Bank Holiday: ದೇಶಾದ್ಯಂತ ಎಲ್ಲಾ ಬ್ಯಾಂಕ್‌ಗಳಿಗೆ ವಾರದಲ್ಲಿ ಎರಡು ದಿನ ರಜೆ ನಿಯಮ ಯಾವಾಗಿನಿಂದ ಜಾರಿ?
Bank Holiday: ಸಾಮಾನ್ಯವಾಗಿ ಇದೀಗ ದೇಶದಲ್ಲಿ ಎರಡು & ನಾಲ್ಕನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ದಿನಗಳಂದು ಬ್ಯಾಂಕ್‌ಗಳಿಗೆ ರಜೆ ಇರುತ್ತಿತ್ತು. ಆದರೆ, ಇದೀಗ ಉದ್ಯೋಗಿಗಳಿಗೆ ಅನುಕೂಲಕರ ಆಗುವಂತಹ ನಿಯಮವೊಂದು ಇದೇ ತಿಂಗಳಿನಿಂದ ಜಾರಿ ಆಗುವ ಸಾಧ್ಯತೆ ಇದೆ ಎನ್ನುವ ಮಾಹಿತಿಯೊಂದು ಲಭ್ಯವಾಗಿದೆ. ಹಾಗಾದ್ರೆ ಅದೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಜೂನ್ 2025 ಅಂದರೆ ಇದೇ ತಿಂಗಳಿನಿಂದ ಬ್ಯಾಂಕ್‌ಗಳ ಕಾರ್ಯ ಪದ್ಧತಿಯಲ್ಲಿ ಬದಲಾವಣೆ ಆಗುವ ಸಾಧ್ಯತೆಯಿದೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ. ಇದು ಈ ಹಿಂದೆಯೂ ಅಂದರೆ ಮಾರ್ಚ್‌ನಲ್ಲಿಯೂ ಹರಡಿದ್ದು, ಇದೀಗ ಮತ್ತೆ ಜೂನ್‌ನಲ್ಲಿ ಮುನ್ನಲೆಗೆ ಬಂದಿದೆ. ಆರ್‌ಬಿಐಯು ವಾರದಲ್ಲಿ ಎಲ್ಲಾ ಬ್ಯಾಂಕ್‌ಗಳಿಗೂ ವಾರದಲ್ಲಿ ಎರಡು ದಿನ ರಜೆ ನೀಡುವ ಹೊಸ ನಿಯಮವನ್ನು ಜಾರಿಗೊಳಿಸಲು ತೀರ್ಮಾನಿಸಿದೆ.

ಈ ನಿಯಮ ಜಾರಿ ಆದರೆ, ಬ್ಯಾಂಕ್‌ಗಳು ವಾರದಲ್ಲಿ ಕೇವಲ 5 ದಿನ ಕಾರ್ಯನಿರ್ವಹಿಸಲಿದ್ದು, ಉದ್ಯೋಗಿಗಳಿಗೆ ಎರಡು ದಿನ ರಜೆ ಸಿಕ್ಕಂತಾಗಲಿದೆ. ಇದೀಗ ಸದ್ಯ ದೇಶಾದ್ಯಂತ ಎರಡನೇ ಹಾಗೂ ನಾಲ್ಕನೇ ಶನಿವಾರದಂದು ಬ್ಯಾಂಕ್‌ಗಳಿಗೆ ರಜೆ ಇದೆ. ಆದರೆ, ಹೊಸ ನಿಯಮ ಜಾರಿಯಾದರೆ ಪ್ರತೀ ಶನಿವಾರ ಮತ್ತು ಭಾನುವಾರ ಬ್ಯಾಂಕ್‌ಗಳು ಮುಚ್ಚಲ್ಪಡಲಿವೆ.
