ ಚಂದ್ರಯಾನ 3 ಮೂರು ಹಂತ ಕಕ್ಷೆಗಳನ್ನು ಯಶಸ್ವಿಯಾಗಿ ದಾಟಿದೆ. ಇಂದು ಮತ್ತೊಂದು ಹಂತಕ್ಕೆ (Earth-bound perigee firing) ಬಾಹ್ಯಾಕಾಶ ನೌಕೆ ಏರಿಸುವ ಪ್ರಕ್ರಿಯೆಯನ್ನು ಇಂದು ಮಧ್ಯಾಹ್ನ 2-3 ಗಂಟೆಗೆವರೆಗೆ ಸಮಯ ನಿಗದಿ ಮಾಡಿದೆ. ಈ ಕಾರ್ಯಾಚರಣೆಗೆ ಇಸ್ರೋ ವಿಜ್ಞಾನಿಗಳು ಮತ್ತು ತಂತ್ರಜ್ಞರ ತಂಡ ಬಹಳ ಉತ್ಸುಕವಾಗಿದೆ. ಬೆಂಗಳೂರಿನ ಇಸ್ರೋ ಕೇಂದ್ರದಿಂದಲೇ ಈ ಕಾರ್ಯಾಚರಣೆ ನಡೆಯಲಿರುವುದು ಕರ್ನಾಟಕಕ್ಕೂ ಇದೊಂದು ಹೆಮ್ಮೆಯ ಸಂಗತಿಯಾಗಿದೆ.

ಅಮೆರಿಕಾ, ಚೀನಾ ಮತ್ತು ರಷ್ಯಾ ದೇಶಗಳಂತೆ ಭಾರತವು ಬಾಹ್ಯಾಕಾಶ ವಲಯದಲ್ಲಿ ಮಹತ್ತರ ಸಾಧನೆಯೊಂದನ್ನು ಸಾಧಿಸುವ ಸಲುವಾಗಿ ಇದೇ ತಿಂಗಳ ಜುಲೈ 14ರಂದು ಮಧ್ಯಾಹ್ನ 2:35ಕ್ಕೆ ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಸ್ಪೇಸ್ ಸೆಂಟರ್‌ನಿಂದ 'ಚಂದ್ರಯಾನ-3' ಉಡಾವಣೆ ಮಾಡಲಾಯಿತು. ಕೆಲವೇ ನಿಮಿಷಗಳಲ್ಲಿ ಇಸ್ರೋ ತಾವು ಯಶಸ್ವಿ ಉಡಾವಣೆ ಮಾಡಿದ್ದಾಗಿ ತಿಳಿಸಿತು.
Chandrayaan-3 Mission:
— ISRO (@isro) July 18, 2023
The mission is on schedule.
The third orbit-raising maneuver (Earth-bound perigee firing) is performed successfully from ISTRAC/ISRO, Bengaluru.
The next firing is planned for July 20, 2023, between 2 and 3 pm IST.
ಇಸ್ರೋದ ಚಂದ್ರಯಾನ 3 ಯೋಜನೆ ಪ್ರಕಾರ ಬಾಹ್ಯಾಕಾಶ ನೌಕೆಯನ್ನು ಬುಧವಾರ ಜುಲೈ 20ರಂದು 51400 X228 ಕಿಲೋ ಮೀಟರ್ ಕಕ್ಷೆ ತಲುಪಿದೆ. ಇದು ಮೂರನೇ ಕಕ್ಷೆಯಾಗಿದ್ದು, ಅದನ್ನು ಬೆಂಗಳೂರಿನಿದಲೇ ನಿರ್ವಹಿಸಲಾಗಿದೆ. ಇಂದು ಮತ್ತೊಂದು ಹಂತಕ್ಕೆ ನೌಕೆಯನ್ನು ಏರಿಸಲು ಇಸ್ರೋ ಸಜ್ಜಾಗಿದೆ. ಈ ಮೂಲಕ ಭಾರತೀಯರಲ್ಲಿ ಕೌತುಕ ಹೆಚ್ಚಾಗುವಂತೆ ಮಾಡಿದೆ.
ನಿರ್ದಿಷ್ಟ ಗುರಿಯತ್ತ ಸಾಗುತ್ತಿರುವ ನೌಕೆ
600 ಕೋಟಿ ರೂಪಾಯಿಗೂ ಅಧಿಕ ವೆಚ್ಚದ ಮತ್ತು 3,900 ಕೆಜೆ ತೂಕದ ಇಸ್ರೋ ಮಹಾತ್ವಾಕಾಂಕ್ಷೆಯ 'ಚಂದ್ರಯಾನ-3' ಬಾಹ್ಯಾಕಾಶ ನೌಕೆ ಮತ್ತು ರೋವರ್ ಹೊತ್ತ ರಾಕೆಟ್ ಬಾಹ್ಯಾಕಾಶ ತಲುಪಿದೆ. ತನ್ನ ನಿರ್ದಿಷ್ಟ ಗುರಿಯತ್ತ ಪ್ರಯಾಣ ಬೆಳೆಸಿರುವ ಈ ನೌಕೆ ಚಂದ್ರನ ದಕ್ಷಿಣ ಅಂಗಳಕ್ಕೆ ಮೃಧುವಾಗಿ ಉಡಾವಣೆಗೊಂಡ ದಿನದಿಂದ ಸುಮಾರು 42 ದಿನಕ್ಕೆ (ಆಗಸ್ಟ್ 23- ಇಲ್ಲವೇ 24ರಂದು) ತೆಗೆದುಕೊಳ್ಳಲಿದೆ ಎಂದು ಸ್ವತಃ ಇಸ್ರೋ ತಿಳಿಸಿದೆ.
ಭೂಮಿಯಿಂದ ಲಕ್ಷಾಂತರ ಕಿಲೋ ಮೀಟರ್ ದೂರದಲ್ಲಿರುವ ಬಾಹ್ಯಾಕಾಶ ನೌಕೆಯನ್ನು ನಿರ್ವಹಣೆಯನ್ನು ಬೆಂಗಳೂರಿನ ಪೀಣ್ಯ ಭಾಗದಲ್ಲಿರುವ ಇಸ್ರೋ ಕೇಂದ್ರವೇ ಮಾಡುತ್ತಿದೆ.
ಮೈಲುಗಲ್ಲು ಸಾಧಿಸಿದ ಮೊದಲ ರಾಷ್ಟ್ರ ಆಗಲಿದೆ?
ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನದ ಸಹಾಯದಿಂದ ಮಾನವ ಚಂದ್ರನ ಅಂಗಳಕ್ಕೆ ಕಾಲಿಟ್ಟಾರೆ. ವಿಶ್ವದಲ್ಲೇ ಈವರೆಗೆ ಚಂದ್ರಮ ಮೇಲೆ ಮೂರು ದೇಶಗಳ ಮಾತ್ರ ತನ್ನ ನೌಕೆ ಇಳಿಸಿವೆ. ಚಂದ್ರಯಾನ-3 ಯೋಜನೆಯಲ್ಲಿ ಭಾರತ ಯಶಸ್ಸು ಕಂಡಿದ್ದೇ ಆದಲ್ಲಿ ಚಂದ್ರನ ಮೇಲೆ ನೌಕೆ ಇಳಿಸಿದ 4ನೇ ರಾಷ್ಟ್ರ ಮತ್ತು ಚಂದ್ರನ ದಕ್ಷಿಣ ಮೇಲ್ಮೈನಲ್ಲಿ ನೌಕೆ ಇಳಿಸಿದ ವಿಶ್ವದ 1ನೇ ರಾಷ್ಟ್ರವಾಗಿ ಹೊರ ಹೊಮ್ಮಲಿದೆ.
ಚಂದ್ರನ ಮೇಲೆ ಲ್ಯಾಂಡರ್, ರೋವರ್ ನಿರೀಕ್ಷೆಯಂತೆ ಲ್ಯಾಂಡ್ ಆದರೆ, ಚಂದ್ರನಲ್ಲಿ ಮೇಲ್ಮೈ ವಾತಾವರಣ, ಮಣ್ಣು, ನೀರು, ಹೀಗೆ ಅನೇಕ ವಿಷಯಗಳ ಮೇಲೆ ಉಪಗ್ರಹ ಅಧ್ಯಯನ ಮಾಡಲಿದೆ. ಭಾರತದ ಮಟ್ಟಿಗೆ ಇದೊಂದು ಮೈಲುಗಲ್ಲಾಗಲಿದೆ.
2019ರಲ್ಲಿ ಇಸ್ರೋ ಚಂದ್ರಯಾನ 2 ಅನ್ನು ಇದೇ ಶ್ರೀಹರಿಕೋಟಾ ಸತೀಶ್ ಧವನ್ ಸ್ಪೇಸ್ ಸೆಂಟರ್‌ನಿಂದ ಉಡಾವಣೆ ಆಗಿತ್ತು. ಆದರೆ ಚಂದ್ರನ ಮೇಲೆ ಲ್ಯಾಂಡ್ ಆಗುವಾಗ ಒತ್ತಡ ಕಡಿಮೆ ಮಾಡುವಲ್ಲಿ ವಿಫಲವಾಗಿದ್ದ ಇಡಿ ಯೋಜನೆಯೇ ವಿಫಲವಾಯಿತು.
ಸಾಕಷ್ಟು ವೈಶಿಷ್ಟ್ಯಗಳ ಚಂದ್ರಯಾನ-3
ಈ ಭಾರಿ ಹಳೆಯ ವೈಫಲ್ಯಗಳೆಲ್ಲವನ್ನು ಗಮನದಲ್ಲಿಟ್ಟುಕೊಂಡಿರುವ ಇಸ್ರೋ ಒತ್ತಡ ನಿಯಂತ್ರಣಕ್ಕೆ ಐದು ಇಂಜಿನ್ ಅಳವಡಿಸಿದೆ, ಮೃಧುವಾಗಿ ಲ್ಯಾಂಡಿಂಗ್ ಆಗಲು 'ವೈಫಲ್ ಆಧಾರಿತ ವಿನ್ಯಾಸ 'ವನ್ನು ಅಳವಡಿಕೊಂಡಿದೆ. ಇನ್ನೂ ನೌಕೆಯ ಲ್ಯಾಂಡಿಂಗ್ ಗೆ ಅನುಕೂಲವಾಗುವಂತೆ ಅತ್ಯಧಿಕ ಇಂಧನವನ್ನು ರಾಕೆಟ್‌ನಲ್ಲಿ ತುಂಬಲಾಗಿತ್ತು. ಹೀಗೆ ಹತ್ತು ಹಲವು ಸುಧಾರಿತ ಕ್ರಮಗಳೊಂದಿಗೆ ಚಂದ್ರಯಾನ 3 ಉಡಾವಣೆಗೊಂಡಿದ್ದು, ಯಶಸ್ಸಿನ ಹಾದಿಯತ್ತ ಸಾಗಿದೆ. ಇಡಿ ಭಾರತವೇ 42 ದಿನ ಕಳೆಯುವುದನ್ನು ಕಾಯುತ್ತಿದ್ದು, ಭಾರತದ ಸಾಧನೆಯನ್ನು ಇತರ ದೇಶಗಳು ಸೂಕ್ಷ್ಮವಾಗಿ ಗಮನಿಸುತ್ತಿವೆ.












Click it and Unblock the Notifications