ಸರ್ಕಾರಿ, ಖಾಸಗಿ ಬ್ಯಾಂಕ್‌ಗಳಲ್ಲೂ ಇದೇ ರೀತಿಯ ನಿಯಮ ಅನ್ವಯ ಆಗುತ್ತದೆ. ಕೇಂದ್ರ ಸರ್ಕಾರ ಈ ಬದಲಾವಣೆಯನ್ನು ಬದಲಿ ರೂಪದಲ್ಲಿ ಜಾರಿ ಮಾಡುವ ಚಿಂತನೆ ನಡೆಸಿದೆ. ಶನಿವಾರ ರಜೆ ಆಗುವುದರಿಂದ, ಗ್ರಾಹಕರಿಗೆ ಅಗತ್ಯ ವ್ಯವಹಾರಗಳಿಗೆ ಸಂಜೆ ವೇಳೆಗೆ ಬ್ಯಾಂಕ್ ತೆರೆಯಲು ಯೋಚನೆ ನಡೆಸಿದೆ. ಈ ಆಧಾರದಲ್ಲಿ ಎರಡು ಪಾಳಿಗಳಲ್ಲಿ ಕೆಲಸ ಮಾಡಿಸುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಎರಡು ದಿನ ರಜೆ: ಈ ನಿಯಮ ಜಾರಿಯಾದ್ರೆ, ಬ್ಯಾಂಕ್ ಉದ್ಯೋಗಿಗಳಿಗೆ ಶನಿವಾರ ಮತ್ತು ಭಾನುವಾರ ಎರಡು ದಿನ ನಿರಂತರ ರಜೆ ಸಿಕ್ಕಂತಾಗಲಿದೆ. ಆದರೆ ಉಳಿದ 5 ದಿನಗಳಲ್ಲಿ ಗ್ರಾಹಕರಿಗೆ ಯಾವುದೇ ತೊಂದರೆ ಆಗದಂತೆ ಹೆಚ್ಚು ಸಮಯ ಕೆಲಸ ಮಾಡಬೇಕಾಗುತ್ತದೆ. ಇದರಿಂದ ಗ್ರಾಹಕರಿಗೆ ಸೌಲಭ್ಯ ದೊರೆತರೆ, ಉದ್ಯೋಗಿಗಳಿಗೆ ಒಂದು ದಿನ ಹೆಚ್ಚುವರಿಯಾಗಿ ವಿಶ್ರಾಂತಿ ಸಿಕ್ಕಂತಾಗಲಿದೆ. ಕೇಂದ್ರ ಸರ್ಕಾರ ಮತ್ತು ಬ್ಯಾಂಕ್ ಸಂಘಟನೆಗಳು ಈ ಬಗ್ಗೆ ಶೀಘ್ರದಲ್ಲೇ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಸಾಮಾನ್ಯವಾಗಿ, ಸರ್ಕಾರಿ ರಜೆ ದಿನಗಳಂದು ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಇನ್ನೂ ಕೆಲವು ರಜೆಗಳನ್ನು ಸ್ಥಳೀಯವಾಗಿ ನಿರ್ಧರಿಸಲಾಗುತ್ತದೆ. ಇದನ್ನು ಹೊರತುಪಡಿಸಿ ದೇಶಾದ್ಯಂತ ಎಲ್ಲಾ ಬ್ಯಾಂಕ್‌ಗಳಿಗೆ ಅನ್ವಯ ಆಗುವಂತೆ ವಾರದಲ್ಲಿ ಶನಿವಾರ ಹಾಗೂ ಭಾನುವಾರ ಎರಡು ದಿನ ರಜೆ ನೀಡುವ ನಿಯಮ ಯಾವಾಗ ಜಾರಿಗೆ ಬರಲಿದೆ ಎಂದು ಉದ್ಯೋಗಿಗಳು ಕಾತರದಿಂದ ಕಾದು ಕುಳಿತುಕೊಂಡಿದ್ದಾರೆ.












Click it and Unblock the Notifications